ಟ್ಯಾಕ್ಸಿ ,ಆಟೋ ಚಾಲಕರಿಗೆ ಸಹಾಯ ಧನ ನೀಡಲು ಒತ್ತಾಯ

ರಾಯಚೂರು, ಏ.೨೭- ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ಸಹಾಯ ಧನವನ್ನು ನೀಡಬೇಕೆಂದು ಒತ್ತಾಯಿಸಿ
ಕರ್ನಾಟಕ ಚಾಲಕರ ಒಕ್ಕೂಟದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಕಳೆದ ವರ್ಷ ಕೊರೊನಾ ಹರಡಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಲಾಗಿತ್ತು . ಆ ಸಂದರ್ಭದಲ್ಲಿ ತೊಂದರೆಯನ್ನು ಅನುಭವಿಸಿದ್ದೇವೆ. ಸದರಿ ಕಾರಣದಿಂದ ರಾಜ್ಯ ಮುತ್ತು ಕೇಂದ್ರ ಸರ್ಕಾರವು ಕಳೆದ ವರ್ಷ ಎಲ್ಲಾ ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ೫ ಸಾವಿರ -ರೂ ಸಹಾಯ ಧನವನ್ನು ನೀಡಿ ತುಂಬಾ ಉಪಕಾರ ಮಾಡಲಾಗಿತ್ತು.ಆದರೆ ಈ ವರ್ಷ ಕೊರನಾ ೨ ನೇ ಅಲೆ ಹಿನ್ನೆಲೆ ಮತ್ತೆ ಲಾಕ್ಡೌನ್ ಮಾಡಲಾಗಿದೆ.ಈ ಲಾಕ್ ಡೌನ್ ಪ್ರಕ್ರಿಯೆಯು ಎಷ್ಟು ದಿನಗಳ ವರೆಗೆ ಮುಂದುವರೆಯುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ . ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಮಾನ್ಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರಿಗೆ ಸಹಾಯ ಧನವನ್ನು ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಾಫರ್ ಸಾದಿಕ್, ಮೊಹಮ್ಮದ್ ನಿರಾಜ್,ಸೇರಿದಂತೆ ಇತರರು ಇದ್ದರು.