ಟ್ರೇಡ್ ಲೈಸನ್ಸ್ ಪಡೆಯಲು ಪೌರಾಯುಕ್ತರ ಮನವಿ

ಕೆಜಿಎಫ್,ಸೆ.೭- ನಗರದಲ್ಲಿ ವ್ಯಾಪಾರ ಮಾಡುತ್ತಿರುವ ಅಂಗಡಿ ಮಾಲಿಕರು ನಗರಸಭೆಯಿಂದ ಟ್ರೆಡ್ ಲೈಸನ್ಸ್ ಪಡೆಯದೆ ವ್ಯಾಪಾರ ಮಾಡುತ್ತಿರುವುದರ ಹಿನ್ನಲೆಯಲ್ಲಿ ನಗರದ ಅಭಿವೃದ್ದಿಗಾಗಿ ಟ್ರೇಡ್ ಲೈಸನ್ಸ್ ನ ಅವಶ್ಯಕತೆ ಮತ್ತು ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವಂತೆ ನಗರಸಭೆ ಪೌರಾಯುಕ್ತ ಪವನ್‌ಕುಮಾರ ನಗರದ ಪ್ರಮುಖ ರಸ್ತೆಗಳಲ್ಲಿ ನಗರಸಭೆ ಸಿಬ್ಬಂದಿಯೊಂದಿಗೆ ಪ್ರತಿ ಅಂಗಡಿಗಳಿಗೂ ಭೇಟಿ ನೀಡಿ ಮನವರಿಕೆ ಮಾಡಿಕೊಟ್ಟರು .
ಇದೇ ವೇಳೆ ಅಂಗಡಿಯೊಂದರಲ್ಲಿ ಇಡಲಾಗಿದ್ದ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು ಇನ್ನು ಮುಂದೆ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡಿದರೆ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಹಲವು ಅಂಗಡಿ ಮಾಲಿಕರು ಟ್ರೇಡ್ ಲೈಸನ್ಸ್ ಪಡೆಯದಿರುವುದು ಕಂಡು ಬಂದಿದ್ದು ಅವರಿಗೆ ಟ್ರೇಡ್ ಲೈಸನ್ಸ್ ಬಗ್ಗೆ ಮನವರಿಕೆ ಮಾಡಿಕೊಟ್ಟು ಟ್ರೇಡ್ ಲೈಸನ್ಸ್ ಪಡೆಯುವುದರಿಂದ ಹಲವು ಅನುಕೂಲಗಳು ಆಗಲಿವೆ ಎಂದು ಹೇಳಿ ನಗರದಲ್ಲಿರುವ ಶಿಕ್ಷಣ ಸಂಸ್ಥೆಗಳು ಕೋಟ್ಯಾಂತರ ತೆರಿಗೆ ಹಣವನ್ನು ಭಾಕಿ ಉಳಿಸಿಕೊಂಡಿದ್ದು ತೆರಿಗೆ ಪಾವತಿ ಮಾಡದಿದ್ದರೆ ಕಠಿಣ ಕ್ರಮಕೈಗೊಂಡು ಬಡ್ಡಿ ಸಹಿತ ವಸೂಲಿ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ನಗರಸಭೆ ಅಧಿಕಾರಿಗಳಾದ ಜಯರಾಮ್,ಮಂಜು,ರಾಮಚಂದ್ರ ,ಮುರುಳಿ ,ಚಂದ್ರಪ್ಪ ಹಾಗೂ ಇತರರು ಹಾಜರಿದ್ದರು.