ಟ್ರಾಪಿಕ್ ನಿಯಂತ್ರಣಕ್ಕೆ ವ್ಯಾಪಾರಸ್ಥರ, ಸಾರ್ವಜನಿಕರ ಸಹಕಾರ ಮುಖ್ಯ

ಮುದ್ದೇಬಿಹಾಳ:ಅ.28: ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ತರಕಾರಿ,ಹಣ್ಣು ಇನ್ನಿತರ ರಸ್ತೆ ಬದಿ ಮಾರಾಟಗಾರರಿಂದ ನಿತ್ಯ ಟ್ರಾಪಿಕ್ ಉಂಟಾಗಿ ಸಾರ್ವಜನಿಕರಿಗೆ ನಿತ್ಯ ತೋಂದರೆಯಾಗುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ಪಟ್ಟಣದಲ್ಲಿ ಟ್ರಾಪಿಕ್ ನಿಯಂತ್ರಣಕ್ಕೆ ಮುನ್ಸಿಪಲ್ ಗಾರ್ಡಗಳನ್ನು ನೆಮಕ ಮಾಡಿದ್ದಾರೆ.
ಈ ಸಮಯದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರು, ಪಟ್ಟಣದ ವಿವಿಧ ವೃತ್ತಗಳಲ್ಲಿ ಮತ್ತು ಬಜಾರ ಮುಖ್ಯ ರಸ್ತೆಯಲ್ಲಿ ಪ್ರತಿ ನಿತ್ಯ ಟ್ರಾಪಿಕ್‍ನಿಂದ ಸಾರ್ವಜನಿಕರಿಗೆ ಮತ್ತು ವ್ಯಾಪಾರಸ್ಥರಿಗೆ ತೀವೃ ತೋಂದರೆಯಾಗುತಿದ್ದು ಈ ಕಾರಣಕ್ಕಾಗಿ ಪುರಸಭೆ ವತಿಯಿಂದ ಟ್ರಾಪಿಕ್ ನಿಯಂತ್ರಣ ಮತ್ತು ಸಾರ್ವಜನಿಕರಿಗೆ ಅನೂಕುಲವಾಗುವ ದೃಷ್ಟಿಯಿಂದ ಮುನ್ಸಿಪಲ್ ಗಾರ್ಡಗಳಿಗೆ ಕೆಲಸಕ್ಕೆ ಬಿಡಲಾಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಪಟ್ಟಣದ ಎಲ್ಲೆಂದರಲ್ಲಿ ವಾಹನ ನೀಲುಗಡೆ ಮಾಡುವದನ್ನು ಬಿಡಬೇಕು ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನ ನೀಲುಗಡೆ ಮಾಡಬೇಕು. ಬೀದಿ ಬದಿ ವ್ಯಾಪಾರಸ್ಥರು ವಾಹನಸವಾರರಿಗೆ ತೋಂದರೆಯಾಗದಂತೆ ವ್ಯಾಪಾರದಲ್ಲಿ ತೋಡಗಬೇಕು. ಮುನ್ಸಿಪಲ್ ಗಾರ್ಡಗಳು ಟ್ರಾಪಿಕ್ ಸಮಸ್ಯೆಯ ಜೋತೆಗೆ ಇನ್ನಿತರ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಮಯದಲ್ಲಿ ಸಿಪಿಐ ಆನಂದ ವಾಗ್ಮೋರೆ, ರಮೇಶ ಮಾಡಬಾಳ, ಆರ್‍ಓ ಎಂ.ಡಿ.ಮಾಡಗಿ, ಆನಂದ ಮಾಳಜಿ, ಮಹಾಂತೇಷ ಕಟ್ಟಿಮನಿ, ಜಾವೀದ ನಾಯ್ಕೋಡಿ, ವಿನೋದ ಜಿಂಗಾಡೆ, ಸಂದೀಪ ಬಿರಾದಾರ, ಎಸ್.ಎಚ್.ಮೂಲಿಮನಿ ಮತ್ತಿತರರು ಇದ್ದರು.