
ಹುಮನಾಬಾದ:ಆ.28:ಕಲ್ಬುರ್ಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಸಮುದಾಯ ಹಾಗೂ ಕೊಡಗು ಜಿಲ್ಲೆಯಲ್ಲಿ ಕುರುಬ ಸಮುದಾಯ ಪರಿಶಿಷ್ಟ ಪಂಗಡಕ್ಕೆ (ಎಸ್.ಟಿ.) ಸೇರುತ್ತವೆ. ಆ ಸಮುದಾಯಗಳಿಗೆ ವಿಳಂಬ ಮಾಡದೇ ಆಯಾ ಜಿಲ್ಲಾಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡಲು ಕ್ರಮ ವಹಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಶುಕ್ರವಾರ ಗೃಹ ಕಛೇರಿ ಕೃಷ್ಣಾದಲ್ಲಿ ಮೂರು ಜಿಲ್ಲೆಗಳ ಗೊಂಡ ಸಮುದಾಯ ಹಾಗೂ ಕೊಡಗು ಜಿಲ್ಲೆಯ ಕುರುಬ ಸಮುದಾಯದವರು ಎಸ್.ಟಿ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪತ್ರ ಪಡೆಯಲು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಆ ಸಮುದಾಯಗಳ ಮುಖಂಡರಿಂದ ಅಹವಾಲುಗಳನ್ನು ಆಲಿಸಿದರು. ಬಳಿಕ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮೂರು ಜಿಲ್ಲೆಗಳಲ್ಲಿನ ಯಾವುದೇ ಕುಟುಂಬ ಗೊಂಡ ಸಮುದಾಯಕ್ಕೆ ಸೇರಿರುವ ಬಗ್ಗೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದವರು ವಿಳಂಬ ಮಾಡದೇ ಜಾತಿ ಮತ್ತು ಸಿಂಧುತ್ವ ಪತ್ರ ನೀಡಬೇಕು, ವಿಳಂಬ ಮಾಡಿದರೆ ಜಿಲ್ಲಾಧಿಕಾರಿಗಳನ್ನು ಹೊಣೆಯಾಗಿಸಿ ಅಮಾನತು ಮಾಡಲಾಗುವುದು ಎಂದಿದ್ದಾರೆ. ಅದರೆ ಟೋಕ್ರಿಕೋಳಿ ಸಮುದಾಯಗಳಿಗೆ ಏಕೆ ಕಡೆಗಣಿಸಿದ್ದಾರೆ, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ವಿಧಾನ ಸಭಾ ಸದಸ್ಯರಾದ ಎನ್.ರವಿಕುಮಾರ ಹಾಗೂ ಸಭಾಪತಿಗಳಾದ ರಘುನಾಥ ಮಲ್ಕಾಪೂರೆರವರು ಗೊಂಡ ಸಮುದಾಯ, ಟೋಕ್ರಿಕೋಳಿ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕು, ಹಾಗೂ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದವರು ವಿಳಂಬ ಮಾಡದೇ ಜಾತಿ ಮತ್ತು ಸಿಂಧುತ್ವ ಪತ್ರ ನೀಡಬೇಕೆಂದು ಬಸವರಾಜ ಬೊಮ್ಮಾಯಿರವರು ಸಿಎಂ ಆಗಿದ್ದ ಸಂದರ್ಭದಲ್ಲಿ ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಎರಡು ಸಮುದಾಯಗಳಿಗೆ ಸಮ ಪಾಲು ಸಮಬಾಳು ಎಂದ ಹಾಗೆ ನಡೆದುಕೊಳ್ಳಬೇಕಾದರೆ, ಸದ್ಯ ಗೊಂಡ (ಎಸ್.ಟಿ)ಸಮುದಾಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಟೋಕ್ರಿಕೋಳಿ ಸಮುದಾಯಕ್ಕೆ ಏಕೆ ದೂರ ತಳ್ಳುತ್ತಿದ್ದಾರೆ ಎಂಬ ಮಾತು ಟೋಕ್ರಿಕೋಳಿ ಸಮುದಾಯದ ಜನರದಾಗಿದೆ. ನಾವು ಚುನಾವಣೆಯಲ್ಲಿ ಮತ ಹಾಕುವುದಿಲ್ಲವೇ? ಎಂದು ಟೋಕ್ರಿಕೋಳಿ ಸಮುದಾಯದವರ ಪ್ರಶ್ನೆಯಾಗಿದೆ. ಟೋಕ್ರಿಕೋಳಿ ಸಮುದಾಯದ ಲೋಕಸಭಾ ಚುನಾವಣೆಯಲ್ಲಿ ಕಲ್ಬುರ್ಗಿ, ಬೀದರ ಮತ್ತು ಯಾದಗಿರ ಜಿಲ್ಲೆಗಳಲ್ಲಿ ಕೋಲಿ ಸಮಾಜದ ಒಟ್ಟು ಮತದಾರರು 9ಲಕ್ಷ 35 ಸಾವಿರ ಮತದಾರರು ಹೊಂದಿದ್ದಾರೆ, ಸುಮಾರು 60 ವಿಧಾನ ಸಭಾ ಚುನಾವಣೆಯಲ್ಲಿ ನಿರ್ಣಯಕ, ಟೋಕ್ರಿಕೋಳಿ ಸಮುದಾಯದವರಿದ್ದರೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಟೋಕ್ರಿಕೋಳಿ ಸಮುದಾಯಕ್ಕೆ ಕಡೆಗಣಿಸಿದಕ್ಕೆ ದಯಾನಂದ ಮೇತ್ರಿರವರು ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ನಮ್ಮ ಜನಾಂಗಕ್ಕೆ 3 ಜಿಲ್ಲೆಯಲ್ಲಿ ನ್ಯಾಯ ಒದಗಿಸಿಕೊಡಬೇಕು, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದೆಂದು ಬಿಜೆಪಿ ಎಸ್.ಟಿ ಮೋರ್ಚಾದ ತಾಲ್ಲೂಕಾಧ್ಯಕ್ಷ ದಯಾನಂದ ಮೇತ್ರಿರವರು ತಿಳಿಸಿದ್ದಾರೆ.