ಟ್ರಂಪ್‍ಗೆ ಬರಮಾಡಿಕೊಂಡು ಭಾರತಕ್ಕೆ ಕೋರೋನಾ ಅಂಟಿಸಿದ ಮೋದಿ : ಧ್ರುವನಾರಾಯಣ

ಬೀದರ: ಅಮೇರಿಕಾದ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್‍ರನ್ನು ದೇಶಕ್ಕೆ ಬರಮಾಡಿಕೊಂಡು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಇಡೀ ಭಾರತಿಯರ ಪಾಲಿಗೆ ಕೋರೋನಾ ಭಾಗ್ಯ ನೀಡಿದ್ದಾರೆ ಎಂದು ಚಾಮರಾಜನಗರ ಮಾಜಿ ಸಂಸಸದರೂ ಹಾಗೂ ಆರೋಗ್ಯ ಹಸ್ತ ಕಾರ್ಯಕ್ರಮದ ಉಸ್ತುವಾರಿಗಳಾದ ಧ್ರುವನಾರಾಯಣ ಲೇವಡಿ ಮಾಡಿದರು.

ನಗರದ ಎಮ್.ಎಸ್.ಪಾಟೀಲ ಫಂಕ್ಷನ್ ಹಾಲ್‍ನಲ್ಲಿ ಬೀದರ್ ಜಿಲ್ಲೆಯಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ಉದ್ಘಾಟಿಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ನಿಯಂತ್ರಣ ಮಾಡುವಲ್ಲಿ ಉಭಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಆರೋಪಿಸಿದರು.

ಜನಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು ಈಗ ಕೋರೋನಾ ಸೊಂಕಿತ ಸಂಖ್ಯೆಯಲ್ಲೂ ದ್ವಿತೀಯ ಸ್ಥಾನಕ್ಕೆ ಬಂದು ತಲುಪಿದೆ. ದೇಶದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನಕ್ಕೆ ಬಂದು ತಲುಪಲು ರಾಜ್ಯ ಸರ್ಕಾರದ ವೈಫಲ್ಯವೇ ಮುಖ್ಯ ಕಾರಣವಾಗಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರಕ್ಕೂ ಕೋವಿಡ್ ಸೊಂಕು ಕಾಡುತ್ತಿದೆ ಎಂದು ವ್ಯಂಗವಾಡಿದ ಅವರು, ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರೂ ಮತ್ತು ಮುಖ್ಯಮಂತ್ರಿಗಳಲ್ಲಿ ಒಮ್ಮತದ ನಿರ್ಧಾರಗಳಿಲ್ಲದ ಕಾರಣ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಕೊರೋನಾ ಮಹಾಸ್ಪೋಟಕ್ಕೆ ಕಾರಣವಾಗಿದೆ ಎಂದರು.

ಪಕ್ಕದ ಕೇರಳ ಸರ್ಕಾರದ ಸೂಕ್ತ ಕ್ರಮದಿಂದಾಗಿ ಅಲ್ಲಿ ಕೋವಿಡ್ ಸಂಪೂರ್ಣ ನಿಯಂತ್ರಣದಲ್ಲಿದೆ. ಜಗತ್ತಿಗೆ ಕೊರೋನಾ ಅಚಿಟಿಸಿದ ದೇಶ ಚೀನಾದಲ್ಲಿ ಸಂಪೂರ್ಣ ನಿಯಂತ್ರಣದಲ್ಲಿದೆ. ಅಲ್ಲಿ ಜಿ.ಡಿ.ಪಿ ಸಹ ಋಣಾತ್ಮಕವಾಗಿಲ್ಲ. ಶ್ರೀಲಂಕಾ, ದಕ್ಷಿಣ ಆಫ್ರಿಕಾದಂತಹ ಬಡ ರಾಷ್ಟ್ರಗಳಲ್ಲಿ ಈ ಮಹಾಮಾರಿ ನಿಯಂತ್ರಣದಲ್ಲಿದೆ. ಆದರೆ ಭಾರತದಲ್ಲಿ ಆರ್ಥಿಕ ಸ್ಥಿತಿ ಪಾತಾಳಕ್ಕೆ ಜಿಗಿದಿದೆ. ಇಲ್ಲಿ ಹಸಿವಿನ ಪ್ರಮಾಣ 106 ನೇ ಸ್ಥಾನದಲ್ಲಿ ಕುಸಿದಿದ್ದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಆರೋಗ್ಯ ಹಸ್ತ ಕಾರ್ಯಕ್ರಮದ ಬಗ್ಗೆ ವಿವವರಿಸಿದ ಧ್ರುವನಾರಾಯಣ ಅವರು, ರಾಜ್ಯದ 224 ವಿಧಾನ ಸಭೆ ಕ್ಷೇತ್ರಗಳಿಗೆ ಈ ಯೋಜನೆ ಪ್ರಚುರಪಡಿಸಲಾಗಿದೆ. ಇದಕ್ಕಾಗಿ ಪಕ್ಷದ ಎಲ್ಲ ವರಿಷ್ಟರು, ಹಾಲಿ ಹಾಗೂ ಮಾಜಿ ಶಾಸಕರು ಮತ್ತು ಸಂಸದರು ತಮ್ಮ ಸ್ವಂತ ಹಣ ಜಮಾಯಿಸಿ ಒಟ್ಟು ಕೋಟಿ ಖರ್ಚಿನಲ್ಲಿ ರಾಜ್ಯದ ಆರುವರೆ ಕೋಟಿ ಜನರಿಗೆ ಕೋವಿಡ್ ಟೆಸ್ಟ್ ಮಾಡುವ ಮೂಲಕ ಅದರ ಚೈನ್ ಕಡಿಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರ ನೇತೃತ್ವದಲ್ಲಿ ಈ ಅಭಿಯಾನ ಜರುಗುತ್ತಿದ್ದು, ಅವರ ಮಾರ್ಗದರ್ಶನದಂತೆ ತಾನು ಈಗಾಗಲೇ 16 ಜಿಲ್ಲೆಗಳಲ್ಲಿ ಸಂಚರಿಸಿ ಆರೋಗ್ಯ ಹಸ್ತ ಯೋಜನೆಗೆ ಚಾಲನೆ ನೀಡಲಾಗಿದೆ. ರಾಜ್ಯದ ಪ್ರತಿಯೊಂದು ಗ್ರಾಮ್ ಪಂಚಾಯತ್ ಕ್ಷೇತ್ರಕ್ಕೆ ಒಂದು ಕಿಟ್ ಹಾಗೂ ಇಬ್ಬರು ಕಾರ್ಯಕರ್ತರನ್ನು ನಿಯೋಜಿಸಿ ಅವರಿಗೆ ತರಬೇತಿ ನೀಡಿ ಈ ಮಹಾಮಾರಿಗೆ ಮಾರಿ ಹಬ್ಬ ತೋರಿಸಲಾಗುತ್ತಿದೆ ಎಂದು ವಿವರಿಸಿದರು.

ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಶಾಸಕ ರಹಿಮ್ ಖಾನ್, ವಿಧಾನ ಪರಿಷತ್ ಸದಸ್ಯರಾದ ಅರವಿಂದಕುಮಾರ ಅರಳಿ, ಚಂದ್ರಶೇಖರ ಪಾಟೀಲ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮುಲಗೆ, ಐ.ಎಮ್.ಎ ಮಾಜಿ ಅಧ್ಯಕ್ಷ ಡಾ.ರವಿಂದ್ರ, ಇತರೆ ವೈದ್ಯರಾದ ಡಾ.ಶ್ರೀನಿವಾಸ, ಡಾ.ಮಧುಸೂದನ್, ಡಾ.ಶಂಕರ, ಡಾ.ಮಕ್ಸುದ್ ಚಂದಾ ಸೇರಿದಂತೆ ಪಕ್ಷದ ಇತರೆ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.