ಟ್ಯಾಂಕರ್ ಡಿಕ್ಕಿ ಓರ್ವ ಮಹಿಳೆ ಸಾವು, ಮತ್ತೋರ್ವ ಮಹಿಳೆಗೆ ಗಾಯ


ಸಂಜೆವಾಣಿ ವಾರ್ತೆ
ಬಳ್ಳಾರಿ, ಡಿ.25: ನಗರದ ಗವಿಯಪ್ಪ ಸರ್ಕಲ್ ನಲ್ಲಿ ನಿನ್ನೆ  ಪೆಟ್ರೋಲ್ ಟ್ಯಾಂಕರ್  ಡಿಕ್ಕಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರೆ ಮತ್ತೋರ್ವ ಮಹಿಳೆ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮುಂಡರಗಿ ಗ್ರಾಮದ ರಫಿಯಾ ಬೇಗಂ (26) ಮೃತ ದುರ್ದೈವಿ. ಸಬೀನಾ ತೀವ್ರವಾಗಿ ಗಾಯಗೊಂಡಿದ್ದು ವಿಮ್ಸ್‌ನಲ್ಲಿ‌ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
ಈ ಮಹಿಳೆಯರು ಜೊತೆಯಾಗಿ ನಡೆದು ಹೋಗುತ್ತಿದ್ದರು. ಇನ್ನೇನು ರಸ್ತೆ ದಾಟಬೇಕೆನ್ನುವಷ್ಟರಲ್ಲಿ  ಹಿಂದಿನಿಂದ ಬಂದು‌  ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದಿದ್ದಾರೆ.  ರಫೀಯಾ ಬೇಗಂ ಮೇಲೆ ಟ್ಯಾಂಕರ್‌ ಹರಿದಿದೆ.
ಗಂಭೀರ ಗಾಯಗೊಂಡಿದ್ದ  ಸಬೀನಾಳನ್ನು  ಕೂಡಲೇ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಚಿಕಿತ್ಸೆ ಮುಂದುವರಿದಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ, ಟ್ಯಾಂಕರ್‌ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.