ಟೊಮೆಟೊ ದರ ಶೀಘ್ರ ಇಳಿಕೆ

ಹೊಸದಿಲ್ಲ್ಲಿಜು.೨೨-ಟೊಮೆಟೊ ಬೆಲೆ ಗಗನಮುಖಿಯಾಗಿದ್ದು, ಗ್ರಾಹಕರಿಗೆ ಅವು ಕೈಗೆಟುಕದಾದರೆ, ಬೆಳೆಗಾರರು, ವ್ಯಾಪಾರಸ್ಥರಿಗೆ ಅವುಗಳನ್ನು ಜೋಪಾನ ಮಾಡುವುದೇ ದೊಡ್ಡ ಸವಾಲಾಗಿತ್ತು. ಇದನ್ನು ಗಮನಿಸಿದ ಕೇಂದ್ರ ಸರ್ಕಾರ
ಬೆಳೆ ಸಂರಕ್ಷಣೆಗಾಗಿ ಹಸಿರು ಯೋಜನೆ ಜಾರಿಗೊಳಿಸಲಾಗಿದೆ ಎಂದು ಹೇಳಿದೆ.
ನಾನಾ ಕಾರಣಗಳಿಂದ ಗಗನಕ್ಕೇರಿದ ಟೊಮೆಟೊ ಬೆಲೆ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಿಂದ ಹೊಸ ಬೆಳೆ ಬಂದ ನಂತರ ಶೀಘ್ರದಲ್ಲೇ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸಂಸತ್ತಿನ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ಅಶ್ವಿನಿ ಕುಮಾರ್,
ಸದ್ಯ ಟೊಮೆಟೋ ಬೆಲೆ ಏರಿಕೆಯನ್ನು ತಡೆಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದ್ದು, ಮತ್ತು ಸುಲಭವಾಗಿ ಟೊಮೆಟೋ ಲಭ್ಯವಾಗುವಂತೆ ಮಾಡಲು ಸರ್ಕಾರವು ಬೆಲೆ ಸ್ಥಿರೀಕರಣ ನಿಧಿಯ ಅಡಿಯಲ್ಲಿ ಟೊಮೆಟೊಗಳನ್ನು ಖರೀದಿಸಲು ಪ್ರಾರಂಭಿಸಿದೆ ಎಂದು ಹೇಳಿದರು.
ಪ್ರಮುಖ ನಗರಗಳಲ್ಲಿ ಪ್ರತಿ ಕೆಜಿಗೆ ೧೫೦-೨೦೦ ರೂ.ಗೆ ಏರಿತು. ಗ್ರಾಹಕರಿಗೆ ಮತ್ತಷ್ಟು ಪರಿಹಾರ ನೀಡುವ ಪ್ರಯತ್ನದಲ್ಲಿ, ಕೇಂದ್ರ ಸರ್ಕಾರವು ತನ್ನ ಮಾರುಕಟ್ಟೆ ಏಜೆನ್ಸಿಗಳಾದ ನಾಫೆಡ್ ಮತ್ತು ಎನ್‌ಸಿಸಿಎಫ್‌ಗೆ ಟೊಮೆಟೊವನ್ನು ಕೆಜಿಗೆ ೮೦ ರೂಪಾಯಿಗಳ ಬದಲಿಗೆ ೭೦ ರೂಪಾಯಿಗೆ ಮಾರಾಟ ಮಾಡಲು ನಿರ್ದೇಶಿಸಿದೆ ಎಂದು ಹೇಳಿದೆ.
ಹೆಚ್ಚಿನ ಸಬ್ಸಿಡಿ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡುವುದು. ೮೦ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.
ದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ತೀವ್ರ ಏರಿಕೆಯ ನಡುವೆ, ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿ ಏಜೆನ್ಸಿಗಳು ಪ್ರಮುಖ ಬಳಕೆ ಕೇಂದ್ರಗಳಲ್ಲಿ ಏಕಕಾಲದಲ್ಲಿ ವಿಲೇವಾರಿ ಮಾಡಲು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಿಂದ ಟೊಮೆಟೊ ಖರೀದಿಯನ್ನು ಪ್ರಾರಂಭಿಸಿವೆ ಎಂದು ಮಾಹಿತಿ ನೀಡಿದರು.
ಬೆಳೆ ಉಳಿಸಲು ಯೋಜನೆ; ಕೃಷಿ- ತೋಟಗಾರಿಕಾ ಬೆಳೆಗಳು ಕೆಡದಂತೆ, ಕೊಳೆಯದಂತೆ ತಡೆಯಲು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು (ಡಿಎಎಫ್‌ಡಬ್ಲ್ಯು)
ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (ಎಂಐಎಸ್) ಯನ್ನು ಜಾರಿಗೆ ತಂದಿದೆ. ರೈತರು ಬೆಳೆದ ಉತ್ಪನ್ನಗಳು ಕೊಳೆಯುವುದರಿಂದ ಕಾಪಾಡಲು, ರೈತರಿಗೆ ರಕ್ಷಣೆ
ನೀಡಲು ಗ್ರೀನ್ ಯೋಜನೆಗೆ ಮುಂದಾಗಿದೆ ಎಂದು
ಕೇಂದ್ರ ಸರ್ಕಾರ ತಿಳಿಸಿದೆ.ಟೊಮೆಟೊಗೆ ಹೆಚ್ಚಿನ ಬೇಡಿಕೆ ಮತ್ತು ಹೆಚ್ಚಿನ ಬೆಲೆ ಇರುವುದರಿಂದ ಮುಂದಿನ ದಿನಗಳಲ್ಲಿ ಈ ಬೆಳೆಯನ್ನು ಹೆಚ್ಚು ಬೆಳೆಯಲು ರೈತರನ್ನು ಉತ್ತೇಜಿಸಲಾಗುವುದು ಎಂದು ಹೇಳಿದರು.