ಟ್ರಕ್ ಕ್ಯಾಂಟರ್ ಡಿಕ್ಕಿ:ಮೂವರು ವ್ಯಕ್ತಿ,ಎಂಟು ಎಮ್ಮೆ ಸಾವು

ವಿಜಯಪುರ ಸೆ 22: ಜಿಲ್ಲೆಯ ಕೊಲ್ಹಾರ ತಾಲೂಕಿನ ರೋಣಿಹಾಳ ಕ್ರಾಸ್ ಬಳಿ ಟ್ರಕ್ ಹಾಗೂ ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ.ಟ್ರಕ್ ನಲ್ಲಿದ್ದ 19 ಎಮ್ಮೆಗಳಲ್ಲಿ 8 ಎಮ್ಮೆಗಳು ಮೃತಪಟ್ಟಿವೆ.
ಒಬ್ಬರು ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಗಾಯಗೊಂಡ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.11 ಎಮ್ಮೆಗಳಿಗೆ ಗಂಭೀರ ಗಾಯವಾಗಿದೆ.
ಘಟನಾ ಸ್ಥಳಕ್ಕೆ ವಿಜಯಪುರ ಎಡಿಶನಲ್ ಎಸ್ಪಿ ರಾಮ ಅರ್ಶದಿ ಹಾಗೂ ನಿಡಗುಂದಿ ಸಿಪಿಐ ಸೋಮಶೇಖರ್ ಜುಟ್ಟಲ್ ಕೋಲಾರ ಪೆÇಲೀಸ್ ಠಾಣೆಯ ಎಎಸ್ ಐಗಳಾದ ಎಸ್ ಎಸ ಲಕ್ಷಟ್ಟಿ. ಆರ ಎನ ಬಿರಾದಾರ. ಮತ್ತು ವಿವೇಕಾನಂದ ಹತ್ತಳ್ಳಿ. ಹಾಗೂ ಪೆÇಲೀಸ್ ಸಿಬ್ಬಂದಿಯವರು ಪರಿಶೀಲನೆ ನಡೆಸಿದರು. ಈ ವೇಳೆ ಟ್ರಕ್ ನಲ್ಲಿಯ ಶವವನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಹರಸಾಹಸದಿಂದ ಹೊರಗೆ ತೆಗೆದರು