ಟ್ರೇಲರ್ ನೋಡಿ ಥಿಯೇಟರ್ ಬಿಟ್ಟ ನಾಗಚೈತನ್ಯ

ಹೈದರಾಬಾದ್,ಅ.೨೯-ಟಾಲಿವುಡ್ ನಲ್ಲಿ ಮುದ್ದಾದ ಜೋಡಿ ಎಂದೇ ಗುರುತಿಸಿಕೊಂಡಿರುವ ಸಮಂತಾ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆದು ದಾಂಪತ್ಯ ಜೀವನಕ್ಕೆ ಮುಕ್ತಾಯ ಹಾಡಿದ್ದು ಗೊತ್ತೇ ಇದೆ. ಅವರು ಏಕೆ ವಿಚ್ಛೇದನ ಪಡೆದರು ಎಂಬುದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಈ ಬಗ್ಗೆ ಸಮಂತಾ ಮತ್ತು ಅಕ್ಕಿನೇನಿ ಕುಟುಂಬದವರು ಯಾವುದೇ ವಿವರಣೆ ನೀಡಿಲ್ಲ. ಮತ್ತೊಂದೆಡೆ ವಿಚ್ಛೇದನ ಪಡೆದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರ ಬಗ್ಗೆಯೂ ದಿನೇ ದಿನೇ ಹಲವು ವದಂತಿಗಳು ಹರಿದಾಡುತ್ತಿವೆ. ಇಬ್ಬರೂ ವಿವಿಧ ಸುದ್ದಿಗಳೊಂದಿಗೆ ನಿರಂತರವಾಗಿ ಮುನ್ನೆಲೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ನಾಗ ಚೈತನ್ಯ ಕುರಿತು ಮತ್ತೊಂದು ಸುದ್ದಿ ವೈರಲ್ ಆಗಿದೆ.
ಸಮಂತಾ ಹಾಗೂ ವಿಜಯ್ ದೇವರಕೊಂಡ ಅಭಿನಯದ ಖುಷಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿರುವ ವಿಚಾರ ಗೊತ್ತೇ ಇದೆ. ಸಿನಿಮಾ ಪ್ರಚಾರ ಕಾರ್ಯಕ್ರಮಗಳೂ ಜೋರಾಗಿ ನಡೆಯುತ್ತಿವೆ. ಪ್ರೀ ರಿಲೀಸ್ ಈವೆಂಟ್ ನಲ್ಲಿ ಸಮಂತಾ ಮತ್ತು ವಿಜಯ್ ಮಾಡಿದ ಡ್ಯಾನ್ಸ್ ನೆರೆದಿದ್ದವರನ್ನು ಅಪಾರವಾಗಿ ಆಕರ್ಷಿಸಿತು.
ಮತ್ತೊಂದೆಡೆ, ಇತ್ತೀಚೆಗೆ ನಾಗ ಚೈತನ್ಯ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡುತ್ತಿದ್ದಾಗ ಮಧ್ಯಂತರದಲ್ಲಿ ಖುಷಿ ಚಿತ್ರದ ಟ್ರೇಲರ್ ಪ್ಲೇ ಆಗಿತ್ತು. ನಾಗಚೈತನ್ಯ ಆ ದೃಶ್ಯಗಳನ್ನು ವೀಕ್ಷಿಸಿ ತುಂಬಾ ಅಸಹನೆಯಿಂದ ಅಲ್ಲಿಂದ ಎದ್ದು ಹೊರಟು ಹೋದರು ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಈ ವದಂತಿ ವೈರಲ್ ಆಗಿದೆ.