ಟ್ಯಾಂಕರ್ ಡಿಕ್ಕಿ: ಮೂವರ ಸಾವು

ಕಲಬುರಗಿ,ಡಿ.1-ಕೆಟ್ಟು ನಿಂತ ಗೂಡ್ಸ್ ವಾಹನ ದುರಸ್ತಿ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಸಿಮೆಂಟ್ ಟ್ಯಾಂಕರ್ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಮೃತಪಟ್ಟ ಘಟನೆ ಚಿತ್ತಾಪುರ ತಾಲ್ಲೂಕಿನ ಇವಣಿ ಬಳಿ ಗುರುವಾರ ರಾತ್ರಿ ನಡೆದಿದೆ.
ಪ್ರಶಾಂತ, ವಿಠಲ್ ಹಾಗೂ ಮಂಗಲಿ ಮೃತಪಟ್ಟ ದುರ್ದೈವಿಗಳು. ಕಲಬುರಗಿಯಿಂದ ಸೇಡಂ ಮಾರ್ಗವಾಗಿ ಹೈದರಾಬಾದಗೆ ತೆರಳುವಾಗ ಗೂಡ್ಸ್ ಲಾರಿ ಕೆಟ್ಟು ನಿಂತದ್ದು, ಲಾರಿ ರಿಪೇರಿ ಮಾಡುತ್ತಿದ್ದ ವೇಳೆ ಸಿಮೆಂಟ್ ಟ್ಯಾಂಕರ್ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನಪ್ಪಿದ್ದು ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಮಾಡಬಾಳ ಪೆÇಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.