ಟ್ರಂಪ್ ರಾಜೀನಾಮೆ ವಿಳಂಬ ಸೋಂಕು ಹೆಚ್ಚಳದ ಭೀತಿ

ವಾಷಿಂಗ್ಟನ್, ನ.೧೭- ಅಧಿಕಾರ ಹಸ್ತಾಂತರ ಮಾಡಲು ಡೊನಾಲ್ಡ್ ಟ್ರಂಪ್ ವಿಳಂಬ ಮಾಡಿದರೆ ಅಮೇರಿಕಾದಲ್ಲಿ ಕೊರೋನಾ ಸೊಂಕಿನ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾದ್ಯತೆಗಳಿವೆ ಎಂದು ಚುನಾಯಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡರೂ ಸೋಲು ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿರುವ ಡೊನಾಲ್ಡ್ ಟ್ರಂಪ್ ಅವರು ಜನವರಿ ೨೦ರಂದು ಜೋ ಬೈಡನ್ ಅವರಿಗೆ ಅಧಿಕಾರ ಹಸ್ತಾಂತರಿಸ ಬೇಕಾಗಿದೆ .ಆದರೆ ಸದ್ಯ ಟ್ರಂಪ್ ಮನಸ್ಥಿತಿ ಅಧಿಕಾರ ವಿಳಂಬ ಮಾಡುವ ಸಾಧ್ಯತೆಗಳಿವೆ.
ಈ ಮೂಲಕ ಡೊನಾಲ್ಡ್ ಟ್ರಂಪ್ ಅವರ ಮೇಲೆ ಅಧಿಕಾರ ಹಸ್ತಾಂತರ ಮಾಡುವಂತೆ ಒತ್ತಡ ಹೇರುವ ಕೆಲಸವನ್ನು ಚುನಾಯಿತ ಅಧ್ಯಕ್ಷ ಜೋ ಬೈಡನ್ ಮಾಡಲು ಮುಂದಾಗಿದ್ದಾರೆ.
ಅಮೇರಿಕಾದಲ್ಲಿ ಕೊರೊನಾ ಸೋಂಕಿನಿಂದ ಅತಿ ಹೆಚ್ಚು ಮಂದಿ ಸಾವು ಮತ್ತು ಅದರಿಂದ ಸೋಂಕಿಗೆ ಬಾಧಿತರಾಗಿದ್ದಾರೆ ಹೀಗಾಗಿ ಆದಷ್ಟು ಶೀಘ್ರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮತ್ತಷ್ಟು ಪರಿಣಾಮ ಎದುರಿಸಬೇಕಾದೀತು ಎಂದು ಅವರು ಎಚ್ಚರಿಸಿದ್ದಾರೆ.
ಕೊರೋನಾ ಸೋಂಕಿನಿಂದಾಗಿ ಅಮೆರಿಕದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಅದನ್ನು ಸರಿದಾರಿಗೆ ತರುವ ಅಗತ್ಯವಿದೆ ಇದಕ್ಕೆಲ್ಲಾ ಪರಿಹಾರ ಎನ್ನುವಂತೆ ಮತ್ತು ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಿದೆ ಟ್ರಂಪ್ ಅವರು ನಿಗದಿತ ಸಮಯಕ್ಕೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಅಧಿಕಾರ ಹಸ್ತಾಂತರಕ್ಕೆ ಹಿಂದೇಟು ಹಾಕುತ್ತಿರುವ ಡೊನಾಲ್ಡ್ ಟ್ರಂಪ್ ಅವರಿಗೆ ಒತ್ತಡ ಹೇರುವ ಮೂಲಕ ಅಧಿಕಾರ ಹಸ್ತಾಂತರಿಸುವಂತೆ ಮಾಡುವ ಎಲ್ಲ ಪ್ರಕ್ರಿಯೆಗಳು ಜೋ ಬೈಡನ್ ಅವರ ತಂಡದಿಂದ ನಡೆಯುತ್ತಿದೆ.
ಅಮೆರಿಕ ಅಧ್ಯಕ್ಷ ಚುನಾವಣೆ ಮತಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ಹಸ್ತಾಂತರ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆದೇಶದಲ್ಲಿ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.
ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಇನ್ನೂ ಜನವರಿ ೨೦ರ ತನಕ ಇರುವುದರಿಂದ ಅಲ್ಲಿಯವರೆಗೆ ಇಲ್ಲ ಮಾಡಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ