
ಸಂಜೆವಾಣಿ ವಾರ್ತೆ
ಕುರುಗೋಡು:ಏ.11ಸ್ಥಳೀಯ ಲಾರಿಗಳ ಮಾಲೀಕರನ್ನು ನಿರ್ಲಕ್ಷ್ಯಿಸಿ, ಬೇರೆ ರಾಜ್ಯದ ವಿರಾಜ್ ಟ್ರಾನ್ಸ್ ಪೋರ್ಟ್ ಅವರಿಗೆ ಅವಕಾಶ ಮಾಡಿಕೊಡುವ ಮೂಲಕ ಸ್ಥಳೀಯರಿಗೆ ಅನ್ಯಾಯ ಮಾಡುತ್ತಿರುವುದು ತೀವ್ರ ಖಂಡನೀಯವಾಗಿದೆ. ಹೀಗಾಗಿ ಕೂಡಲೇ ವಿರಾಜ್ ಸಿಮೆಂಟ್ ಕ್ಯಾರೀಯರ್ ಲಿಮಿಟೆಡ್ ಟ್ರಾನ್ಸ್ಪೋರ್ಟ್ರವರ ಸಾಗಣಿ ಪರವಾನಿಗೆಯನ್ನು ರದ್ದುಗೊಳಿಸಿ, ಸ್ಥಳೀಯರಿಗೆ ಸಾಗಣೆ ಪರವಾನಿಗೆ ನೀಡಬೇಕೆಂದು ಆಗ್ರಹಿಸಿ, ಕುಡತಿನಿ ಸಿವಿಲ್ ಮತ್ತು ಬಲ್ಕರ್, ಟಿಪ್ಪರ್ ಲಾರಿ ಮಾಲೀಕರ ಹಾಗೂ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಶಿವಶಂಕರ್ ನೇತೃತ್ವದಲ್ಲಿ ಸ್ಥಳೀಯ ಲಾರಿಗಳ ಮಾಲೀಕರು ಸಮೀಪದ ಕುಡತಿನಿ ಪಟ್ಟಣದ ಇಂದಿರಾನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಳೆದ ಹತ್ತು ದಿನದಿಂದ ಲಾರಿಗಳ ಓಡಾಟ ಸ್ಥಗಿತಗೊಳಿಸಿ ಆರಂಭಿಸಿದ ಮೌನಾ ಹೋರಾಟ ಭಾನುವಾರ ದಿಕ್ಕಾರದ ಹೋರಾಟಕ್ಕೆ ಸಾಕ್ಷಿಯಾಯಿತು.
ನಂತರ ಕುಡತಿನಿ ಸಿವಿಲ್ ಮತ್ತು ಬಲ್ಕರ್, ಟಿಪ್ಪರ್ ಲಾರಿ ಮಾಲೀಕರ ಹಾಗೂ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಶಿವಶಂಕರ ಮಾತನಾಡಿ, ಕುಡತಿನಿ ಬಿಟಿಪಿಎಸ್ಯಿಂದ ಎಸಿಸಿ ಕುಡತಿನಿ ಹಾಗೂ ಅಲ್ಟ್ರಾಟೆಕ್ ಗಿಣಿಗೇರ ಸಿಮೆಂಟ್ ಕಾರ್ಖಾನೆಗಳಿಗೆ ಹಾರುವ ಬೂದಿ ಮತ್ತು ಪಾಂಡ್ ಬೂದಿ ಹಾಗೂ ಜೆಎಸ್‌ಡಬ್ಲೂö್ಯ ಉಕ್ಕಿನ ತೋಮಗಲ್ಲುನಿಂದ ಎಸಿಸಿ ಕುಡತನಿಗೆ ಮತ್ತು ಹಾರುವ ಬೂದಿ ಅನ್ನು ಸಾಗಣೆ ಮಾಡಲು ವಿರಾಜ್ ಟ್ರಾನ್ಸ್ಪೋರ್ಟ್ರವರಿಗೆ ಗುತ್ತಿಗೆ ನೀಡುತ್ತಾರೆ. ಕಳೆದ ಏಂಟು ವರ್ಷಗಳಿಂದ ಸಾಗಣೆ ಮಾಡಲು ಕಾರ್ಖಾನೆಗಳಿಂದ ಕಡಿಮೆ ದರಕ್ಕೆ ಗುತ್ತಿಗೆ ಆಧಾರದ ಮೇಲೆ ಬಿಡ್ ಮಾಡಿ ಪಡೆದು, ತಮ್ಮದೇ ಸ್ವಂತ ಗಾಡಿಗಳಲ್ಲಿ ಅತಿ ಭಾರದೊಂದಿಗೆ ಬೂದಿ ತುಂಬಿಕೊಂಡು ಸಾಗಣೆ ಮಾಡುತ್ತಿದ್ದಾರೆ.
ಸ್ಥಳೀಯ ಲಾರಿಗಳ ಮಾಲೀಕರಿಗೆ ಓವರ್ ಲೋಡ್ ಮಾಡಿಸಿ, ಸಾಗಣೆ ಮಾಡಲು ಒತ್ತಾಯಿಸುತ್ತಿರುವುದು ಖಂಡನೀಯವಾಗಿದೆ. ವಿರಾಜ್ ಟ್ರಾನ್ಸ್ಪೋರ್ಟ್ನವರು ಲಾರಿ ಮಾಲಿಕರಿಗೆ ಸರಿಯಾದ ಸಮಯಕ್ಕೆ ಬಾಡಿಗೆ ಕೊಟ್ಟಿಲ್ಲ. ಇದರಿಂದ ಲಾರಿ ಮಾಲಿಕರು ತಿಂಗಳ ಕಂತುಗಳನ್ನು ಕಟ್ಟಲು ಹರಸಾಹಸ ಪಡುತ್ತಿದ್ದಾರೆ. ಮತ್ತು ಕುಟುಂಬದ ಜೀವನ ನಿರ್ವಹಣೆಯು ಸಂಕಷ್ಟದಲ್ಲಿ ದೂಡುವಂತಾಗಿದೆ. ಪ್ರತಿ ಟನ್‌ಗೆ ಹಳೆಯ 367 ರೂ.ಗಳನ್ನು ನೀಡುತ್ತಿರುವುದು ಲಾರಿ ಮಾಲೀಕರಿಗೆ ಲಾಭದಾಯಕವಾಗುತ್ತಿಲ್ಲ. ಹೀಗಾಗಿ ವಿರಾಜ್ ಟ್ರಾನ್ಸ್ಪೋರ್ಟ್ನವರ ಗಮನಕ್ಕೆ ತಂದರೂ, ಪ್ರತಿ ಟನ್‌ಗೆ 550 ರೂ.ಗಳನ್ನು ನೀಡಲು ನಿರಾಕರಿಸಿದ್ದಾರೆ. ಸ್ಥಳೀರಲ್ಲದ ವಿರಾಜ್ ಟ್ರಾನ್ಸ್ಪೋರ್ಟ್ನವರು ಸ್ಥಳೀಯ ಲಾರಿ ಮಾಲೀಕರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಮತ್ತು ಹೊಸ ದರವನ್ನು ನಿಗಧಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ಹತ್ತು ದಿನದಿಂದ ಇಲ್ಲಿ ಲಾರಿಗಳ ಸಾಗಾಟ ಬಂದ್ ಮಾಡಿ ಮೌನಯುತವಾಗಿ ಪ್ರತಿಭಟನೆ ಮಾಡಿಕೊಂಡು ಬಂದರೂ, ವಿರಾಜ್ ಟ್ರಾನ್ಸ್ಪೋರ್ಟ್ನವರಾಗಲಿ ಮತ್ತು ಕಾರ್ಖಾನೆಯವರಾಗಲಿ ಸ್ಥಳೀಯ ಲಾರಿಗಳ ಮಾಲೀಕರ ಸಂಕಷ್ಟವನ್ನು ಆಲಿಸುತ್ತಿಲ್ಲ. ಇದರಿಂದಾಗಿ ಸ್ಥಳೀಯ ಲಾರಿ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆ ಮೌನಯುತವಾಗಿ ಹೋರಾಟ ಮಾಡುತ್ತಿದ್ದು, ಇದೇ ನಿರ್ಲಕ್ಷ್ಯಿಸಿದರೆ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ. ಆದ್ದರಿಂದ ಸಾರ್ವಜನಿಕ ಮತ್ತು ಸ್ಥಳೀಯ ಲಾರಿ ಮಾಲೀಕರ ಹಿತಶಕ್ತಿವಾಗಿ ಹಿರಿಯ ಅಧಿಕಾರಿಗಳು ಗಮನಹರಿಸಿ, ವಿರಾಜ್ ಟ್ರಾನ್ಸ್ಪೋರ್ಟ್ನವರನ್ನು ಕರೆಸಿ, ಸ್ಥಳೀಯ ಮಾಲೀಕರ ಸಮಾಕ್ಷಮದಲ್ಲಿ ಚರ್ಚಿಸಿ, ಬೇಡಿಕೆಗಳನ್ನು ನ್ಯಾಯ ಸಮ್ಮತವಾಗಿ ಒದಗಿಸಿಕೊಡಬೇಕು. ಮತ್ತು ವಿರಾಜ್ ಟ್ರಾನ್ಸ್ಪೋರ್ಟ್ನವರು ನ್ಯಾಯಯುತವಾದ ದರ ನೀಡದಿದ್ದಲ್ಲಿ ಅವರ ಗುತ್ತಿಗೆ ಪರವಾನಿಗೆ ರದ್ದುಗೊಳಿಸಿ, ಸ್ಥಳೀಯ ಟ್ರಾನ್ಸ್ಪೋರ್ಟ್ನವರಿಗೆ ಸಾಗಣೆ ಗುತ್ತಿಗೆ ಪರವಾನಿಗೆ ನೀಡಬೇಕು.
ಸ್ಥಳೀಯರಿಗೆ ನೀಡಿದರೆ ಸ್ಥಳೀಯ ಲಾರಿ ಮಾಲೀಕರಿಗೆ ಉತ್ತಮ ಸ್ಪಂದನೆ ದೊರೆಯುತ್ತದೆ. ಈ ಎಲ್ಲಾ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ದಿನದಲ್ಲಿ ಬಿಟಿಪಿಎಸ್ ಗೇಟ್ ಬಳಿಯಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದರು.
ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲಾ ಅಸೋಸಿಯೇಷನ್ ಹಾಗೂ ಸ್ಟೇಟ್ ಆರ್ಗನೈಜೇಷನ್ ಬೆಂಬಲ ನೀಡಿರುತ್ತಾರೆ.
ಈ ಸಂದರ್ಭದಲ್ಲಿ ಅಸೋಸಿಯೇಷನ್ ಗೌರವಾಧ್ಯಕ್ಷರಾದ ಗ್ಯಾಂಗಿ ಹನುಮಂತಪ್ಪ, ಮಹೇಶ, ಲಾರಿ ಕೃಷ್ಣಪ್ಪ, ಉಪಾಧ್ಯಕ್ಷರಾದ ನಾಗೇಶ, ಕಂದಾರಿ ಪ್ರತಾಪ್, ಸ್ಥಳೀಯ ಲಾರಿ ಮಾಲೀಕರಾದ ರಾಜೇಶ, ಮಹೇಶ, ಮಲ್ಲಿಕಾರ್ಜುನ, ಗೋಪಾಲ, ಶ್ರೀಧರ್, ಸಿದ್ದಪ್ಪ, ತಿಮ್ಮಪ್ಪ, ವೆಂಕಟೇಶ, ಶಿವಪ್ಪ, ವಿರೂಪಾಕ್ಷಿ, ನೂರ್‌ಭಾಷಾ ಉಪಸ್ಥಿತರಿದ್ದರು.