ಟ್ಯಾಕ್ಸಿಚಾಲಕನ ಕೊಲೆ ಪ್ರಕರಣ ಮೂವರು ಆರೋಪಿಗಳ ಬಂಧನ

ಕಲಬುರಗಿ ಏ 22: ಮಂಗಳವಾರ ರಾತ್ರಿ ನಗರದ ರಿಂಗ್ ರಸ್ತೆ ಟಿಪ್ಪು ಸುಲ್ತಾನ್ ಚೌಕದ ಬಳಿ ಚಾಕುವಿನಿಂದ ಹಲ್ಲೆಗೀಡಾಗಿ ಭೀಕರವಾಗಿ ಕೊಲೆಯಾದ ಮಿಲತ್ ನಗರ ನಿವಾಸಿ ಟ್ಯಾಕ್ಸಿ ಚಾಲಕ ಜಿಶಾನ್ ಉಸ್ಮಾನ್ (25) ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ರೋಜಾ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನದೀಮ ಉರ್ಫ ನದೀಮಪಾಶಾ ಮುನ್ನಾಶೇಖ (26),ನಯಿಮ ಮುನ್ನಾಶೇಖ (25) ಮತ್ತು ರಹೀಮ ಮುನ್ನಾಶೇಖ (22) ಬಂಧಿತ ಆರೋಪಿಗಳು.
ಇವರು ಕಮಾಲೆ ಮುಜರತ್ ದರ್ಗಾ ಹತ್ತಿರದ ಯಾದುಲ್ಲಾ ಕಾಲೋನಿ ನಿವಾಸಿಗಳು. ವೈಯಕ್ತಿಕ ಕಾರಣದಿಂದ ಕೊಲೆ ನಡೆದಿದ್ದು ಆರೋಪಿಗಳ ವಿರುದ್ಧ ಈ ಮೊದಲು ಯಾವುದೇ ಪ್ರಕರಣ ರೌಡಿಶೀಟ್ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಗಳ ಬಂಧನಕ್ಕೆ ರೋಜಾ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.