ಟ್ರಂಪ್ ವಿರುದ್ಧ ವಾಗ್ದಂಡನೆ ಮಂಡಿಸಲು ಸಂಸದರ ತೀರ್ಮಾನ


ವಾಷಿಂಗ್ಟನ್,ಜ.೧೦- ಅಮೆರಿಕ ಕ್ಯಾಪಿಟಲ್ ಮೇಲೆ ತನ್ನ ಬೆಂಬಲಿಗರು ಪುಂಡಾಟಿಕೆ ನಡೆಸಿದ ನಂತರವೂ ಹುದ್ದೆ ತ್ಯಜಿಸಲು ನಿರಾಕರಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ವಾಗ್ದಂಡನೆ ಮಂಡಿಸಲು ಡೆಮಾಕ್ರಟಿಕ್ ಪಕ್ಷದ ಸಂಸದರು ತೀರ್ಮಾನಿಸಿದ್ದಾರೆ. ಒಂದು ವೇಳೆ
ವಾಗ್ದಂಡನೆ ಮಂಡಿಸಿದರೆ ಟ್ರಂಪ್ ವಿರುದ್ಧ ೨ನೇ ವಾಗ್ದಂಡನೆ ಮಂಡಿಸಿ
ದಂತಾಗುತ್ತದೆ. ನಾಳೆಯಿಂದಲೇ ವಾಗ್ದಂಡನೆ ಪ್ರಕ್ರಿಯೆಗೆ ಚಾನೆ ಸಿಗಲಿದೆ ಎಂದು ಡೆಮಾಕ್ರಟಿಕ್ ಸಂಸದರು ದೃಢಪಡಿಸಿದ್ದಾರೆ.
ವಾಗ್ದಂಡನೆ ಪ್ರಕ್ರಿಯೆ ದೀರ್ಘಾವದಿ
ಯಾಗಿದ್ದು, ಇದು ಪೂರ್ಣಗೊಳ್ಳಲು ಹಲವು ವಾರಗಳ ಕಾಲಾವಕಾಶ ಬೇಕಾಗುತ್ತದೆ. ಇದರಿಂದಾಗಿ ಜ. ೨೦ರ ವೇಳೆಗೆ ಜೋ ಬೈಡೆನ್ ಅಧಿಕಾರವಹಿಸಿಕೊಳ್ಳುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತದೆ.
ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡದಿದ್ದರೆ ಅಥವಾ ಅಧ್ಯಕ್ಷರನ್ನು ಕ್ಯಾಬಿನೆಟ್ ವಜಾ ಮಾಡುವ ೨೫ನೇ ತಿದ್ದುಪಡಿಯನ್ನು ಉಪಾಧ್ಯಕ್ಷ ಮೈಕ್ ಪೆನ್ಸ್ ಮಂಡಿಸದೆ ಹೋದರೆ, ಡೆಮಾಕ್ರಟಿಕ್‌ನ ಜನಪ್ರತಿನಿಧಿಗಳು ವಾಗ್ದಂಡನೆ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ ಎಂದು ಸ್ಪೀಕರ್ ನ್ಯಾನ್ಸ್‌ಫೆಲೊಸಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ
ಅವರು, ಟ್ರಂಪ್ ಗೊಂದ
ಲಕ್ಕೊಳಗಾಗಿದ್ದು, ಮತ್ತು ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಅವರು ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಲೇಬೇಕು ಎಂದು ತಿಳಿಸಿದ್ದಾರೆ.ಅಮೆರಿಕದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ರೊಚ್ಚಿಗೆದ್ದ ಟ್ರಂಪ್ ಬೆಂಬಲಿಗರು ಬುಧವಾರ ಕ್ಯಾಪಿಟಲ್ ಮೇಲೆ ದಾಳಿ ನಡೆಸಿ ಪುಂಡಾಟಿಕೆ ಮೆರೆದಿದ್ದರು. ಈ ಘಟನೆಯಲ್ಲಿ ಪೊಲೀಸರೂ ಸೇರಿ ೫ ಮಂದಿ ಮೃತಪಟ್ಟಿದ್ದರು. ಇದು ಡೊನಾಲ್ಡ್‌ಟ್ರಂಪ್ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ವಾಗ್ದಂಡನೆ ಭೀತಿಗೆ ಸಿಲುಕಿದ್ದಾರೆ.
ಅಮೆರಿಕ ಕಾಂಗ್ರೆಸ್‌ನ ಕನಿಷ್ಠ ೧೮೦
ಸದಸ್ಯರು ಟ್ರಂಪ್ ವಿರುದ್ಧ ಆರೋಪ ಮಾಡಿ ವಾಗ್ದಂಡನೆ ಪ್ರಸ್ತಾಪದ ಕಡತಕ್ಕೆ ಅಂಕಿತ ಹಾಕಿದ್ದಾರೆ. ಅಮೆರಿ
ಕದ ಸಂಸ್ಥೆಗ ಭದ್ರತೆಗೆ ಟ್ರಂಪ್ ತೀವ್ರ ಅಪಾಯವುಂಟು ಮಾಡಿದ್ದಾರೆ. ಅಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯ ಸಮಗ್ರತೆಗೆ ಬೆದರಿಕೆ ಹಾಕಿದ್ದಾರೆ. ಅಧಿಕಾರದ ಶಾಂತಿಯುತ ಹಸ್ತಾಂತರದಲ್ಲಿ ಹಸ್ತಕ್ಷೇಪ ಮಾಡಿದ್ದು, ಸರ್ಕಾರದ ಸಮನ್ವಯ ಶಾಖೆಯನ್ನು ದುರ್ಬಲಗೊಳಿಸಿದ್ದಾರೆ ಎಂದು ಉಲ್ಲೇಖಿಸಿ ಡೆಮಾಕ್ರಟಿಕ್ ಪಕ್ಷದ ಸಂಸದ ಟೆಡ್ ಲಿಯು ಹೇಳಿದ್ದಾರೆ.