ಟೈಲರಿಂಗ್ ಯಂತ್ರಗಳ ವಿತರಣೆ


ಸಂಜೆವಾಣಿ ವಾರ್ತೆ
ಸಂಡೂರು :ಅ:16:  ತಾಲೂಕಿನಾದ್ಯಂತ ಬಹಳಷ್ಟು ಬಡ ಮಹಿಳೆಯರಿದ್ದು ಕುಟುಂಬ ನಿರ್ವಹಣೆ ದುಸ್ತರವಾದಂತಹ ಸ್ಥಿತಿ ಇದೆ ಅಂತಹ ಮಹಿಳೆಯರು ಸ್ವಾವಲಂಬಿಗಳಾಗಲು ಅವರನ್ನು ಗುರುತಿಸಿ ಎಂ.ಹೆಚ್.ಅರ್. ಟ್ರಸ್ಟ್ ಸಹಯೋಗದಲ್ಲಿ ಮರಾಠ ಸಮಾಜದ ವತಿಯಿಂದ 24 ಬಡ ಕುಟುಂಬಗಳಿಗೆ ಉಚಿತವಾಗಿ ಟೈಲರಿಂಗ್ ಯಂತ್ರಗಳನ್ನು ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುತ್ತಿದ್ದೇವೆ ಎಂದು ಮರಾಠ ಸಮಾಜದ ಅಧ್ಯಕ್ಷ ಮಾರುತಿರಾವ್ ಭೋಸ್ಲೆ ತಿಳಿಸಿದರು.
ಅವರು ಪಟ್ಟಣದ ಮರಾಠ ಸಮಾಜದಲ್ಲಿ ಉಚಿತ ಟೈಲರಿಂಗ್ ಯಂತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಯಂತ್ರಗಳನ್ನು ವಿತರಿಸಿ ಮಾತನಾಡಿ ಇಂದು ಸ್ವಾವಲಂಬಿಗಳಾಗಲು ಸಹಕಾರಿಯಾದಂತಹ ಯೋಜನೆಯನ್ನು ರೂಪಿಸುವ ಮೂಲಕ ಪ್ರಗತಿಯನ್ನು ಸಾಧಿಸಿ ಅರ್ಥಿಕ ಚೇತರಿಕೆ ಉಂಟಾಗುತ್ತದೆ. ಅದ್ದರಿಂದ ಇಂತಹ ಸ್ವಯಂ ಉದ್ಯೋಗ ಯೋಜನೆಯನ್ನು ರೂಪಿಸಿದ್ದು ಬಹು ಉತ್ತಮವಾದ ಕಾರ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಭುಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿ ಸಮಾಜದಲ್ಲಿ ಸಮಾನತೆ ಬರಬೇಕಾದರೆ ಬಡವರನ್ನು ಗುರುತಿಸಿ ಅವರನ್ನು ಸ್ವಯಂ ಪ್ರಗತಿಸಾಧಿಸಲು ಇಂತಹ ಯೋಜನೆಯನ್ನು ಮರಾಠ ಸಮಾಜದ ವತಿಯಿಂದ ಹಾಗೂ ಎಂ.ಹೆಚ್.ಅರ್ ಟ್ರಸ್ಟ್ ಹಮ್ಮಿಕೊಳ್ಳುವ ಮೂಲಕ ಸಮಾಜದ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ, ಇಂತಹ ಕಾರ್ಯಗಳು ಹೆಚ್ಚು ಹೆಚ್ಚು ನಡೆದರೆ ಪ್ರಗತಿ, ಸಮಾನತೆ ಸಾಧ್ಯ ಎಂದರು.
ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಹನುಮಂತರಾವ್ ಭೋಯಿಟೆಯವರು ನಿರೂಪಣೆ ಪ್ರಾಸ್ತಾವಿಕ ಭಾಷಣ ಮಾಡಿ ಜನರ ಮೆಚ್ಚುಗೆ ಗಳಿಸಿತು, ಸಾಧನಾ ಬೋಯಿಟೆ, ವಿಜಯಲಕ್ಷ್ಮೀ, ನಾರಾಯಣ, ರಾಜೇಶ್ವರಿ ಜವ್ಹಾಣ್, ರೂಪ ಚವ್ಹಾಣ, ವೆಂಕಟಕುಮಾರ ಘೋರ್ಪಡೆ, ಜೀಜಾಬಾಯಿ ಮಹಿಳಾ ಮಂಡಳಿ ಅಧ್ಯಕ್ಷೆ ಮೋರೆ ಶಕುಂತಲ, ಶಾರದಮ್ಮ ಜೈಸಿಂಗ್, ಸೀಮಧೇ, ಷಡೆಕರ ಪರ್ವ ಸುಬ್ರಮಣ್ಯ ಘೋರ್ಪಡೆ, ಖಂಡೋಜಿರಾವ್ ಘೋರ್ಪಡೆ, ಕುಮಾರಸ್ವಾಮಿ ನಿವೃತ್ತ ಪೋಸ್ಟ ಮಾಸ್ತರ, ದಿನಕರ ದೇಶಮುಖ, ಸಾಯಿಕುಮಾರ ಶೀಂಧೇ, ವಿಶ್ವನಾಥ, ಯಂಕಣ್ಣ, ಹೋಟಲ್ ನಾಗಭೂಷಣ, ಡಾ. ನಾರಯಣಿ, ಅಲ್ಲದೆ ಹಲವಾರು ಮಹಾನೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಡೂರಿನ ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದ ಪರಮಪೂಜ್ಯ ಶ್ರೀ ಪ್ರಭುಮಹಾಸ್ವಾಮಿಗಳು, ಉಪಸ್ಥಿತರಿದ್ದರು