ಟ್ರಂಪ್ ಕರ್ತವ್ಯಕ್ಕೆ ಯೋಗ್ಯ ವ್ಯಕ್ತಿಯಲ್ಲ: ಬೈಡೆನ್

ವಾಷಿಂಗ್ಟನ್, ಜ.೯- ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕರ್ತವ್ಯಕ್ಕೆ ಯೋಗ್ಯ ವ್ಯಕ್ತಿ ಅಲ್ಲ ಎಂದು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ವಾಗ್ದಾಳಿ ನಡೆಸಿದ್ದಾರೆ.

ಅಮೇರಿಕಾದ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ನಡೆಸಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಗಮಿತ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪ ಸಲ್ಲಿಸಲು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಚೆಂಬರ್ ಡೆಮಾಕ್ರಟಿಕ್ ಕೋಕಸ್ ನಡುವೆ ನಡೆದ ಸಭೆಯ ಬಳಿಕ ಜೋ ಬೈಡೆನ್ ಈ ಹೇಳಿಕೆ ನೀಡಿದ್ದಾರೆ

ಡೊನಾಲ್ಡ್ ಟ್ರಂಪ್ ಅವರು ಕೆಲಸಕ್ಕೆ ಯೋಗ್ಯರಲ್ಲ ಎಂದು ಬಹಳ ಹಿಂದೆಯೇ ಯೋಚಿಸಿದ್ದೆ. ಹಾಗೊಂದು ವೇಳೆ ಆರು ತಿಂಗಳು ಬಾಕಿ ಉಳಿದಿದ್ದರೆ ನಮ್ಮಿಂದಾಗುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಈಗ ಎರಡು ವಾರಕ್ಕಿಂತ ಕಡಿಮೆ ಸಮಯ ಇರುವ ಕಾರಣ ಅಧಿಕಾರ ವಹಿಸಿಕೊಳ್ಳುವ ಗಮನ ಕೇಂದ್ರೀಕರಿಸಿದ್ದಾರೆ ಎಂದು ಹೇಳಿದ್ದಾರೆ.

ಜನವರಿ೨೦ ಅಧಿಕಾರ ಸ್ವೀಕಾರ:

ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಇದೆ ತಿಂಗಳು ೨೦ರಂದು ಕೊನೆಗೊಳ್ಳಲಿದ್ದು ಅಂದೇ ಅಮೆರಿಕದ ೪೬ನೇ ಅಧ್ಯಕ್ಷರಾಗಿ ಜೋ ಬೈಡನ್ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

೨೦೨೪ ರಲ್ಲಿ ಮತ್ತೆ ಡೊನಾಲ್ಡ್ ಟ್ರಂಪ್ ಚುನಾವಣೆಗೆ ಸ್ಪರ್ಧಿಸದಂತೆ ತಡೆಹಿಡಿಯುವ ಎಲ್ಲಾ ಸಾಧ್ಯತೆಗಳಿವೆ.೨೦೧೯ ರಲ್ಲಿ ಕೊನೆಯ ಬಾರಿಗೆ ದೋಷಾರೋಪ ಟ್ರಂಪ್ ವಿರುದ್ಧ ಸಲ್ಲಿಕೆಯಾಗಿತ್ತು ಹೀಗಾಗಿ ಎರಡು ಬಾರಿ ದೋಷಾರೋಪ ಎದುರಿಸಲಿರುವ ಏಕಮಾತ್ರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಾಗಿದ್ದಾರೆ..

ಡೋನಾಲ್ಡ್ ಟ್ರಂಪ್ ಅವರನ್ನು ವಜಾ ಮಾಡಲು ಕ್ಯಾಬಿನೆಟ್ ಪ್ರಯತ್ನಿಸುತ್ತಿದ್ದರೆ ಮುಂದಿನ ವಾರದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಲು ಡೆಮಾಕ್ರಿಟಿಕ್ ಗಳು ಚರ್ಚೆಯಲ್ಲಿ ನಿರತರಾಗಿದ್ದಾರೆ