ಟೈಲರ್ ಕ್ಷೇಮನಿಧಿ ಮಂಡಳಿರಚಿಸುವಂತೆ ಸಿಎಂಗೆ ಮನವಿ


ಉಡುಪಿ, ನ.೮- ಟೈಲರ್ ಕ್ಷೇಮ ನಿಧಿ ಮಂಡಳಿ ರಚಿಸಿ ಆ ಮೂಲಕ ಭವಿಷ್ಯ ನಿಧಿ ಮತ್ತು ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ನಿಯೋಗ ಇಂದು ಉಡುಪಿ ಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಭವಿಷ್ಯನಿಧಿ ಹಾಗು ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಹೊಲಿಗೆ ಕೆಲಸಗಾರರ ಮಕ್ಕಳಿಗೆ ವಿದ್ಯಾಭ್ಯಾಸ ಕ್ಕಾಗಿ ವಿದ್ಯಾರ್ಥಿ ವೇತನ ನೀಡಬೇಕು. ಹೊಲಿಗೆ ಕೆಲಸಗಾರರಿಗೆ ವಾಸಕ್ಕಾಗಿ ಮನೆ ನಿರ್ಮಾಣ ಅಥವಾ ದುರಸ್ತಿ ಮಾಡಲು ಹಾಗು ಹೊಲಿಗೆಯಂತ್ರ ಖರೀದಿಸಲು ಶೇ.೪ರ ಬಡ್ಡಿದರದಲ್ಲಿ  ಸಾಲ ಸೌಲಭ್ಯ ನೀಡಬೇಕು. ಹೊಲಿಗೆ ಕೆಲಸಗಾರರಿಗೆ ಆರೋಗ್ಯ ವಿಮೆಯನ್ನು ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಬಿ., ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ರಾಜ್ಯ ಕೋಶಾಧಿಕಾರಿ ಕೆ.ರಾಮಚಂದ್ರ, ಉಡುಪಿ ಜಿಲ್ಲಾಧ್ಯಕ್ಷ ಗುರುರಾಜ್ ಎಂ.ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಪಾಲನ್, ಉಡುಪಿ ಕ್ಷೇತ್ರ ಅಧ್ಯಕ್ಷ ದಯಾನಂದ ಕೋಟಿಯನ್, ಕುಸುಮ ದೇವಾಡಿಗ, ರಾಜೀವ ಪೂಜಾರಿ, ರಾಘವೇಂದ್ರ, ಹೇಮಾ, ಶಾಂತ ಬಸ್ರೂರು, ಸುಹಾಸಿನಿ ಜತ್ತನ್ನ, ಲತಾ ಶೇಟ್, ಕುಂದಾಪುರ ಕ್ಷೇತ್ರ ಸಮಿತಿಯ ಕೋಶಾಧಿಕಾರಿ ಸುಧಾಕರ್, ಸದಾಶಿವ ಆಚಾರಿ, ಸುಜಾತ ಅಮೀನ್ ಕುತ್ಪಾಡಿ  ಮೊದಲಾದವರು ಉಪಸ್ಥಿತರಿದ್ದರು.