ಟೊಮೆಟೊ ಬೆಲೆ ಇಂದು ದಿಢೀರ್ ಕುಸಿತ

ಬೆಂಗಳೂರು.ನ೨೯:ಆಂಧ್ರಪ್ರದೇಶ, ತಮಿಳುನಾಡು ಮತ್ತು ನಾಸಿಕ್‌ನಿಂದಲೂ ರಾಜ್ಯದ ಮಾರುಕಟ್ಟೆಗೆ ಟೊಮೆಟೊ ಬಂದಿದೆ. ಇದರಿಂದಾಗಿ ೧೦೦ರ ಗಡಿ ದಾಟಿದ್ದ ಟೊಮೊಟೊ ದರ ೫೦ ರೂ. ಕಡಿಮೆ ಬೆಲೆಗೆ ಕುಸಿದಿದೆ.
ಸೇಬಿಗಿಂತ ದುಬಾರಿಯಾಗಿದ್ದ ಟೊಮೆಟೊ ಬೆಲೆ ದಿಢೀರ್ ಕುಸಿತ ಕಂಡಿದೆ. ೧೦೦-೧೨೦ ರೂ.ಇದ್ದ ಟೊಮೆಟೊ ದರ ೪೦-೫೦ ರೂ.ಗೆ ಕುಸಿದಿದೆ. ದರ ಏರಿಕೆಯಾಗುತ್ತಿದ್ದಂತೆ, ಮಾರುಕಟ್ಟೆಗೆ ಟೊಮೆಟೊ ಬರುವುದು ಹೆಚ್ಚಳವಾಗಿದೆ.
ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ, ರೈತರು ಹೊಲದಲ್ಲಿದ್ದ ಟೊಮೆಟೊ ಕೊಯ್ಲು ಮಾಡಿದ್ದಾರೆ. ಹೀಗಾಗಿ ಮಾರುಕಟ್ಟೆಗೆ ಪೂರೈಕೆ ಹೆಚ್ಚಳವಾಗಿದೆ. ಅಲ್ಲದೇ ಆಂಧ್ರಪ್ರದೇಶ, ತಮಿಳುನಾಡು ಮತ್ತು ನಾಸಿಕ್‌ನಿಂದಲೂ ರಾಜ್ಯದ ಮಾರುಕಟ್ಟೆಗೆ ಟೊಮೆಟೊ ಬಂದಿದೆ. ಇದರಿಂದಾಗಿ ೧೦೦ ರ ಗಡಿ ದಾಟಿದ್ದ ಟೊಮೊಟೊ ದರ ೫೦ ರೂ. ಕಡಿಮೆಗೆ ಕುಸಿದಿದೆ. ನಿರಂತರ ಮಳೆ ಇಂದಾಗಿ ಟೊಮೆಟೊ ಬೆಳೆಗೆ ತೀವ್ರ ಹಾನಿಯಾಗಿತ್ತು. ಇದರಿಂದಾಗಿ ಮಾರುಕಟ್ಟೆಗೆ ಬರುವ ಟೊಮೊಟೊ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿತ್ತು.
ಬೆಂಗಳೂರು ಹಾಪ್‌ಕಾಮ್ಸ್‌ನಲ್ಲಿ ಇಂದಿನ ತರಕಾರಿ ಇಂದಿನ ದರ ಹೀಗಿದ್ದು.ಟೊಮೆಟೊ-೪೦-೫೦ ರೂ.ಬೆಳ್ಳುಳ್ಳಿ- ೧೨೬ ರೂ.ದಪ್ಪ ಮೆಣಸಿನಕಾಯಿ-೧೨೪ ರೂ.ಹಸಿ ಮೆಣಸಿನಕಾಯಿ- ೫೮ರೂ.ಕ್ಯಾರೆಟ್- ೯೪ ರೂ.ಹುರುಳಿ ಕಾಯಿ(ಬೀನ್ಸ್)- ೮೭ ರೂ.ಈರುಳ್ಳಿ- ೫೧ರೂ.ಸಾಂಬರ್ ಈರುಳ್ಳಿ- ೫೬ ರೂ.ಆಲೂಗಡ್ಡೆ- ೪೫ ರೂ.ಮೂಲಂಗಿ- ೭೫ ರೂ.ಬದನೆಕಾಯಿ- ೧೧೦ ರೂ.
೨. ಸೊಪ್ಪು ಕೊತ್ತಂಬರಿ ಸೊಪ್ಪು- ೧೧೪ ರೂ.ಕೊತ್ತಂಬರಿ ನಾಟಿ- ೧೨೭ ರೂ.ಮೆಂತ್ಯ ಸೊಪ್ಪು-೧೨೮ರೂ.ಪಾಲಕ್ ಸೊಪ್ಪು- ೧೦೭ ರೂ.ಸಬ್ಬಕ್ಕಿ ಸೊಪ್ಪು- ೭೦ ರೂ.ಕರಿಬೇವು- ೬೭ ರೂ.ದಂಟಿನ ಸೊಪ್ಪು- ೧೨೭ರೂ.೩. ತೆಂಗಿನ ಕಾಯಿ೩೨ ರೂ( ದಪ್ಪ),೨೮ ರೂ( ಮಧ್ಯಮ),೨೨ ರೂ( ಸಣ್ಣ),೧೬ ರೂ( ಅತಿ ಸಣ್ಣ) ಬೆಲೆಗೆ ಮಾರಾಟ ಮಾಡಲಾಗುತ್ತಿದೆ.