ಟೋಲ್ ಗೇಟ್ ಪ್ರಕರಣ ಹಲ್ಲೆಗೆ ಖಂಡನೆ

ಕೊಪ್ಪಳ ಏ. 2 : ತಾಲೂಕಿನ ಹಿಟ್ನಾಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಜಿ ಎಂ ಆರ್ ಸಂಸ್ಥೆಯ ಟೋಲ್ ಗೇಟ್ ಬಳಿ ಟೋಲ್ ಹಣ ಸಂಗ್ರಹಣೆ ವಿಷಯದಲ್ಲಿ ರಿಯಾಯಿತಿ ಕೋರಿದ ಸರಕಾರಿ ಅಧಿಕಾರಿ ಮೇಲೆ ಟೋಲ್ ಗೇಟ್ ಸಿಬ್ಬಂದಿ ಹಲ್ಲೆ ನಡೆಸಿರುವುದು ತೀರ್ವ ನೋವಾಗಿದೆ ಕೂಡಲೇ ತಪ್ಪಿಸ್ಥರ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯ ವೇದಿಕೆ ಪದಾಧಿಕಾರಿಗಳು ಸರ್ಕಾರಕ್ಕೆ ಒತ್ತಾಯಿಸಿದೆ
ಕರ್ನಾಟಕ ರಾಜ್ಯ ಶೋಷಿತ ಸಮುದಾಯ ವೇದಿಕೆ ಪದಾಧಿಕಾರಿಗಳು ಶನಿವಾರ ಕೊಪ್ಪಳದಲ್ಲಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಬೇಗಾರ್ ನೇತೃತ್ವದಲ್ಲಿ ಸಭೆ ಸೇರಿ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ನಡೆದಿರುವ ಪ್ರಕರಣ ತೀರ್ವ ನೋವಾಗಿದೆ ಸರ್ಕಾರದ ಸಂಸ್ಥೆಯಾಗಿರುವ ಟೋಲ್ ಸಂಗ್ರಹಣಾ ಕೇಂದ್ರದಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಅಮಾನವೀಯ ಹಲ್ಲೆ ನಡೆದಿರುವುದು ಸಮಾಜ ವಲ್ಲ ಇದು ಕಾಯ್ದೆ ಕ್ರಮವು ಅಲ್ಲ ಯಾವುದೇ ಕಾರಣಕ್ಕೂ ತಪ್ಪಿತಸ್ಥರನ್ನು ಬಿಡಬಾರದು ಓಡಿ ಹೋಗಿರುವ ಆರೋಪಿಗಳನ್ನು ಸಹ ಕೂಡಲೇ ಪತ್ತೆಹಚ್ಚಿ ಬಂಧಿಸಬೇಕು ಇನ್ನು ಮುಂದೆ ಈ ರೀತಿ ಆಗದಂತೆ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತ ಸಂಬಂಧಿಸಿದ ಜಿ ಎಂ ಆರ್ ಸಂಸ್ಥೆಯ ಮುಖ್ಯಸ್ಥರಿಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು
ಸರ್ಕಾರವಾಗಲಿ ಜಿಲ್ಲಾಡಳಿತವಾಗಲಿ ಸದರಿ ಟೋಲ್ ಗೇಟ್ ಹಲ್ಲೆ ಪ್ರಕರಣದಲ್ಲಿ ನಿರ್ಲಕ್ಷ ವಿಳಂಬ ನೀತಿ ಅನುಸರಿಸಿದರೆ ಮುಂಬರುವ ದಿನಗಳಲ್ಲಿ ಜಿಲ್ಲಾಡಳಿತದ ಮುಂದೆ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಬೇಗಾರ್ ಅವರು ಎಚ್ಚರಿಸಿದ್ದಾರೆ
ಸದರಿ ಖಂಡನಾ ಸಭೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಶಿವಯೋಗಪ್ಪ ಬಳ್ಳೊಳ್ಳಿ ಉಪಾಧ್ಯಕ್ಷ ಮಂಜುನಾಥ್ ನಾಯಕ್ ಪ್ರಧಾನ ಕಾರ್ಯದರ್ಶಿ ನೀಲಕಂಠ ಬಾಬು ನಿಲೋಗಲ್ ಸಹಕಾರ್ಯದರ್ಶಿ ಸೋಮಶೇಖರ್ ಜಿ ಬಿ ಕೋಶಾಧ್ಯಕ್ಷ ಬಂಡೆಪ್ಪ ಕತ್ತಿ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸದಸ್ಯರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು