ಟೊಯೊಟೊ ಕಾರ್ಮಿಕರ ಪ್ರತಿಭಟನೆ ಸುಖಾಂತ್ಯ

ಕೋಲಾರ,ಡಿ.೨೮: ರಾಮನಗರದ ಬಿಡದಿಯ ಟೊಯೋಟ ಕಂಪನಿಯಲ್ಲಿ ಕಾರ್ಮಿಕರ ಪ್ರತಿಭಟನೆ ಸುಖಾಂತ್ಯ ಕಾಣಲಿದೆ ಎಂದು ಕಾರ್ಮಿಮ ಸಚಿವ ಶಿವರಾಮ್ ಹೆಬ್ಬಾರ್ ಕೋಲಾರದಲ್ಲಿ ತಿಳಿಸಿದರು.
ಕೋಲಾರದ ವಿಸ್ಟ್ರಾನ್ ಕಂಪನಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾರ್ಮಿಕರ ಪ್ರತಿಭಟನೆ ೨೬ ನೇ ದಿನಕ್ಕೆ ಕಾಲಿಟ್ಟಿದ್ದು ಕಾರ್ಮಿಕರ ಮನವೊಲಿಸುವ ಕೆಲಸ ನಡೆದಿದೆ ಎಂದರು. ಅಲ್ಲದೆ ಇಂದಿನಿಂದ ಫಸ್ಟ್ ಶಿಪ್ಟ್ ಕೆಲಸ ಆರಂಭವಾಗಿದೆ,
ಇನ್ನೊಂದೆರಡು ದಿನದಲ್ಲಿ ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ ಸಭೆ ನಡೆಸಿ ಸೆಕೆಂಡ್ ಶಿಪ್ಟ್ ಕೆಲಸವನ್ನ ಪ್ರಾರಂಭಿಸಲಾಗುವುದು ಎಂದರು.
ಇನ್ನು ಕಂಪನಿಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರು ಇಬ್ಬರಿಗೂ ಸಹ ನೋಟಿಸ್ ನೀಡಲಾಗಿತ್ತು. ಇದಾದ ನಂತರ ಆಡಳಿತ ಮಂಡಳಿಯವರು ಕಂಪನಿ ಪ್ರಾರಂಭಿಸಿದ್ದರೂ ಸಹ ಒಂದು ವಾರ ಯಾವೊಬ್ಬ ಕಾರ್ಮಿಕನು ಕೆಲಸಕ್ಕೆ ಹಾಜರಾಗಲಿಲ್ಲ ಎಂದರು. ಇನ್ನು ಸಂಭಂದಪಟ್ಟ ಅಧಿಕಾರಿಗಳು ಹಾಗೂ ಅಡಳಿತ ಮಂಡಳಿ, ಕಾರ್ಮಿಕ ಯೂನಿಯನ್ ಗಳ ನಡುವೆ ಮೂರು ಸಭೆಗಳನ್ನ ಮಾಡಿದ್ದು, ಸುಖಾಂತ್ಯಗೊಂಡಿದೆ ಎಂದರು. ಇನ್ನು ಕಂಪನಿ ಸುಲಲಿತವಾಗಿ ಕಾರ್ಯಾರಂಭ
ಮಾಡಲಿದ್ದು, ಸರ್ಕಾರ ಕಂಪನಿ ಜೊತೆಗೆ ಮಾತನಾಡಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲಿದೆ ಎಂದರು.