ಟ್ರಾಕ್ಟರ್ ಗೆ ಲಾರಿ ಡಿಕ್ಕಿ – ಇಬ್ಬರಿಗೆ ಗಾಯ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ನ.18 :- ಚೌಡಾಪುರದಿಂದ ಗ್ರಾವೆಲ್ ಹಾಗೂ ಒಣಕಟ್ಟಿಗೆ ತುಂಬಿಕೊಂಡು ಹೊರಟಿದ್ದ ಟ್ರಾಕ್ಟರ್ ಗೆ ಲಾರಿಯೊಂದು ಹಿಂಬದಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಟ್ರಾಕ್ಟರ್ ಚಾಲಕ ಹಾಗೂ ಇನ್ನೊರ್ವನಿಗೆ ರಕ್ತಗಾಯಗಳಾಗಿರುವ ಘಟನೆ ಇಂದು ಮಧ್ಯಾಹ್ನ 12-30ಗಂಟೆಗೆ ಜರುಗಿದ್ದು  ತಕ್ಷಣ ಅವರನ್ನು ಕೂಡ್ಲಿಗಿ 108ರ ಅಂಬ್ಯುಲೆನ್ಸ್ ನಲ್ಲಿ ಕೂಡ್ಲಿಗಿ ಆಸ್ಪತ್ರೆಗೆ ದಾಖಲಾಗಿದೆ.
ಚೌಡಾಪುರದ ಟ್ರಾಕ್ಟರ್ ಚಾಲಕ ಸಂತೋಷ ಹಾಗೂ ಕಾರ್ಮಿಕ ಹೊನ್ನೂರಪ್ಪ ಗಾಯಗೊಂಡವರಾಗಿದ್ದಾರೆ. ಇವರುಗಳು ಚೌಡಾಪುರದಿಂದ ಶಿವಪುರಕ್ಕೆ ಟ್ರಾಕ್ಟರ್ ನಲ್ಲಿ ಒಣ ಕಟ್ಟಿಗೆ ಹಾಗೂ ಗ್ರಾವೆಲ್ ತುಂಬಿಕೊಂಡು ಪಟ್ಟಣದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ಹೈವೇ 50ರಲ್ಲಿ ಹೋಗುತ್ತಿರುವಾಗ್ಗೆ ಬೆಂಗಳೂರು ಕಡೆಯಿಂದ ಹೊಸಪೇಟೆ ಕಡೆಗೆ ಹೊರಟಿದ್ದ ಲಾರಿಯ ಚಾಲಕ ಅತಿವೇಗ ಅಜಾಕರುಕತೆಯಿಂದ ಟ್ರಾಕ್ಟರ್ ಟ್ರಾಲಿಗೆ ಡಿಕ್ಕಿ ಹೊಡೆದ ಪರಿಣಾಮ ಟ್ರಾಕ್ಟರ್ ಪಲ್ಟಿಯಾಗಿದ್ದು ಅದರಲ್ಲಿದ್ದ ಚಾಲಕ ಹಾಗೂ ಕಾರ್ಮಿಕನಿಗೆ ಗಾಯಗಳಾಗಿದ್ದು ತಕ್ಷಣ ಅವರನ್ನು ಕೂಡ್ಲಿಗಿ 108ರ ಅಂಬ್ಯುಲೆನ್ಸ್ ನಲ್ಲಿ ಕೂಡ್ಲಿಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಲಾಗಿದೆ.ಸುದ್ದಿ ತಿಳಿದು  ಘಟನಾ ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ದೌಡಯಿಸಿದ್ದಾರೆಂದು ತಿಳಿದಿದೆ.