ಟೈರ್ ಸ್ಪೋಟ: ವಾಹನ ಪಲ್ಟಿ

ವಿಜಯಪುರ ಜು 21: ಚಲಿಸುತ್ತಿದ್ದ ಗೂಡ್ಸ್ ವಾಹನದ ಟೈಯರ್ ಸ್ಪೋಟಿಸಿ ವಾಹನ ಪಲ್ಟಿಯಾಗಿರುವ ಘಟನೆ ವಿಜಯಪುರ ತಾಲ್ಲೂಕಿನ ಹಿಟ್ನಳ್ಳಿ ಮನಗೂಳಿ ರಸ್ತೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಾಹನದಲ್ಲಿ ತೆಗೆದುಕೊಂಡು ಸಾಗಿಸುತ್ತಿದ್ದ ಸಾಮಗ್ರಿಗಳು ಹಾಳಾಗಿದೆ. ವಿಜಯಪುರ ಗ್ರಾಮೀಣ ಪೆÇಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.