ಟೈಲರ್ಸ್ ಕಲ್ಯಾಣ ಮಂಡಳಿ ಸ್ಥಾಪನೆಗೆ ಆಗ್ರಹ

ಕಲಬುರಗಿ ನ 6: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮಾದರಿಯಲ್ಲಿ ರಾಜ್ಯ ಟೈಲರ್ಸ್ ಕಲ್ಯಾಣ ಮಂಡಳಿ ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ಟೈಲರ್ಸ್ ಮತ್ತುಸಹಾಯಕರ ಫೆಡರೇಷನ್ ಜಿಲ್ಲಾ ಸಮಿತಿ ಆಗ್ರಹಿಸಿದೆ
ಎಐಟಿಯುಸಿ ಜಿಲ್ಲಾಧ್ಯಕ್ಷ ಪ್ರಭುದೇವ ಯಳಸಂಗಿ, ಕಾನೂನು ಸಲಹೆಗಾರ ಹಣಮಂತರಾಯ ಅಟ್ಟೂರ ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ರಾಜ್ಯಾದ್ಯಾಂತ ಟೈಲರ್ ವೃತ್ತಿ ಮಾಡುವವರು ಅಸಂಘಟಿತ ವಲಯದವರಾಗಿದ್ದು, ಯಾವುದೇ ಸೌಲತ್ತುಗಳಿಲ್ಲದೆ ಬಳಲುತ್ತಿದ್ದಾರೆ. ಇಂದು ಟೈಲರ್‍ವೃತ್ತಿಯಲ್ಲಿ ತೊಡಗಿರುವವರಲ್ಲಿ ಪುರುಷರು ಸೇರಿದಂತೆ
ಬಹುತೇಕ ಮಹಿಳೆಯರಿದ್ದಾರೆ. ಮನೆಗಳಲ್ಲಿ ಬಟ್ಟೆಹೊಲಿಯುವ, ಅಂಗಡಿಗಳಲ್ಲಿ ಹೊಲಿಯುವ, ಕಾರ್ಮಿಕರ
ಕಾಯ್ದೆ ಅನ್ವಯಿಸದೆ ಇರುವ ಸಣ್ಣ ಸಣ್ಣ ಗಾರ್ಮೆಂಟ್ಸ್‍ಘಟಕಗಳಲ್ಲಿ ಟೈಲರಿಂಗ ಮಾಡುವ ಟೈಲರ್‍ಗಳು ನಮ್ಮ
ರಾಜ್ಯದಲ್ಲಿ ಸುಮಾರು 20 ಲಕ್ಷದಷ್ಟಿರುವ ಅಂದಾಜಿದೆ. ಸಣ್ಣಪುಟ್ಟಗಾರ್ಮೆಂಟ್ಸ್‍ಗಳಲ್ಲಿ ಕೆಲಸಗಾರರ ಸಂಖ್ಯೆ ಇಪ್ಪತ್ತರ ಸಂಖ್ಯೆಯ ಒಳಗಿದ್ದರೆ ಅಲ್ಲಿ ಅವರಿಗೆ ಕಾರ್ಮಿಕ ಕಾಯ್ದೆ ಅನ್ವಯಿಸದೆ ಇರುವುದರಿಂದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.ಟೈಲರ್‍ಗಳ ಕಲ್ಯಾಣ ಮಂಡಳಿಗೆ ಟೆಕ್ಸಟೈಲ್ ಮಿಲ್ಸ್,ಗಾರ್ಮೆಂಟ್ಸ್, ಬಟ್ಟೆ ಅಂಗಡಿಗಳು ಹಾಗೂ ಬಟ್ಟೆ ಹೊಲಿಗೆಗೆಪೂರಕವಾಗಿ ಉತ್ಪನ್ನ ಮಾಡುವ ಸರಕುದಾರ ಉತ್ಪಾದಕರಿಂದಶೇ 2 ಸೆಸ್ ಸಂಗ್ರಹ ಮಾಡುವ ಮೂಲಕ ಟೈಲರ್ ಕಲ್ಯಾಣಮಂಡಳಿ ಜಾರಿಗೆ ತಂದು ರಾಜ್ಯಾದ್ಯಂತ ಇರುವ ಟೈಲರ್‍ಗಳ ಹಾಗೂ ಟೈಲರ್‍ಗಳ ಕುಟುಂಬದವರಿಗೆ ನೆರವು ಆಗಬೇಕೆಂದುಟೈಲರ್‍ಗಳ ಕಲ್ಯಾಣ ಮಂಡಳಿ ಸ್ಥಾಪಿಸಬೇಕೆಂದು ಒತ್ತಾಯಿಸಿಕಲಬುರಗಿ ನಗರದಲ್ಲಿ ನ. 9 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಯವರ ಮುಖಾಂತರಮುಖ್ಯಮಂತ್ರಿಗಳಿಗೆ ಮನವಿ ಪತ್ರ ಕೊಡಲಾಗುವುದು ಎಂದು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ
ಕಲ್ಯಾಣಿ ತುಕ್ಕಾಣಿ, ಅನಿತಾಬಾಯಿ ಭಕರೆ ಉಪಸ್ಥಿತರಿದ್ದರು.