ಟೋಕಿಯೋನ ನರಿತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ ಭಾರತದ ಕ್ರೀಡಾಪಟುಗಳ ತಂಡ

ಟೋಕಿಯೋ, ಜು.18- ಭಾರತದ 54 ಅಥ್ಲೀಟ್‍ಗಳು ಸೇರಿದಂತೆ 88 ಕ್ರೀಡಾಪಟುಗಳ ತಂಡ ಟೋಕಿಯೋನ ನರಿತಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಭಾನುವಾರ ತಲುಪಿದೆ ಎಂದು ಕೇಂದ್ರ ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯ ತಿಳಿಸಿದೆ.

ಬಿಲ್ಲುಗಾರಿಕೆ, ಬ್ಯಾಡ್‍ಮಿಂಟನ್‍, ಹಾಕಿ, ಜೂಡೋ, ಈಜು, ಭಾರ ಎತ್ತುವಿಕೆ, ಜಿಮ್ನಾಸ್ಟಿಕ್ಸ್ ಮತ್ತು ಟೇಬಲ್‍ ಟೆನ್ನೀಸ್ ಒಳಗೊಂಡ 8 ಕ್ರೀಡಾ ವಿಭಾಗಗಳ ಅಥ್ಲೀಟ್ ಗಳು ಮತ್ತು ನೆರವಿನ ಸಿಬ್ಬಂದಿ ಶನಿವಾರ ರಾತ್ರಿ ಟೋಕಿಯೋಗೆ ತೆರಳಿದ್ದಾರೆ.

127 ಅಥ್ಲೀಟ್ ಗಳೊಂದಿಗೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಮೊದಲ ಬಾರಿಗೆ ಅತಿಹೆಚ್ಚು ಕ್ರೀಡಾ ಪಟುಗಳನ್ನು ಪ್ರತಿನಿಧಿಸುತ್ತಿದೆ.

ಈ ತಿಂಗಳ 23 ರಿಂದ ಒಲಿಂಪಿಕ್ ಕ್ರೀಡಾಕೂಟಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ.