ಟ್ರಕ್‌ನಲ್ಲಿ ಸಾಗಿಸುತ್ತಿದ್ದ 750 ಕೋಟಿ ಜಪ್ತಿ

ಹೈದರಾಬಾದ್,ಅ.೧೯- ತೆಲಂಗಾಣ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಬರೋಬ್ಬರಿ ೭೫೦ ಕೋಟಿ ರೂಪಾಯಿ ನಗದು ಹೊತ್ತು ಸಾಗುತ್ತಿದ್ದ ಟ್ರಕ್ ಅನ್ನು ಪತ್ತೆ ಹಚ್ಚಿ ಬೆಚ್ಚಿ ಬಿದ್ದ ಘಟನೆ ನಡೆದಿದೆ,
ಗದ್ವಾಲ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಚುನಾವಣಾ ಕರ್ತವ್ಯ ನಿರತ ಪೊಲೀಸರು ಅನುಮಾನದ ಮೇಲೆ ಟ್ರಕ್‌ನ್ನು ಅಡ್ಡಗಟ್ಟಿ ಪರಿಶೀಲನೆ ಮಾಡಿದ ವೇಳೆ ಅದರಲಿದ್ದ ನೋಟಿನ ಕಂತೆ ಕಂತೆಗಳ ರಾಶಿ ನೋಡಿ ಬೆಚ್ಚಿ ಬಿದ್ದಿದ್ದಾರೆ. ಟ್ರಕ್ ನಲ್ಲಿ ೭೫೦ ಕೋಟಿ ರೂಪಾಯಿ ನಗದು ಇದ್ದುದು ಪತ್ತೆಯಾಗಿದೆ.
ಗದ್ವಾಲ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ‘ಅಸಾಧಾರಣ ಸರಕು’ ಸಾಗಿಸುತ್ತಿದ್ದ ಟ್ರಕ್‌ನ್ನು ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸರು ಅಡ್ಡಗಟ್ಟಿ ೭೫೦ ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ನಗದು ನೋಡಿ ಪೊಲೀಸರನ್ನು ದಿಗ್ಭ್ರಮೆಗೊಳಗಾದ ಘಟನೆ ನಡೆದಿದೆ
ಕೇರಳದಿಂದ ಹೈದರಾಬಾದ್‌ಗೆ ವರ್ಗಾಯಿಸಲಾಗುತ್ತಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಸಾಗಿಸುತ್ತಿದ್ದ ಎನ್ನುವುದು ಪತ್ತೆ ಯಾದ ನಂತರ ಎಲ್ಲಾ ದಾಖಲೆ ಪರಿಶೀಲಿಸಿ ಬಿಟ್ಟಿರುವ ಘಟನೆಯೂ ನಡೆದಿದೆ.
ಚುನಾವಣಾಧಿಕಾರಿ ವಿಕಾಸ್ ರಾಜ್ ಮಾತನಾಡಿ, ಕೇರಳದಿಂದ ಹೈದರಾಬಾದ್ ಯೂನಿಯನ್ ಬ್ಯಾಂಕ್ ಗೆ ಸಾಗಿಸುತ್ತಿದ್ದ ಮೊತ್ತ ಇದಾಗಿದೆ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.
ಬ್ಯಾಂಕ್ ಅಧಿಕಾರಿಗಳಿಂದ ದೃಢೀಕರಣದ ನಂತರ ಟ್ರಕ್ ಅನ್ನು ಅದರ ಮುಂದಿನ ಪ್ರಯಾಣಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
“ರೂ. ೭೫೦ ಕೋಟಿ ನಗದು ಹೊಂದಿರುವ ಟ್ರಕ್ ಕೆಲವು ಗಂಟೆಗಳ ಕಾಲ ಗಮನ ಸೆಳೆಯಿತು ಆದರೆ ಅಂತಿಮವಾಗಿ ಪರಿಶೀಲಿಸಿದ ನಂತರ, ಪೊಲೀಸರು ಟ್ರಕ್‌ಗೆ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಕಾನೂನು ಜಾರಿ ಸಂಸ್ಥೆಗಳ ಹೆಚ್ಚಿನ ಜಾಗರೂಕತೆಯಿಂದ ರಾಜ್ಯಕ್ಕೆ ಪ್ರವೇಶಿಸುವ ಪ್ರತಿಯೊಂದು ವಾಹನವನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಗೋವಾ ಮತ್ತು ಇತರ ಸ್ಥಳಗಳಿಂದ ಮಹ್‌ಬುಗ್‌ನಗರ ಮೂಲಕ ಹೈದರಾಬಾದ್‌ಗೆ ಕಳ್ಳಸಾಗಣೆ ತಡೆಯುವಂತೆ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸೂಚಿಸಿದ್ದರು. ಅದರಂತೆ ರಾಜ್ಯ ಪೊಲೀಸರು ಹೆದ್ದಾರಿಯಲ್ಲಿ ಹದ್ದಿನ ಕಣ್ಣು ಇಟ್ಟಿದ್ದಾರೆ.

೧೬೫ ಕೋಟಿ ರೂ ವಶ
ಈ ನಡುವೆ ಚುನಾವಣೆಗಾಗಿ ಬಳಕೆ ಮಾಡಲು ಸಾಗಿಸುತ್ತಿದ್ದ ಒಟ್ಟು ೧೬೫ ಕೋಟಿ ರೂಪಾಯಿ ಮೊತ್ತದ ನಗದು, ಮದ್ಯ, ಡ್ರಗ್ಸ್, ಚಿನ್ನ ಮತ್ತು ಅಮೂಲ್ಯ ಹರಳುಗಳನ್ನು ಪೊಲೀಸರು ರಾಜ್ಯಾದ್ಯಂತ ವಶಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ವಸ್ತುಗಳ ಪೈಕಿ ಚಿನ್ನ, ವಜ್ರ ಮತ್ತು ಅಮೂಲ್ಯ ಲೋಹಗಳ ಮೌಲ್ಯ ೬೨ ಕೋಟಿ ರೂ.ಗಳಾಗಿದ್ದು, ನಗದು ಮೊತ್ತ ೭೭ ಕೋಟಿ ರೂಪಾಯಿ ನಗದು ಸೇರಿದೆ.