
ತಿ.ನರಸೀಪುರ: ಫೆ.27:- ಸಮಾಜ ಗೌರವಾನ್ವಿತವಾಗಿ ಇರಲು ದರ್ಜಿಗಳ ಕೊಡುಗೆ ಬಹಳ ಇದೆ.ಹಾಗಾಗಿ ಟೈಲರ್‍ಗಳು ತಮ್ಮ ವೃತ್ತಿಯ ಬಗ್ಗೆ ಕೀಳಿರಿಮೆ ಬೆಳೆಸಿಕೊಳ್ಳದೆ ಸ್ವಾಭಿಮಾನದಿಂದ ಬದುಕು ನಡೆಸಬೇಕು ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ತಿಳಿಸಿದರು.
ಪಟ್ಟಣದ ಟಿಎಪಿಸಿಎಂಎಸ್ ರೈತಭವನದಲ್ಲಿ ತಾಲೂಕು ಟೈಲರ್ ಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಟೈಲರ್ ಗಳ ಸಮಾವೇಶವನ್ನು ಉದ್ಘಾಟಿಸಿ ಟೈಲರ್ ಗಳಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.ದರ್ಜಿ ವೃತ್ತಿ ಪವಿತ್ರ ಕಾಯಕ,ಈ ಕೆಲಸಕ್ಕೆ ಜಾತಿ ,ಧರ್ಮದ ಭೇದಭಾವವಿಲ್ಲ .ಹಾಗಾಗಿ ಜಗತ್ತಿನಾದ್ಯಂತ ದರ್ಜಿಗಳು ತಮ್ಮ ಕಾಯಕ ಮಾಡುವ ಮುಖೇನ ಸ್ವಾಭಿಮಾನದ ಬದುಕು ನಡೆಸಬಹುದು ಎಂದರು.
ಸರ್ಕಾರ ಕಾರ್ಮಿಕ ವರ್ಗಕ್ಕೆ ಸಾವಿರಾರು ಕೋಟಿ ಅನುದಾನ ಮೀಸಲಿಟ್ಟಿದೆ.ಆದರೆ ಅನುದಾನ ಕಾರ್ಮಿಕರಿಗೆ ಸಮರ್ಪಕವಾಗಿ ತುಲುಪುತ್ತಿಲ್ಲ .ಅಲ್ಲದೆ ಟೈಲರ್ ಗಳು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಕಡೆ ಹೆಚ್ಚುಗಮನಹರಿಸಬೇಕು ಎಂದರು.
ಸಂಘದ ಕಟ್ಟಡಕ್ಕೆ ನಿವೇಶನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಿ ಶೀಘ್ರ ಕ್ರಮವಹಿಸಲಾಗುವುದು ಎಂದರು.
ಸಂಘದ ರಾಜ್ಯಾಧ್ಯಕ್ಷ ನಾರಾಯಣ್ ಮಾತನಾಡಿ,ಆಧುನಿಕತೆ ಗೀಳಿನಿಂದ ಜನರು ಮತ್ತು ಯುವ ಸಮೂಹ ರೆಡಿಮೇಡ್ ಬಟ್ಟೆಗಳನ್ನು ಖರೀದಿಸುತ್ತಿರುವುದರಿಂದ ಟೈಲರ್ ಗಳ ಜೀವನ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ.ಸರ್ಕಾರ ದರ್ಜಿಗಳ ಜೀವನ ಭದ್ರತೆಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.ನೇಕಾರ ವರ್ಗ ಸೇರಿದಂತೆ ಹಲವು ವರ್ಗಗಳಿಗೆ ಅರೋಗ್ಯ ವಿಮೆ ನೀಡಿರುವಂತೆ ಟೈಲರ್ ಗಳಿಗೂ ಸರ್ಕಾರ ಅರೋಗ್ಯ ವಿಮೆ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಟೈಲರ್ ಗಳನ್ನು ಗೌರವಿಸಿ ಗುರುತಿನ ಚೀಟಿ ನೀಡಲಾಯಿತು.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ, ಉಪಾಧ್ಯಕ್ಷೆ ನಾಗರತ್ನ ಮಾದೇಶ್, ತಾಲೂಕು ಟೈಲರ್ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಶಸ್ತ್ರ ಚಿಕಿತ್ಸಕ ಡಾ .ರೇವಣ್ಣ ,ಸಂಘದ ಗೌರವಾಧ್ಯಕ್ಷ ಮಾಧುರಾಜು ,ಉಪಾಧ್ಯಕ್ಷ ಎಂ .ಎಲ್ .ಮಹದೇವ ,ಪ್ರಧಾನ ಕಾರ್ಯದರ್ಶಿ ರಾಜಬುದ್ದಿ ,ಖಜಾಂಚಿ ನಾಗರಾಜು ,ನಿರ್ದೇಶಕರಾದ ಹರೀಶ್ ,ನಾಗರಾಜು ,ಮಹೇಶ್ ,ಮಹದೇವಸ್ವಾಮಿ (ಕಾರ್ತಿಕ್),ನಾಸಿರ್ ,ರಂಗಸ್ವಾಮಿ ,ಬಸವರಾಜು ,ಸೋಮು ,ವಸಂತ ,ಸತೀಶ್ ,ವೆಂಕಟೇಶ್ ,ಸುರೇಶ ,ಗುರುರಾಜು ,ಮಾಧು ,ಉಪನ್ಯಾಸಕ ಕುಮಾರಸ್ವಾಮಿ ಇತರರು ಹಾಜರಿದ್ದರು.