ಟೈರ್ ಸ್ಫೋಟ ಯುವಕ ಸಾವು

(ಸಂಜೆವಾಣಿ ವಾರ್ತೆ)
ರಾಯಚೂರು,ಫೆ.೧೧-ಸರಕು ಸಾಗಿಸುವ ವಾಹನದ ಟೈರ್ ಸ್ಫೋಟಗೊಂಡ ಹಿನ್ನೆಲೆ ವಾಹನ ಪಲ್ಟಿಯಾದ ಹಿನ್ನೆಲೆ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ಚಂದ್ರಭಂಡ ಗ್ರಾಮದ ಕಟ್ಟಡ ಕಾರ್ಮಿಕ ಆಂಜನೇಯ (೨೩) ಎಂದು ಗುರುತಿಸಲಾಗಿದೆ. ನಿನ್ನೆ ಆಂಜನೇಯ ಸೇರಿದಂತೆ ಸಹೋದರರಾದ ವೀರೇಶ, ನಾಗರಾಜ ದೇವಸೂಗೂರು ಗ್ರಾಮದಿಂದ ಚಂದ್ರಭಂಡ ಗ್ರಾಮಕ್ಕೆ ಕಬ್ಬಿಣದ ರಾಡ್ ಭರ್ತಿ ಮಾಡಿದ್ದ ವಾಹನದಲ್ಲಿ ಪ್ರಯಾಣಿಸುತ್ತಿದ್ದರು.
ಈ ವೇಳೆ ಹೆಚ್ಚು ಸರಕು ತುಂಬಿದ್ದರಿಂದ ಟೈರ್ ಸ್ಫೋಟಗೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆಂಜನೇಯ ಮೃತಪಟ್ಟಿದ್ದು, ಸಹೋದರ ವೀರೇಶ್ ಮತ್ತು ನಾಗರಾಜುಗೆ ಗಾಯಗಳಾಗಿವೆ.