ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆ ಮತ್ತು ಜೈ ತುಳುನಾಡ್ (ರಿ.) ಜಂಟಿ ಆಶ್ರಯದಲ್ಲಿ ‘ತುಳು ಅಧಿಕೃತ ಭಾಷೆಗಾಗಿ ರಿಜಿಸ್ಟರ್ಡ್ ಪೋಸ್ಟ್ ಅಭಿಯಾನ’

ಮಂಗಳೂರು, ಎ.೭- ೧೮೩೭ ಎಪ್ರಿಲ್ ೫ ತಾರೀಕಿಗೆ ತುಳುನಾಡಿನ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆ ಮತ್ತು ಜೈ ತುಳುನಾಡ್ (ರಿ.) ಜಂಟಿ ಆಶ್ರಯದಲ್ಲಿ ತುಳುನಾಡ ದುನಿಪು ರಿಜಿಸ್ಟರ್ಡ್ ಪೋಸ್ಟ್ ಅಭಿಯಾನ ಕಾರ್ಯಕ್ರಮವು ಮಂಗಳೂರಿನ ಸೂರ್ಯ ಹೋಟೆಲ್ ಸಭಾಭವನದಲ್ಲಿ ಎಪ್ರಿಲ್ ೫ರಂದು ಸೋಮವಾರ ಯಶಸ್ವಿಯಾಗಿ  ನಡೆಯಿತು.

ಈ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಆಳುಪ ಅರಸರ ವಂಶಸ್ಥರಾದ ಡಾ. ಆಕಾಶ್ ರಾಜ್ ಜೈನ್ ಮಾತಾಡಿ ಆರ್ಟಿಕಲ್ ೩೪೪(೧) ಹಾಗು ೩೫೧ ವಿದಿಯ ಪ್ರಕಾರ ಹಿಂದಿಯ ಜೊತೆ ಭಾರತದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಹ ಬಾಕಿ ಬಾಷೆಗಳಿಗು ಸ್ಥಾನ ಮಾನ ಕೊಡುವ ಅವಕಾಶ ಇದೆ ಆಗಾಗಿ ಇದರಲ್ಲಿ ನಮ್ಮ ತುಳು ಮಣ್ಣಿನ ಬಾಷೆಯಾದ ತುಳುವು ವಂಚಿತವಾಗಿದೆ ಆದುದರಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನವನ್ನು ತುಳು ಬಾಷೆಯ ಮೇಲೆ ಸೆಳೆಯಲು ರಿಜಿಸ್ಟರ್ಡ್ ಪೋಸ್ಟ್ ಅಭಿಯಾನ ಕಾರ್ಯಕ್ರಮ ಅನಿವಾರ್ಯ ಆಗಿದೆ ಎಂದು ಹೇಳಿದರು.

ತುಳು ಸಿನೇಮಾ ನಟ ಭೋಜಾರಾಜ್ ವಾಮಂಜೂರು  ರಿಜಿಸ್ಟರ್ಡ್ ಪೋಸ್ಟ್ ಅಭಿಯಾನಕ್ಕೆ ಚಾಲನೆ ನೀಡಿ ತಾನೇ ಸ್ವತಃ ತುಳು ೮ನೇ ಪರೀಚೆದಕ್ಕೆ ಸೇರಳು ಹಾಗೂ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಲು ವಿನಂತಿ ಮಾಡಿರುವ ಪತ್ರಿಕೆಗೆ ಸಹಿ ಹಾಕಿ ಎಲ್ಲರ ಗಮನ ಸೆಳೆದರು ತುಳುವರ ಮನಸು ದೊಡ್ಡದು ಲಾಕ್ ಡೌನ್ ಹಾಗಿ ಹಾರ್ಥಿಕ ಪರಿಸ್ಥಿತಿ ನೆಲಕಚ್ಚಿದ ಸಂದರ್ಭದಲ್ಲಿ ನಾಟಕ ಸಿನೇಮ ನೋಡುವ ಮೂಲಕ ತುಳುಕಲಾವಿದರನ್ನು ಪ್ರೋತ್ಸಾಹಿಸ್ಸುತ್ತಾ ಇದ್ದರೆ ಇದರಿಂದ ಊರಿನಲ್ಲಿರುವ ಎಲ್ಲಾ ವರ್ಗದ ಜನರಿಗೆ ತುಳು ಬಾಷೆಯ ಮೇಲೆ ಇರುವ ಪ್ರೀತಿ ಗೊತ್ತಾಗುತ್ತದೆ ಇಂತಾ ಜನಪ್ರೀತಿ ಇರುವ ಬಾಷೆಯು ೮ನೇ ಪರೀಚೆದಕ್ಕೆ ಸೇರಬೇಕು ಇದು ನಮ್ಮೆಲ್ಲರ ಒಕ್ಕೊರಲಿನ ಕೂಗು ಎಂದು ಹೇಳಿದರು.

ತುಳು ವಿದ್ವಾಂಸ ಉಡುಪಿ ಸಿರಿ ತುಳು ಚಾವಡಿ ಕೂಟದ ಅಧ್ಯಕ್ಷರಾದ ಕುದಿ ವಸಂತ ಶೆಟ್ಟಿ ಮಾತಾಡಿ ತುಳುವರು ತುಳು ಪೆಲಕಾಯಿಯ ಹಾಗೆ ಮೆದು ಸ್ವಭಾವದವರಾಗಿದ್ದು ಸಾಕು ತುಳುವಿನ ಚೈತನ್ಯಕಾಗಿ ತುಳುವರು ಎಲ್ಲ ಒಟ್ಟಾಗಿ ಸ್ವರ ಸೇರಿಸೋಣ ಎಂದು ಹೇಳಿದರು.

ವೇದಿಕೆಯಲ್ಲಿ ಹಿರಿಯ ಪತ್ರಕರ್ತ ಡಾ| ಶೇಖರ್ ಅಜೆಕಾರು, ಸೂರ್ಯ ಹೋಟೆಲಿನ ಮಾಲಕ ತಾರಾನಾಥ್ ಶೆಟ್ಟಿ, ಸೃಷ್ಠಿ ಕಲಾಭೂಮಿ ಬೆಂಗಳೂರು ಇದರ ಅಧ್ಯಕ್ಷ ಮಂಜುನಾಥ ಅಡಪ್ಪ, ತುಳುವೆರೆ ಅಯಾನೋ ಕೂಟದ ಅಧ್ಯಕ್ಷ ಡಾ| ರಾಜೇಶ್ ಆಳ್ವ, ತುಳು ಸಿನೇಮಾ ನಿರ್ಮಾಪಕ ರವಿ ಬೋಳೂರು, ಜೈ ತುಳುನಾಡ್ ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್, ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಜನರಲ್ ಮ್ಯಾನೇಜರ್ ಯಶೋಧ ಕೇಶವ್, ಮ್ಯಾನೇಜರ್ ಕ್ರಿಶನ್ ತಿಮ್ಮಯ್ಯ, ಸಹ ಸಂಪಾದಕ ಯಶೋಧರ ಕೋಟ್ಯಾನ್, ಜೈ ತುಳುನಾಡು ಸಂಘಟನೆಯ ಸಂಘಟನಾ ಪ್ರಮುಖ ಕಿರಣ್ ತುಳುವೆ, ಮತ್ತಿತರ ಗಣ್ಯರು ಉಪಸ್ಥಿತಿ ಇದ್ದರು.

ಶ್ರೀನಿಧಿ ಶೆಟ್ಟಿ ಮತ್ತು ರಕ್ಷನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರೆ ಭುವನ ದಿನೇಶ್ ಪ್ರಾಸ್ತಾವಿಕ ನುಡಿ ನುಡಿದರು, ದೀಕ್ಷಿತ ವಂದಿಸಿದರು.