ಟ್ರಾಕ್ಟರ್, ಬೈಕ್ ಡಿಕ್ಕಿ ಸ್ಥಳದಲ್ಲೇ ಯುವಕ ಸಾವು

ಯಡ್ರಾಮಿ:ನ.23:ಯಾಳವಾರ ಕ್ರಾಸ ಹತ್ತಿರ ನಿನ್ನೆ ರಾತ್ರಿ ವೇಳೆ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಾಪಟ್ಟಿದ್ದಾನೆ. ಮೃತಪಟ್ಟ ಯುವಕ ದನಾರಾಜ್ ಬಸವರಾಜ ಜವಳಗಿ (21) ಗುಡುರು ಎಸ್ ಎ ಗ್ರಾಮದವನು ಮತ್ತು ಇವನ ಜೊತೆ ಇದ್ದ ಗೆಳೆಯನಿಗೆ ಗಂಬಿರ ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುತ್ತಾನೆ, ಸ್ಥಳಕ್ಕೆ ಜೇವರ್ಗಿ ಪೆÇಲೀಸ್ ಠಾಣೆಯ ಪಿಎಸ್‍ಐ ಸಂಗಮೇಶ ಅಂಗಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಈ ಕುರಿತು ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.