ಟೊಮೊಟೊ ದರ ಕುಸಿತ ರೈತ ಕಂಗಾಲು

ಬೆಂಗಳೂರು,ಅ.೧೯-ತರಕಾರಿಗಳ ಬೆಲೆಯಲ್ಲಿ ಏರಿಳಿತ ಆರಂಭವಾಗಿದೆ. ೧೦೦ ರೂ. ಗಡಿ ದಾಟಿದ ಟೊಮೆಟೊ ಬೆಲೆ ಈಗ ಕೆ.ಜಿ.೨೦ರಿಂದ ೩೦ ರೂ. ತಲುಪಿದ್ದು, ರೈತ ಕಂಗಾಲಾಗಿದ್ದಾನೆ.
ಗಗನಕ್ಕೇರಿದ್ದ ಟೊಮೆಟೊ ಬೆಲೆ ಕಳೆದ ಒಂದು ವಾರದಿಂದ ಕಡಿಮೆಯಾಗತೊಡಗಿತು. ಈಗಂತೂ ಭಾರೀ ಕುಸಿತ ಕಂಡಿದೆ. ಬೆಲೆ ಇಳಿಕೆಯಿಂದ ಜನರಿಗೆ ಅನುಕೂಲವಾದರೆ ರೈತರಿಗೆ ನಷ್ಟವಾಗುತ್ತದೆ.
ಕಳೆದ ತಿಂಗಳು ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಟೊಮೇಟೊ ಬೆಳೆದ ನೂರಾರು ರೈತರು ರಾತ್ರೋರಾತ್ರಿ ಲಕ್ಷಾಧಿಪತಿಗಳಾದರೆ, ಗ್ರಾಹಕರು ಮಾತ್ರ ಟೊಮೆಟೊ ಸಹವಾಸವೇ ಬೇಡ ಎಂದು ದೂರ ಉಳಿದಿದ್ದರು.
ಸದ್ಯ ದೇಶಾದ್ಯಂತ ಟೊಮೇಟೊ ಬೆಲೆ ಇಳಿಕೆಯಾಗುತ್ತಿದೆ. ಟೊಮೇಟೊ ಕೊಳ್ಳುವುದನ್ನು ಮರೆತಿದ್ದ ಜನಸಾಮಾನ್ಯರು ನಿಧಾನವಾಗಿ ಟೊಮೇಟೊ ಖರೀದಿಸಲು ಆರಂಭಿಸಿದ್ದಾರೆ. ಟೊಮೇಟೊ ಬೆಲೆ ಕುಸಿತದಿಂದ ಗ್ರಾಹಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಪ್ರಸ್ತುತ, ಮಧ್ಯಪ್ರದೇಶ, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶ ಮತ್ತು ಹರಿಯಾಣದಿಂದ ದೇಶದ ವಿವಿಧ ಮಾರುಕಟ್ಟೆಗಳಿಗೆ ಟೊಮೆಟೊ ಆಗಮನ ಪ್ರಾರಂಭವಾಗಿದ್ದು, ಸೆಪ್ಟೆಂಬರ್ ಆರಂಭದಲ್ಲಿ ಪ್ರಸ್ತುತ ಟೊಮೆಟೊ ಬೆಲೆಯಲ್ಲಿ ತೀವ್ರ ಕುಸಿತದ ಸಾಧ್ಯತೆಯಿದೆ.
ರಾಷ್ಟ್ರೀಯ ಸರಕು ನಿರ್ವಹಣಾ ಸೇವೆಗಳ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಗುಪ್ತಾ ಮಾತನಾಡಿ,ಈ ತಿಂಗಳ ಅಂತ್ಯದ ವೇಳೆಗೆ ಪೂರೈಕೆಯ ಒತ್ತಡಗಳು ಹೆಚ್ಚಾಗುವುದರಿಂದ ಬೆಲೆಗಳು ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ ಮತ್ತು ಸೆಪ್ಟೆಂಬರ್ ಮಧ್ಯದ ವೇಳೆಗೆ ಬೆಲೆಗಳು ೩೦ ರೂ. ಪ್ರತಿ ಕೆಜಿಗೆ ತಲುಪುತ್ತದೆ ಎಂದಿದ್ದಾರೆ.
ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿರ್ವಹಿಸುವ ಅಂಕಿಅಂಶಗಳ ಪ್ರಕಾರ, ಜುಲೈ ೧೪ ರಂದು ದೇಶಾದ್ಯಂತ ಟೊಮೆಟೊ ಸರಾಸರಿ ಬೆಲೆ ಕ್ವಿಂಟಲ್‌ಗೆ ೯,೬೭೧ ರೂ.ಗಳಷ್ಟಿತ್ತು. ಇದು ಆಗಸ್ಟ್ ೧೪ ರಂದು ಕ್ವಿಂಟಲ್‌ಗೆ ೯,೧೯೫ ರೂ.ಗೆ ಇಳಿದಿದೆ. ಜುಲೈ ಮಧ್ಯದಲ್ಲಿ, ಟೊಮೆಟೊ ಚಿಲ್ಲರೆ ಬೆಲೆ ದೇಶದ ಹಲವೆಡೆ ಕೆಜಿಗೆ ೨೫೦ ರೂ. ಆದರೆ, ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಟೊಮೆಟೊ ಬೆಳೆ ಮಾರುಕಟ್ಟೆಗೆ ಬಂದಿರುವುದರಿಂದ ಬಹುತೇಕ ನಗರಗಳಲ್ಲಿ ಅದರ ಬೆಲೆ ಕೆಜಿಗೆ ೮೦-೧೨೦ ರೂ.ಗೆ ಇಳಿದಿದೆ.
ಏರುತ್ತಿರುವ ಟೊಮೆಟೊ ಬೆಲೆಯನ್ನು ತಗ್ಗಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಮತ್ತು ರೈತರ ಸಹಕಾರ ಒಕ್ಕೂಟ ದೆಹಲಿ-ಎನಸಿಆರ್, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹಲವು ಸ್ಥಳಗಳಲ್ಲಿ ಜುಲೈನಿಂದ ಪ್ರತಿ ಕೆಜಿಗೆ ೭೦ ರಿಂದ ೯೦ ರೂ.ವರೆಗೆ ಚಿಲ್ಲರೆ ಬೆಲೆಯಲ್ಲಿ ಟೊಮೆಟೊವನ್ನು ಮಾರಾಟ ಮಾಡುತ್ತಿದೆ.
ಹೆಚ್ಚುವರಿ ಬೆಳೆಯಿಂದಾಗಿ ಅಕ್ಟೋಬರ್ ವೇಳೆಗೆ ಟೊಮೆಟೊ ಬೆಲೆ ತೀವ್ರವಾಗಿ ಕುಸಿಯುವ ನಿರೀಕ್ಷೆಯಿದೆ. ಅಕ್ಟೋಬರ್ ಮಧ್ಯದ ವೇಳೆಗೆ ಸಗಟು ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿಗೆ ೫-೧೦ ರೂ.ಗೆ ಇಳಿಕೆಯಾಗುವ ಸಾಧ್ಯತೆಯಿದೆ.