ಟ್ರೋಲ್‌ಗೆ ಗುರಿಯಾದ ರಶ್ಮಿಕಾ

ಬೆಂಗಳೂರು,ಫೆ.೨೭-ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಮತ್ತೆ ಟ್ರೋಲ್‌ಗೆ ಗುರಿಯಾಗಿದ್ದಾರೆ.
ಜೀ ಸಿನಿಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಶ್ಮಿಕಾ ಮಂದಣ್ಣ ಅವರು ಕಪ್ಪುಡುಗೆಯಲ್ಲಿ ಸಖತ್ ಬೋಲ್ಡ್ ಲುಕ್‌ನಲ್ಲಿ ಮಿಂಚಿದ್ದು, ಅವರ ಪೋಟೋ ಸಖತ್‌ವೈರಲ್ ಆಗಿವೆ.
ರಶ್ಮಿಕಾ ಮಂದಣ್ಣ ಅವರ ತುಂಡುಡಿಗೆ ಹಾಕಿ ಬಂದಿದ್ದರು. ಈ ಕಾರಣಕ್ಕೆ ಅನೇಕರು ರಶ್ಮಿಕಾ ಮಂದಣ್ಣ ಅವರನ್ನು ಟ್ರೋಲ್ ಮಾಡಿದ್ದಾರೆ.
‘ದೇಹ ಕಾಣುವ ರೀತಿಯಲ್ಲಿ ಏಕೆ ಬಟ್ಟೆ ಹಾಕಿ ಬರಬೇಕು’ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಆದರೆ, ರಶ್ಮಿಕಾ ಮಂದಣ್ಣ ಮಾತ್ರ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಸದ್ಯ ರಶ್ಮಿಕಾ ಮಂದಣ್ಣ ಅವರು ಸಾಲು ಸಾಲು ಗೆಲುವು ಕಾಣುತ್ತಿದ್ದಾರೆ. ಅವರ ನಟನೆಯ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿವೆ.ಸದ್ಯ ‘ಅನಿಮಲ್ ಹಾಗೂ ‘ಪುಷ್ಪ ೨’ ಚಿತ್ರದ ಕೆಲಸಗಳಲ್ಲಿ ರಶ್ಮಿಕಾ ಬ್ಯುಸಿ ಇದ್ದಾರೆ.