ಟ್ರಾಫಿಕ್ ಕಿರಿಕಿರಿ ಸವಾರರ ಪರದಾಟ

ಬೆಂಗಳೂರು, ಮೇ ೨೦- ರಾಜ್ಯದ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಸಂಚಾರ ದಟ್ಟಣೆ ಎದುರಾಗಿತ್ತು.
ಪ್ರಮಾಣ ವಚನ ಕಾರ್ಯಕ್ರಮ ನಡೆದ ಕಂಠೀರವ ಕ್ರೀಡಾಂಗಣದ ಅಕ್ಕಪಕ್ಕದ ರಸ್ತೆಗಳಲ್ಲಿ ವಾಹನ ಸವಾರರು ಕಿಲೋ ಮೀಟರ್ ಗಟ್ಟಲೆ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕಂಠೀರವ ಕ್ರೀಡಾಂಗಣಕ್ಕೆ ಹೊಂದಿಕೊಂಡಂತಿರುವ ಪ್ರಮುಖ ರಸ್ತೆಗಳು ಸಂಚಾರ ದಟ್ಟಣೆಯಿಂದ ತುಂಬಿ ಹೋಗಿದ್ದವು.
ಪ್ರತಿ ವೃತ್ತದಲ್ಲೂ ಕಿಲೋ ಮೀಟರ್ ಗಟ್ಟಲೆ ವಾಹನಗಳ ಸಂಚಾರ ದಟ್ಟಣೆಯಿಂದ ಸಾರ್ವಜನಿಕರು ಪರದಾಡುವಂತಾಯಿತು.
ಕಂಠೀರವ ಕ್ರೀಡಾಂಗಣದ ವಿವಿಧ ಗೇಟ್‌ಗಳ ಮೂಲಕ ಜನರು ಒಳ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಪಾಸ್ ಇದ್ದವರೂ ಕೂಡಾ ಒಳ ಪ್ರವೇಶಿಸಲು ನೂಕು ನುಕ್ಕಲು, ತಳ್ಳಾಟ ಎದುರಿಸುವಂತಾಯಿತು.
ವಾಗ್ವಾದ
ಪಾಸ್ ಇದ್ದರೂ ಕೂಡಾ ಒಳ ಹೋಗಲು ಸಾಧ್ಯವಾಗದ ಜನರು ಪೊಲೀಸರೊಂದಿಗೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆಸಿದ ಘಟನೆಯೂ ನಡೆಯಿತು. ಇದರಿಂದಾಗಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ವಾಗ್ವಾದ, ಮಾತಿನ ಚಕಮಕಿನ ನಡೆಯಿತು.