`ಟೋಬಿ’ ಆರ್ಭಟಕ್ಕೆ ಸಜ್ಜು ರಾಜ್ ಶೆಟ್ಟಿ ಹೊಸ ಅವತಾರ

ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ  ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ” ಟೋಬಿ” ಚಿತ್ರ ಆರ್ಭಟಕ್ಕೆ ಸಜ್ಜಾಗಿದೆ. ಮಾರಿ ಮಾರಿ ಮಾರಿಗೆ ದಾರಿ ಅನ್ನುವ ಅಡಿ ಬರಹದೊಂದಿಗೆ ಕನ್ನಡದಲ್ಲಿ  ಸದ್ದು ಮಾಡಲು ಮುಂದಾಗಿದೆ.

ಹಿರಿ- ಕಿರಿಯ ಕಲಾವಿದರ ಸಂಗಮದಂತಿರುವ ಟೋಬಿ ನಾಳೆ ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ರಾಜ್ ಬಿ ಶೆಟ್ಟಿ ಮೂಗಿಗೆ ದೊಡ್ಡ ಮೂಗುತಿ ಹಾಕಿಕೊಂಡು ಕುರಿ ಮೇಲೆ ಏರಿ ಬರುವ ಸನ್ನಿವೇಶಗಳು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸುವಂತೆ ಮಾಡಿದೆ. ಚಿತ್ರಕ್ಕೆ ರವಿ ರೈ ಕಳಸ, ಕಾಫಿ ಗ್ಯಾಂಗ್ ಸ್ಟುಡಿಯೋ ಮತ್ತು ಬಾಲು ಅರವಣಕರ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

ಟಿ.ಕೆ ದಯಾನಂದ ಅವರ ಮೂಲ ಕೃತಿ ಆಧರಿಸಿ ರಾಜ್ ಶೆಟ್ಟಿ ಸಿನಿಮಾ ರೂಪ ನೀಡಿದ್ದಾರೆ. ಚಿತ್ರದಲ್ಲಿ ಚೈತ್ರ ಆಚಾರ್, ಸಂಯುಕ್ತ ಹೊರನಾಡು,ರಾಜ್ ದೀಪಕ್ ಶೆಟ್ಟಿ, ಗೋಪಾಲ ಕೃಷ್ಣ ದೇಶಪಾಂಡೆ ಸೇರಿದಂತೆ ಹಲವು ಕಲಾವಿದರಿದ್ದಾರೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕರಲ್ಲಿ ಒಬ್ಬರಾದ ಬಾಲು ಅರವಣಕರ್ , ಕರಾವಳಿ ಭಾಗದ ಅಪರೂಪದ ಕಥೆಯನ್ನು ಚಿತ್ರದ ಮೂಲಕ ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ. ಇದೊಂದು ರಿವೇಂಜ್ ಡ್ರಾಮ. ರಾಜ್ ಬಿ.ಶೆಟ್ಟಿ, ಇದುವರೆಗೂ ಕಾಣಿಸಿದ ರೀತಿಯಲ್ಲಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಬಜೆಟ್ ನಲ್ಲಿಯೂ ಹೆಚ್ಚಿನ ಹಣ ಹೂಡಿದ್ದೇವೆ.  ರಾಜ್ಯದಲ್ಲಿ 175 ಕ್ಕೂ ಅಧಿಕ   ಏಕ ಪರದೆ ಚಿತ್ರಮಂದಿರ, 60 ಕ್ಕೂ ಅಧಿಕ‌ ಮಲ್ಟಿಫ್ಲೆಕ್ಸ್ ,ನಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು ಇದೆ ವೇಳೆ ಹೊರ ರಾಜ್ಯದ ಸುಮಾರು 40 ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಅದರ ಪ್ರತಿಕ್ರಿಯೆ ನೋಡಿಕೊಂಡು ಬೇರೆ ಬೇರೆ ಭಾಷೆಯಲ್ಲಿ  ಚಿತ್ರ ಬಿಡುಗಡೆ ಮಾಡಲಾಗುವುದು ಎಂದರು.

ಚಿತ್ರಕ್ಕೆ ಇಲ್ಲಿಯ ತನಕ 11 ಕೋಟಿ ರೂಪಾಯಿ ಗಡಿ ದಾಟಿದೆ. ಚಿತ್ರವನ್ನು ಜನ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೋಬಿ

ರಾಜ್ ಬಿ ಶೆಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹು‌ನಿರೀಕ್ಷಿತ ಚಿತ್ರ ಟೋಬಿ ನಾಳೆ ರಾಜ್ಯಾದ್ಯಂತ ತೆರೆಗೆ ಬರಲಿದೆ. ರಾಜ್ಯ ಹೊರ ರಾಜ್ಯಗಳಲ್ಲಿ ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ. ರಾಜ್ಯದ 175 ಚಿತ್ರಮಂದಿರ, 60 ಮಲ್ಟಿಪ್ಲೆಕ್ಸ್ ಮತ್ತು ಹೊರ ರಾಜ್ಯದಲ್ಲಿ 40  ಮಲ್ಟಿಫ್ಲೆಕ್ಸ್ ನಲ್ಲಿ ಚಿತ್ರ ತೆರೆಗೆ ಬರಲಿದೆ