ಭಾಲ್ಕಿ:ಅ.30:ತಾಲೂಕಿನಲ್ಲಿ ಟೋಕರಿ-ಕೋಳಿ ಸಮಾಜದ ಅಭಿವೃದ್ಧಿಗೆ ಅಗತ್ಯ ಸಹಾಯ ಸಹಕಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಮರೂರ ಕ್ರಾಸ್ ಸಮೀಪದ ವಾಲ್ಮೀಕಿ ವೃತ್ತದಲ್ಲಿ ಟೋಕರಿ-ಕೋಳಿ ಸಮಾಜದ ವತಿಯಿಂದ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಈ ಸಮಾಜ ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ. ಹಿಂದಿನಿಂದಲೂ ಈ ಸಮುದಾಯದ ಪ್ರಗತಿಗೆ ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತ ಬರಲಾಗುತ್ತಿದೆ. ಸಮುದಾಯ ಭವನ, ಎಸ್ಟಿ ಪ್ರಮಾಣ ಪತ್ರ, ಸೇರಿ ಸರಕಾರದ ವಿವಿಧ ಸವಲತ್ತುಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರೆ, ತಾಪಂ ಇಓ ಸೂರ್ಯಕಾಂತ ಬಿರಾದಾರ್, ಪುರಸಭೆ ಸದಸ್ಯ ಲಕ್ದ್ಮೀ ಶಿವರಾಜ, ಅರವಿಂದ ಜಮಾದಾರ್, ವಿಶ್ವನಾಥ ಬೆಳಕಟ್ಟೆ, ಶಿರಾರಿ ಶೇರಿಕಾರ್, ಅಶೋಕ ಅಂಬಿಗಾರ್, ಸುಭಾಷರಾವ ಹುಗ್ಗೆ, ರಾಮಚಂದ್ರರಾವ ಹುಗ್ಗೆ, ನಾಗನ್ನಾಥ ನಾಟೇಕರ್, ಸಂಗ್ರಾಮ ಮುದ್ದಾಳೆ, ವಿಜಯಕುಮಾರ ಹುಗ್ಗೆ, ಸಿದ್ಧಲಿಂಗ ನಾಟೇಕರ್, ತಾನಾಜಿ ಕೌಟಾಳೆ, ಶ್ರೀನಿವಾಸ ಬಿರಾದಾರ್, ಸತೀಶ ಬಿರಾದಾರ್, ವಿನೋದ ಗಂಟೆ, ರಂಜೀತ ಬೆಳಕಟ್ಟೆ, ಸಂತೋಷ ಜಮಾದಾರ್, ಹರೀಶ ಲವಳೆ ಸೇರಿದಂತೆ ಹಲವರು ಇದ್ದರು. ಸಂತೋಷ ನಾಟೇಕರ್ ಸ್ವಾಗತಿಸಿದರು.