ಟೈರ್ ಗೋದಾಮಿಗೆ ಬೆಂಕಿ ಅಪಾರ ನಷ್ಟ

ನಗರದ ಚಾಮರಾಜಪೇಟೆ ಟಿ.ಆರ್ ಮಿಲ್ ಬಳಿಯ ಟೈಯರ್ ಗೋಡೌನ್‌ಗೆ ಆಕಸ್ಮಿಕ ಬೆಂಕಿ ಬಿದ್ದಿದ್ದು, ಬೆಂಕಿಯನ್ನು ನಂದಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ.

ಬೆಂಗಳೂರು,ಏ.೭-ಚಾಮರಾಜಪೇಟೆಯ ಗವಿಪುರಂ ಬಳಿಯ ಟೈರ್ ,ಟ್ಯೂಬ್ ಗೋದಾಮಿಗೆ ಇಂದು ಮುಂಜಾನೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗವಿಪುರಂ ಬಳಿಯ ಟೈರ್ ,ಟ್ಯೂಬ್ ಗೋದಾಮಿಗೆ ಮುಂಜಾನೆ ೪.೩೦ರ ವೇಳೆ ಬೆಂಕಿ ತಗುಲಿ ಕೆಲವೇ ಕ್ಷಣದಲ್ಲಿ ಇಡೀ ಗೋದಾಮು ಆವರಿಸಿ ಟೈರ್, ಫೈಪ್ ಮತ್ತು ಫ್ಲೈವುಡ್ ಸುಟ್ಟು ಇಡೀ ಏರಿಯಾಗೆ ಬೆಂಕಿಯ ಹೊಗೆ ಆವರಿಸಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಒಂದರಿಂದ ಒಂದರಂತೆ ೫ ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಧಾವಿಸಿ ಬೆಳಿಗ್ಗೆ ೧೦ರವರೆಗೆ ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸುವ ಕಾರ್ಯ ನಡೆಸಿವೆ.
ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳೊಬ್ಬರು ಮಾತನಾಡಿ, ನಿದ್ದೆ ಮಾಡುತ್ತಿದ್ದ ವೇಳೆ ಪಟಾಕಿ ರೀತಿಯಲ್ಲಿ ಶಬ್ದ ಬಂತು. ತಕ್ಷಣ ಎದ್ದು ಹೊರಬಂದು ನೋಡಿದಾಗ ಬೆಂಕಿ ಕಾಣಿಸಿಕೊಂಡು ಇಡೀ ಗೋದಾಮು ಆವರಿಸಿತ್ತು.
ನೆರೆಹೊರೆಯ ಮನೆಯವರು ಹೊರ ಓಡಿಬಂದಿದ್ದಾರೆ,ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಹೊತ್ತಿಕೊಂಡ ವೇಳೆ ಕಟ್ಟಡದಲ್ಲಿ ಯಾರು ಇರಲಿಲ್ಲ ಇದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸಿವಿಲ್ ಡಿಫೆನ್ಸ್ ಹಾಗೂ ಸ್ಥಳೀಯರ ಜೊತೆಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುತ್ತಿದ್ದು, ರಾಜೇಶ್ ಅಗರ್‌ವಾಲ್ ಮಾಲೀಕತ್ವದ ಗೋಡೌನ್ ಇದಾಗಿದ್ದು, ೧೫ ಸಾವಿರಕ್ಕೂ ಅಧಿಕ ಟೈರ್ ಗೋಡೌನ್‌ನಲ್ಲಿತ್ತು. ೬೦ ಸಾವಿರಕ್ಕೂ ಹೆಚ್ಚು ಟ್ಯೂಬ್,ಮತ್ತು ಆಯಿಲ್ ಬೆಂಕಿಗಾಹುತಿ ಆಗಿದೆ.