ಟೋಕಿಯೋದಲ್ಲಿ ನಡೆಯುವ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಇಬ್ಬರು ವೈದ್ಯ ಪುತ್ರರೊಂದಿಗೆಎರಡು ಜಂಟಿ ಸಂಶೋಧನಾ ಪ್ರಬಂಧ ಮಂಡಿಸಲಿರುವ ಡಾ. ನಿರಂಜನ್ ವಿ ನಿಷ್ಠಿ

ಕಲಬುರಗಿ;ಮೇ.7: ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಗೌರವ ಕರ್ನಲ್ ಕಮಾಂಡೆಂಟ್, ಹಿರಿಯ ಹೃದ್ರೋಗ ತಜ್ಞ ಡಾ.ನಿರಂಜನ್ ವಿ ನಿಷ್ಠಿಯವರ ಇಬ್ಬರು ಮಕ್ಕಳಾದ ಡಾ. ನಿಧೀಶ್ ನಿರಂಜನ್ ನಿಷ್ಠಿ ಮತ್ತು ಡಾ. ಶಿವಲಿಂಗ ನಿರಂಜನ್ ನಿಷ್ಠಿ ಅವರು, ಮೇ 24 ಮತ್ತು 25 ರಂದು ಜಪಾನ್‍ನ ಟೋಕಿಯೊದಲ್ಲಿ ನಡೆಯಲಿರುವ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಹೃದಯ ಸಂಬಂಧಿ ಕಾಯಿಲೆ ಮತ್ತು ಸಮಸ್ಯೆಗಳ ಕುರಿತು ಎರಡು ಜಂಟಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

ಶ್ರೀ ಬಸವಲಿಂಗಪ್ಪ ನಿಷ್ಠಿ ಹಾರ್ಟ್ ಸೆಂಟರ್‍ನ ಸಂಸ್ಥಾಪಕರಾದ ಡಾ ನಿರಂಜನ್ ವಿ ನಿಷ್ಠಿ ಸ್ಥಾಪಿಸಿದ, ಇಡೀ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮೊಟ್ಟಮೊದಲ ಕ್ಯಾಥ್ ಲ್ಯಾಬ್ ಸೌಲಭ್ಯ ಮತ್ತು ಹೃದ್ರೋಗ ತೀವ್ರ ನಿಗಾ ಘಟಕ ಸೇರಿದಂತೆ ಹಲವು ಪ್ರಥಮಗಳನ್ನು ಹೊಂದಿರುವ ಮೊದಲ ಖಾಸಗಿ ಹೃದ್ರೋಗ ಸಂಸ್ಥೆಯಾಗಿದೆ. ನಿಷ್ಠಿಯವರ ಇಬ್ಬರು ವೈದ್ಯ ಪುತ್ರರಾದ ಡಾ ನಿಧೀಶ್ ನಿರಂಜನ್ ನಿಷ್ಠಿ ಮತ್ತು ಡಾ ಶಿವಲಿಂಗ ನಿರಂಜನ್ ನಿಷ್ಠಿ ಅವರು ವೈದ್ಯಕೀಯ ಶಿಕ್ಷಣದಲ್ಲಿ ಸಂಶೋಧನಾ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ.

“ಸ್ಟಡಿ ಆಫ್ ಕಾರ್ಡಿಯಾಕ್ ಟ್ರೋಪೆÇೀನಿನ್-1 ಇನ್ ಎಸ್‍ಟಿ ಎಲಿವೇಶನ್ ಮಯೋಕಾರ್ಡಿಯಲ್ ಇನ್ಫಾಕ್ರ್ಷನ್ ಅಂಡ್ ಇಟ್ಸ್ ಕಾಂಪ್ಲಿಕೇಶನ್ಸ್” ಮತ್ತು “ಕ್ಲಿನಿಕಲ್ ಪೆÇ್ರಫೈಲ್ ಎಕ್ಯೂಟ್ ಕೋರೋನರಿ ಸಿಂಡ್ರೋಮ್ ಇನ್ ಕೋವಿಡ್-19 ಪೇಶೆಂಟ್ಸ್ ಇನ್ ಪ್ರೊವಿನಿಶಿಯಲ್ ಟೌನ್ ಆಫ್ ಸೌಥ್ ಇಂಡಿಯಾ” ಎಂಬ ವಿಷಯಗಳ ಕುರಿತು ಈ ಅಂತರಾಷ್ಟೀಯ ಸಮ್ಮೇಳನದಲ್ಲಿ ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಈ ಹಿಂದೆ ಅವರು 2020 ರಲ್ಲಿ ಫ್ರಾನ್ಸ್‍ನ ಪ್ಯಾರಿಸ್‍ನಲ್ಲಿ ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿಸ್ಟ್ “ಯೂರೋ-ಪಿಸಿಆರ್ 2020” ನ ಮತ್ತೊಂದು ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ರಾಷ್ಟ್ರೀಯ, ರಾಜ್ಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಮಂಡಿಸಲಾದ ಐದನೇ ಸಂಶೋಧನಾ ಪ್ರಬಂಧ ಇದಾಗಿದೆ. ಬೇರೆ ಬೇರೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವೈದ್ಯಕೀಯ ಸಮ್ಮೇಳನಗಳಲ್ಲಿ ಇನ್ನೆರಡು ಪ್ರಬಂಧಗಳನ್ನು ಪ್ರಸ್ತುತ ಪಡಿಸಿರುವುದು ವಿಶೇಷ.

ಡಾ ನಿಷ್ಠಿ ಅವರು ಸಂಶೋಧನಾ ಕ್ಷೇತ್ರದಲ್ಲಿ ತಮ್ಮ ಆಸಕ್ತಿಯನ್ನು ಅನುಸರಿಸಿದ ಕೆಲವೇ ಕೆಲವು ವೈದ್ಯಕೀಯ ವೃತ್ತಿಪರರಲ್ಲಿ ಒಬ್ಬರಾಗಿದ್ದು ಇವರ ಇಬ್ಬರು ಪುತ್ರರು ತಮ್ಮ ವೈದ್ಯಕೀಯ ಕ್ಷೇತ್ರದ ಸಂಶೋಧನಾ ಕ್ಷೇತ್ರದಲ್ಲಿ ತಮ್ಮ ಆಸಕ್ತಿಯನ್ನು ಮುಂದುವರಿಸುವಲ್ಲಿ ಅವರ ಪ್ರಸಿದ್ಧ ತಂದೆಯ ಹೆಜ್ಜೆಗಳನ್ನು ಅನುಸರಿಸಿದ್ದಾರೆ. ಡಾ ನಿಧೀಶ್ ನಿಷ್ಠಿ ಅವರು ಇಂಟರ್ನಲ್ ಮೆಡಿಸಿನ್‍ನಲ್ಲಿ ಎಂಡಿ ಅಭ್ಯಾಸ ಮಾಡಿದ್ದು, ಶ್ರೀ ಬಸವಲಿಂಗಪ್ಪ ನಿಷ್ಠಿ ಹಾರ್ಟ್ ಸೆಂಟರ್‍ನಲ್ಲಿ ವೈದ್ಯ ವೃತ್ತಿ ಮುಂದುವರೆಸಿದ್ದಾರೆ ಮತ್ತು ಅವರ ಕಿರಿಯ ಸಹೋದರ ಡಾ ಶಿವಲಿಂಗ್ ನಿಷ್ಠಿ ಅವರು ಎಂಡಿ ಅಭ್ಯಾಸ ಮಾಡುತ್ತಿದ್ದಾರೆ.

ಡಾ. ನಿರಂಜನ್ ವಿ ನಿಷ್ಠಿ ಅವರು ಟೋಕಿಯೋ ಸಮ್ಮೇಳನದಲ್ಲಿ ಪ್ರಬಂಧವನ್ನು ಮಂಡಿಸಲು ದೈಹಿಕವಾಗಿ ಹಾಜರಾಗುವುದಿಲ್ಲ ಮತ್ತು ಡಾ. ನಿಧೀಶ್ ನಿಷ್ಠಿ ಮತ್ತು ಡಾ. ಶಿವಲಿಂಗ್ ನಿಷ್ಠಿ ಅವರು ಮೇ 16 ರಂದು ಜಪಾನ್‍ಗೆ ತೆರಳಿ ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ.