ಟೊಮ್ಯಾಟೊ ಬೆಂಬಲ ಬೆಲೆ ಘೋಷಣೆಗೆ ಆಗ್ರಹ

ಕೋಲಾರ, ಜು.೨೧: ಲಕ್ಷಾಂತರ ರೂಪಾಯಿ ಬಂಡವಾಳ ಸುರಿದು ಬೆಲೆದ ಟೊಮೋಟೋ ಬೆಲೆ ಕುಸಿತದಿಂದ ಹತಾಶರಾದ ರೈತ ಹೊಸಮಟ್ನಹಳ್ಳಿ ಆಂಜಿನಪ್ಪ ೩ ಎಕೆರ ಬೆಲೆ ಟ್ರಾಕ್ಟರ್ ನಿಂದ ರೋಟರಿ ನಾಶ ಮಾಡಿ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ದುಬಾರಿಯಾಗಿರುವ ಬಿತ್ತನೆ ಬೀಜ ರಸಗೊಬ್ಬರ ಕೀಟನಾಶಕಗಳು ಹಾಗೂ ಕೂಲಿ ಕಾರ್ಮಿಕರು ದುಬಾರಿ ವೆಚ್ಚ ಸೇರಿ ೩ ಎಕರೆ ಟೊಮೋಟೋ ಮಾಡಿ ೬ ಲಕ್ಷ ಬಂಡವಾಳ ಸುರಿದು ಬೆಳೆದಿರುವ ಬೆಳೆ ಸವಚಿದ್ದವಾಗಿದ್ದರೂ ಮಾರುಕಟ್ಟೆಯಲ್ಲಿ ಹರಾಜು ಇಲ್ಲದೆ ಕಂಗಾಲಾಗಿ ಹತಾಶರಾಗಿ ಬೆಳೆಯನ್ನು ಟ್ರಾಕ್ಟರ್ ಮೂಲಕ ರೋಟರಿ ಹಾಕಿ ಕೃಷಿಯನ್ನೇ ನಂಬಿರುವ ರೈತರ ಸಮಸ್ಯೆಗಳಿಗೆ ಜನಪ್ರತಿಧಿನಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂದು ಕಣ್ಣೀರು ಹಾಕಿದರು.
ಟೋಮೋಟೋ ಬೆಳೆಗಳಿಗೆ ಬಾಧಿಸುತ್ತಿರುವ ಬೀಕರ ರೋಗಗಳಿಂದ ಅಂಗಮಾರಿ, ರೋಜ್, ಚುಕ್ಕಿ, ರೋಗಕ್ಕೆ ಲಕ್ಷಾಂತರ ರೂಪಾಯಿ ಔಷದಿ ಸಿಂಪರಣೆ ಮಾಡಿದರೆ ಹತೋಟಿಗೆ ರೋಗ ಬರುತ್ತಿಲ್ಲ ಅಷ್ಟರ ಮಟ್ಟಿಗೆ ನಕಲಿ ಔಷಧಿ ರೈತರ ಜೀವ ಹಿಂಡುತ್ತಿವೆ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಾಂತ ಸಾವಿರಾರು ಹೆಕ್ಟೆರ್ ಪ್ರದೇಶದಲ್ಲಿ ಬೆಳೆದಿರುವ ಟೊಮೋಟೋ ಬೆಳೆಗಾರರ ರಕ್ಷಣೆಗೆ ಸರ್ಕಾರ ಸ್ಪಂದಿಸಿ ಬೆಂಬಲ ಬೆಲೆ ಘೋಷಣೆ ಮಾಡಿ ಜಿಲ್ಲೆಯ ರೈತರ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.