ಟ್ರಾನ್ಸ್ ಫಾರ್ಮ್ ರ್ ವಿದ್ಯುತ್ ಸ್ಪರ್ಶಿಸಿ ಎಮ್ಮೆ ಸಾವು


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.26: ತಾಲೂಕಿನ ನಾಗರಕಟ್ಟಿ ಗ್ರಾಮದಲ್ಲಿ ಮಾಯಕಾರ್ ಮಲ್ಲಪ್ಪ  ಅವರ ಸುಮಾರು 50 ಸಾವಿರ ರೂ.ಬೆಲೆ ಬಾಳುವ ಎಮ್ಮೆ ಟ್ರಾನ್ಸ್ ಫಾರ್ಮ್ ರ್ ವಿದ್ಯುತ್ ಸ್ಪರ್ಶದಿಂದ ಸತ್ತು ಬಿದ್ದಿದೆ.
ಮಂಗಳವಾರ ಮಧ್ಯಾಹ್ನ ಮೆಯಲು ಬಿಟ್ಟ ಎಮ್ಮಿ ಟ್ರಾನ್ಸ್ ಫಾರ್ಮ್ ನ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದೆ, ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಟ್ರಾನ್ಸ್ ಪಾರ್ಮ್ ರ್ ಸುತ್ತ ಸುರಕ್ಷತೆ ಆಳಡಿಸದಿರುವುದೇ ಈ ಅವಘಡಕ್ಕೆ ಕಾರಣ ಎಂದು ಎಮ್ಮೆ ಮಾಲಿಕ ಹೇಳಿದರು.
ಟ್ರಾನ್ಸ್ ಪಾರ್ಮ್ ಆಜು ಬಾಜಿನಲ್ಲಿ ಗ್ರಾಮ ಪಂಚಾಯತಿ ಮತ್ತು ಶಾಲೆ ಇದ್ದು, ಇದರ ಬಳಿಯೇ ಶಾಲೆಯ ಮಕ್ಕಳು ಹಾಗೂ ಪಂಚಾಯತಿಗೆ ಹೊಗುವವರು ಆದು ಹೋಗುತ್ತಾರೆ ಅವರ ಜೀವಕ್ಕೆ ಹಾನಿ ಉಂಟಾದರೆ ಏನು ಎಂಬ ಪ್ರಜ್ಞೆ ಇಲ್ಲದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಟ್ರಾನ್ಸ್ ಫಾರ್ಮ್ ರ್ ಸುತ್ತ ಸುರಕ್ಷತೆ ಅಳವಡಿಸುವಂತೆ ಹಲವು ಬಾರಿ ಕೆ.ಇಬಿ ಗ್ರಾಮೀಣ ವಿಭಾಗದ ಜೆಇ ಗಳಿಗೆ ಮೌಖಿಕವಾಗಿ ತಿಳಿಸಿದರು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ವಹಿಸಿರುವರು, ಅವರ ಮೇಲೆ ಕೆ.ಇಬಿ ಮೇಲಾಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಮಾನವ ಜೀವಕ್ಕೆ ಹಾನಿ ಆಗುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರ ಎಚ್ಚೆತ್ತು ಟ್ರಾನ್ಸ್ ಪಾರ್ಮ್ ಸುತ್ತ ರಕ್ಷತೆ ಅಳವಡಿಸಬೇಕು ಇಲ್ಲದಿದ್ದರೆ ಮುಂದಿನ ಅವಘಡಗಳಿಗೆ ನಿಮ್ಮ ನಿರ್ಲಕ್ಷ್ಯತನ ಬಹು ಕಾರಣವಾಗಿ ಇದಕ್ಕೆ ತಕ್ಕ ಪ್ರಯಾಶ್ಚಿತ ಅನುಭವಿಸಬೇಕಾಗುತ್ತೆ ಎಂದು ಪತ್ರಿಕೆ ಮೂಲಕ ಎಚ್ಚರಿಸಿದರು.
ಟ್ರಾನ್ಸ್ ಪಾರ್ಮ್ ನ ವಿದ್ಯುತ್ ಹೆಚ್ಚಾದರೆ ನೆಲಕ್ಕೆ ಅರ್ತಿಂಗ್ ಕೊಟ್ಟಿರುತ್ತೆ, ಮಳೆ ಗಾಲ ಆಗಿರುವ ಕಾರಣ ತೇವಾಂಶ ಹೆಚ್ಚಾಗಿ ಅರ್ತಿಂಗ್ ವಿದ್ಯುತ್ ನಿಂದ ಅವಘಡ ಉಂಟಾಗಿದೆ, ಟ್ರಾನ್ಸ್ ಪಾರ್ಮ್ ಸುತ್ತ ಯಾರು ಓಡಾಡುವುದಾಗಲಿ ಅಥವಾ ನಿಲ್ಲುವುದಾಗಲಿ ಮಾಡುವಂತಿಲ್ಲ ಎಂದು ಪತ್ರಿಕೆ ಮತ್ತು ಸಮಾಜಿಕ ಜಾಲ ತಾಣಗಳಲ್ಲಿ ಇಲಾಖೆ ಎಚ್ಚರಿಸುತ್ತಿರುತ್ತೆ ಆದರೂ ಜನರ ನಿರ್ಲಕ್ಷ್ಯ ದಿಂದ ಈ ರೀತಿ ಅವಘಡ ಸಂಭವಿಸುತ್ತವೆ, ಸುರಕ್ಷತೆ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ ಯಾರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಇದು ಕೇವಲ ಗ್ರಾಮೀಣ ಭಾಗ ಮಾತ್ರವಲ್ಲ, ಪಟ್ಟಣದಲ್ಲಿಯೂ ಯಾವೊಂದು ಟ್ರಾನ್ಸ್ ಪಾರ್ಮ್ ಸುತ್ತ ಸುರಕ್ಷತೆ ಇಲ್ಲದಾಗಿದೆ.
 ರಾಂಪುರ ಸಿದ್ದೇಶ್ ,ಗ್ರಾಮೀಣ ವಿಭಾಗದ ಜೆಇ, ಉಜ್ಜಿನಿ.