ಟ್ರಂಪ್- ಬಿಡೆನ್ ತೀವ್ರ ಪೈಪೋಟಿ

ವಾಷಿಂಗ್ಟನ್, ನ.೪- ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ನಡುವೆ ಶ್ವೇತಭವನದ ಕುರ್ಚಿ ಏರಲು ತೀವ್ರ ಪೈಪೋಟಿ ನಡೆದಿದೆ.

ಅಮೆರಿಕದ ೫೦ ರಾಜ್ಯಗಳ ಪೈಕಿ ಹಲವು ರಾಜ್ಯಗಳಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ನಡೆದಿದೆ. ಕೆಲವು ರಾಜ್ಯಗಳಲ್ಲಿ ಡೋನಾಲ್ಡ್ ಟ್ರಂಪ್ ಮುಂದಿದ್ದರೆ ಮತ್ತೆ ಕೆಲವು ರಾಜ್ಯಗಳಲ್ಲಿ ಜೋ ಬಿಡೆನ್ ಮುಂದಿದ್ದಾರೆ.
ಹೀಗಾಗಿ ಅಮೆರಿಕದ ಮುಂದಿನ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದ್ದು, ವಿಶ್ವದ ನಾಯಕರ ಚಿತ್ತ ಅಮೆರಿಕದತ್ತ ನೆಟ್ಟಿದೆ.

ಮೂಲಗಳ ಪ್ರಕಾರ ಡೊನಾಲ್ಡ್ ಟ್ರಂಪ್ ಅವರಿಗಿಂತ ಜೋ ಬಿಡೆನ್ ಮುಂದಿದ್ದು ಶ್ವೇತಭವನದ ಖರ್ಚಿಗೆ ಸಮೀಪವಾಗಿದ್ದರೆ ಎಂದು ಹೇಳಲಾಗುತ್ತಿದೆ.

ಶ್ವೇತ ಭವನದ ಕುರ್ಚಿ ಏರಲು ಅಗತ್ಯವಿರುವ ೨೭೦ ಮ್ಯಾಜಿಕ್ ನಂಬರ್ ತಲುಪಲು ಜೋ ಬಿಡೆನ್ ಅವರು ತೀರಾ ಸಮೀಪದಲ್ಲಿ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯದ ಮಾಹಿತಿ ಪ್ರಕಾರ ಜೋ ಬಿಡೆನ್ ೨೩೬, ಡೋನಾಲ್ಡ್ ಟ್ರಂಪ್ ಅವರು ೨೧೩ ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ

ಒಟ್ಟಾರೆ ಶೇಕಡಾವಾರು ಮತಗಳ ಪೈಕಿ ಬಿಡೆನ್ ಅವರ ಪರ ಶೇ.೪೯.೭೭ ಟ್ರಂಪ್ ಅವರಿಗೆ ಶೇ.೪೮.೫೯ ರಷ್ಟು ಮತಗಳು ಚಲಾವಣೆಯಾಗಿದ್ದು ಇಬ್ಬರ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ಡೊನಾಲ್ಡ್ ಟ್ರಂಪ್ ಅವರು ಅಲಾಸ್ಕಾ, ಅರ್ಕಾನಾಸಸ್, ಕೆಂಟುಕಿ, ಲೂಸಿಯಾನ, ಮಿಸ್ಸಿಸ್ಸಿಪ್ಪಿ, ನೆಬ್ರಸ್ಕ, ನಾರ್ತ್ ಡಕೋಟ, ಒಕ್ಲಹೋಮ, ಸೌತ್ ಡಕೋಟ, ಟೆನ್ ಸಿಸಿ, ವೆಸ್ಟ್ ವರ್ಜೀನಿಯ, ವೈಮಿಂಗ್, ಇಂಡಿಯಾನಾ ಮತ್ತು ದಕ್ಷಿಣ ಕರೋಲಿನ ರಾಜ್ಯಗಳಲ್ಲಿ ಗೆಲವು ಸಾಧಿಸಿದ್ದಾರೆ.

ಇನ್ನೂ ಜೋ ಬಿಡೆನ್ ಅವರು ಕೊಲರಾಡೊ, ಕನೆಕ್ಟಿಕಟ್, ದೆಲವರೆ,ಇಲಿನೋಸಿಸ್, ಮೇರಿಲ್ಯಾಂಡ್, ಮಸೆಚೆಂಟ್ಸ್, ನ್ಯೂ ಜೆರ್ಸಿ, ನ್ಯೂ ಮೆಕ್ಸಿಕೋ, ನ್ಯೂಯಾರ್ಕ್, ರೋಹ್ಡೆ, ವರ್ಮೆಂಟ್ ಮತ್ತು ವರ್ಜೀನಿಯಾ ರಾಜ್ಯದಲ್ಲಿ ಗೆಲುವು ಸಾಧಿಸಿದ್ದಾರೆ.

ಇದಲ್ಲದೆ ಫ್ಲಾರಿಡಾ, ಜಾರ್ಜಿಯಾ, ನಾರ್ತ್ ಕರೋಲಿನಾ, ಟೆಕ್ಸಾಸ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಎದುರಾಗಿದ್ದು ಯಾರಿಗೆ ಎನ್ನುವುದು ಕುತೂಹಲ ಕೆರಳಿಸಿದೆ.

೨೦೧೬ರ ಚುನಾವಣೆಯಲ್ಲಿ ಗೆಲುವು ಪಡೆದಿದ್ದ ಬಹುತೇಕ ರಾಜ್ಯಗಳಲ್ಲಿ ಈ ಬಾರಿಯೂ ಡೊನಾಲ್ಡ್ ಟ್ರಂಪ್ ಗೆಲವು ಸಾಧಿಸಿದ್ದಾರೆ

ಕಳೆದ ಬಾರಿ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಹಿಲರಿ ಕ್ಲಿಂಟನ್ ಅವರು ಗೆಲುವು ಸಾಧಿಸಿದ್ದ ರಾಜ್ಯಗಳಲ್ಲಿ ಜೋ ಬಿಡೆನ್ ಗೆಲವು ಸಾಧಿಸಿ ನಗೆ ಬೀರಿದ್ದಾರೆ.

ಅಂತಿಮವಾಗಿ ಅಮೆರಿಕದ ಅಧ್ಯಕ್ಷರಾಗಿ ಇಬ್ಬರಲ್ಲಿ ಯಾರು ಆಯ್ಕೆಯಾಗಲಿದ್ದಾರೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವವೇ ಅಮೆರಿಕಾದತ್ತ ನೋಡುತ್ತಿದೆ.

ಅಮೆರಿಕಾದಲ್ಲಿ ೫೩೮ ಎಲೆಕ್ಟ್ರೋರಲ್ ಕಾಲೇಜು ಪ್ರತಿನಿಧಿಗಳಿದ್ದಾರೆ. ಇವರನ್ನು ಜನಪ್ರತಿನಿಧಿಗಳು ಎಂದು ಕರೆಯುತ್ತಾರೆ. ಅಧ್ಯಕ್ಷರಾಗಿ ಆಯ್ಕೆಯಾಗಲು ೨೭೦ ಜನಪ್ರತಿನಿಧಿಗಳ ಮತಗಳು ಅಗತ್ಯ. ಸದ್ಯದ ಟ್ರೆಂಡ್ ಪ್ರಕಾರ ಜೋ ಬಿಡೆನ್ ಮುಂಚೂಣಿಯಲ್ಲಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರಿಗಿಂತ ಹಿಂದೆ ಇದ್ದಾರೆ. ಹೀಗಾಗಿ ಅಂತಿಮ ಸುತ್ತಿನ ಮತ ಎಣಿಕೆ ಪೂರ್ಣಗೊಳ್ಳುವ ತನಕ ಅಮೆರಿಕ ಅಧ್ಯಕ್ಷರು ಯಾರಾಗಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ.

ದೊಡ್ಡಣ್ಣನ ಪಟ್ಟಕ್ಕಾಗಿ ತೀವ್ರ ಸ್ಪರ್ಧೆ.

ಜೋ ಬಿಡೆನ್ ಡೊನಾಲ್ಡ್ ಟ್ರಂಪ್ ನಡುವೆ ಪೈಪೋಟಿ.

ಅಧ್ಯಕ್ಷರಾಗಲು ೨೭೦ ಮ್ಯಾಜಿಕ್ ಸಂಖ್ಯೆ ಅಗತ್ಯ.

ಸದ್ಯದ ಟ್ರಂಡ್ ಪ್ರಕಾರ ಜೋ ಬಿಡೆನ್ ಮುನ್ನೆಡೆ.

ಕುತೂಹಲ ಕೆರಳಿಸಿದ ಅಮೆರಿಕ ಅಧ್ಯಕ್ಷ ಚುನಾವಣೆ.

ವಿಶ್ವದ ಚಿತ್ತ ಅಮೆರಿಕದತ್ತ.

ಸುಪ್ರೀಂ ಕೋರ್ಟ್ ಮೊರೆ
ಅಮೆರಿಕದ ಅಧ್ಯಕ್ಷರಾಗಿ ಈಗಾಗಲೇ ತಾವು ಗೆಲುವು ಸಾಧಿಸಿದ್ದೇವೆ ಎಂದು ಟ್ರಂಪ್ ತನ್ನ ಬೆಂಬಲಿಗರಿಗೆ ಹೇಳಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ ತಾವು ಜಯಗಳಿಸಿದ್ದೇನೆ. ಒಂದು ವೇಳೆ ಫಲಿತಾಂಶದಲ್ಲಿ ಏರುಪೇರಾದರೆ, ತಾವು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಅವರು ತಿಳಿಸಿದ್ದಾರೆ.
ಪ್ರತಿಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರು, ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿರುವ ಅವರು, ಈ ಕುರಿತು ನ್ಯಾಯಾಲಯದ ಕಟೆಕಟೆ ಏರುವುದಾಗಿ ತಿಳಿಸಿದ್ದಾರೆ.