ಟೊಮ್ಯಾಟೋ ಲಾರಿ ನಾಪತ್ತೆ

ಕೋಲಾರ,ಜು.೩೧-ನಗರ ಹೊರವಲಯದ ಎಪಿಎಂಸಿಯಿಂದ ರಾಜಸ್ಥಾನಕ್ಕೆ ಹೊರಟಿದ್ದ ಟೊಮ್ಯಾಟೋ ಲಾರಿಯೊಂದು ನಾಪತ್ತೆಯಾಗಿದೆ.
೨೧ ಲಕ್ಷ ರೂ. ಮೌಲ್ಯದ ಟೊಮ್ಯಾಟೋವನ್ನು ನಗರದ ಎಪಿಎಂಸಿಯಲ್ಲಿ ತುಂಬಿಸಲಾಗಿತ್ತು. ಎಸ್‌ವಿಟಿ ಟ್ರೇಡರ್ಸ್ ಮುನಿರೆಡ್ಡಿ ಎಂಬುವರಿಗೆ ಸೇರಿದ ಟೊಮ್ಯಾಟೋ ಇದಾಗಿದೆ. ಜುಲೈ ೨೭ರಂದು ಕೋಲಾರದಿಂದ ತೆರಳಿತ್ತು.
ಲಾರಿ ಚಾಲಕ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದರಿಂದ ಆತಂಕಕ್ಕೆ ಒಳಗಾದ ಮಂಡಿ ಮಾಲೀಕರು ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕೋಲಾರದ ಮೆಹತ್ ಟ್ರಾನ್ಸ್‌ಫೋರ್ಟ್‌ಗೆ ಸೇರಿದ ಲಾರಿ ಎಂಬುದು ಗೊತ್ತಾಗಿದೆ.