ಟ್ರಾಫಿಕ್ ಕಿರಿಕಿರಿಗೆ ಬೇಸತ್ತ ಪಟ್ಟಣದ ಜನತೆ..!

ವಾಡಿ:ಮಾ.10: ಸಿಮೆಂಟ್ ನಗರಿ ವಾಡಿ ಪಟ್ಟಣದಲ್ಲಿ ಸಂಚಾರ ಅವ್ಯವಸ್ಥೆ ತೀವ್ರ ಹದಗೆಟ್ಟಿದ್ದು ಸಾರ್ವಜನಿಕರ ಪರದಾಟಕ್ಕೆ ಕಾರಣವಾಗಿದೆ. ಕಲಬುರಗಿ-ಯಾದಗಿರಿ ಪ್ರಮುಖ ರಸ್ತೆ ಪಟ್ಟಣದ ಒಳಗಡೆಯಿಂದ ಹಾದು ಹೋಗಿದ್ದು ಹೆಜ್ಜೆ ಹೆಜ್ಜೆಗೂ ಇಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು ವಾಹನ ಸವಾರರು ಹಾಗೂ ಪಾದಾಚಾರಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ.

ಏಷಿಯಾದ ದೊಡ್ಡ ಸಿಮೆಂಟ್ ಕಾರ್ಖಾನೆ ಇಲ್ಲಿದ್ದ ರಾಜ್ಯ ಹಾಗೂ ಹೊರರಾಜ್ಯದ ನೂರಾರು ಲಾರಿಗಳು ಸಿಮೆಂಟ್ ಒತ್ತೊಯ್ಯಲು ಹಾಗೂ ಕಚ್ಚಾ ಪದಾರ್ಥ ಒತ್ತುಕೊಂಡು ಇಲ್ಲಿಗೆ ಬರುತ್ತವೆ. ಸಾರಿಗೆ ಸಂಚಾರ ಅವೈಜ್ಞಾನಿಕತೆಯಿಂದ ಕೂಡಿದೆ ಎಲ್ಲೆಂದರಲ್ಲಿ ಬೇಕಾ ಬಿಟ್ಟಿಯಾಗಿ ವಾಹನಗಳು ನಿಲ್ಲುತ್ತಿವೆ. ಶ್ರೀಬಸವೇಶ್ವರ ವೃತ್ತ, ಶ್ರೀನಿವಾಸ್ ಗುಡಿ ಚೌಕ್, ಶಿವಾಜಿ ಚೌಕ್, ಕಾಕಾ ಚೌಕ್, ಬಸ್ ನಿಲ್ದಾಣ ಪ್ರದೇಶ ಕಡೆಗಳಲ್ಲಿ ವಾಹನ ನಿಲುಗಡೆಯ ಪ್ರಮುಖ ಸ್ಥಳಗಳಾಗಿದ್ದು ಇಲ್ಲಿ ರಸ್ತೆ ಪಕ್ಕವೇ ರಸ್ತೆ ಮೇಲೆಯೇ ವಾಹನಗಳು ಆಟೋಗಳು ಲಾರಿಗಳು ಹಾಗೂ ಬೈಕ್‍ಗಳು ನಿಲ್ಲುತ್ತಿದ್ದು ಸುಗಮ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಪಟ್ಟಣ ಸುತ್ತಲಿನ ಚಾಮನೂರು, ಕಡಬೂರು, ಬಳವಡಿಗಿ, ಕೊಂಚೂರು, ಇಂಗಳಗಿ ಗ್ರಾಮಕ್ಕೆ ತೆರಳುವ ಆಟೋಗಳು ಸೂಕ್ತ ನಿಲುಗಡೆ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಮೇಲೆ ವಾಹನಗಳು ನಿಲ್ಲುತ್ತಿವೆ ಇದರಿಂದ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪಟ್ಟಣ ಪ್ರಮುಖ ಬಿದಿಗಳಲ್ಲಿ ಹಿಕ್ಕಟಾದ ಸ್ಥಳಗಳಲ್ಲಿ ಪೇಟ್ಟಿ ಅಂಗಡಿ, ತಳ್ಳೋಬಂಡಿ ಇಟ್ಟುಕೊಂಡು ಬೀದಿ ಬದಿಯ ವ್ಯಾಪಾರಿಗಳು ರಸ್ತೆಯ ಆರ್ಧ ಭಾಗ ಅಕ್ರಮಿಸಿಕೋಂಡಿರುವುದರಿಂದ ರಸ್ತೆಯ ಸುಗಮ ಸಂಚಾರಕ್ಕೆ ಅಡ್ಡಿಯಾಗಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ಕಿರಿಕೀರಿ ಅನುಭವಿಸುತ್ತಿದ್ದಾರೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದ ಸ್ಥಳೀಯ ಪೆÇಲೀಸ್ ಇಲಾಖೆಯ ದಿವ್ಯ ನಿರ್ಲಕ್ಷಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಮುಖ್ಯವಾಗಿ ಅಂಬೇಡ್ಕರ ವೃತ, ತರಕಾರಿ ಮಾರುಕಟ್ಟೆ, ಕುಂದನೂರ ಚೌಕ ದಿಂದ ಶ್ರೀನಿವಾಸ ಗುಡಿ ಚೌಕ್ ವರೆಗಿನ ಮುಖ್ಯ ರಸ್ತೆಯು ಸದಾ ಜನನಿಬಿಡತೆಯಿಂದ ಕೂಡಿರುತ್ತದೆ. ಕೆಲವು ಅಂಗಡಿಗಳು ಶಾಶ್ವತವಾಗಿ ರಸ್ತೆಯನ್ನೆ ಕಬಳಿಸಿವೆ, ಇನ್ನು ಕೆಲವು ಸಂಜೆಯಾಗುತ್ತಿದ್ದಂತೆ ಮುಖ್ಯ ರಸ್ತೆಯ ಅರ್ಧ ಭಾಗ ಆವರಿಸಿಕೋಳ್ಳುತ್ತವೆ. ಈ ವ್ಯಾಪಾರಿಗಳಿಂದ ಹಣ್ಣುಗಳು, ತಿಂಡಿ ತಿನಿಸುಗಳು ಮತ್ತು ಇತರೆ ವಸ್ತುಗಳನ್ನು ಖರೀದಿಸಲು ಜನರು ರಸ್ತೆಯ ಮೇಲೆ ತಮ್ಮ ವಾಹನಗಳನ್ನು ನಿಲ್ಲಿಸುವುದರಿಂದ ಜನರ ಓಡಾಟಕ್ಕೆ ತುಂಬಾ ತೋಂದರೆ ಉಂಟ್ಟಾಗುತ್ತಿದೆ. ವಾಹನ ಸವಾರರು ಮತ್ತು ಜನರ ಮದ್ಯೆ ನಿತ್ಯ ವಾಗ್ವಾದ ಉಂಟಾಗಿ ಕೈಕೈ ಮೀಲಾಯಿಸುವ ಘಟನೆಗಳು ಸಹ ನಡೆದಿವೆ. ಇದೆಲ್ಲವನ್ನು ಕಂಡ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನವಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಅವಘಡ ಸಂಭವಿಸುವುದಕಿಂತ ಮುಂಚೆ ಅಧಿಕಾರಿಗಳು ಕೂಡಲೆ ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.