ಟೈಟಾನ್ಸ್ ವೇಗಕ್ಕೆ‌ ಮಂಕಾದ ಚೆನ್ನೈ ಕಿಂಗ್ಸ್

ಅಹಮದಾಬಾದ್: ಶುಭಮನ್ ಗಿಲ್ ಅವರ ಆಕರ್ಷಕ ಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಚೆನ್ನೈ ವಿರುದ್ಧ 35 ರನ್ಗಳ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 231 ರನ್ ಗಳಿಸಿತು. ಚೆನ್ನೈ ತಂಡ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು.
ಚೆನ್ನೈ ಪರ ಅಜಿಂಕ್ಯ ರಹಾನೆ 1, ರಚಿನ್ 1, ನಾಯಕ ಋತುರಾಜ್ 0, ಡ್ಯಾರಿಲ್ ಮಿಚೆಲ್ 63, ಮೊಯಿನ್ ಅಲಿ 56, ಶಿವಂ ದುಬೆ 21, ರವೀಂದ್ರ ಜಡೇಜಾ 18, ಧೋನಿ ಅಜೇಯ 26, ಶಾರ್ದೂಲ್ 3 ರನ್ ಹೊಡೆದರು.
ಟೈಟಾನ್ಸ್ ಪರ ಮೋಹಿತ್ ಶರ್ಮಾ 31ಕ್ಕೆ 3, ರಶೀದ್ ಖಾನ್ 38ಕ್ಕೆ2, ಉಮೇಶ್ ಯಾದವ್ 20ಕ್ಕೆ 1, ಸಂದೀಪ್ 28ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಪರ ಓಪನರ್ ಸಾಯಿ ಸುದರ್ಶನ್ (103) ಹಾಗೂ ನಾಯಕ ಶುಭಮನ್ ಗಿಲ್ (104) ಅವರ ಶತಕದಿಂದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಚೆನ್ನೈ ತಂಡಕ್ಕೆ 232 ರನ್ ಗುರಿ ನೀಡಿತು. ಚೆನ್ನೈ ಬೌಲರ್ಗಳನ್ನ ಚೆಂಡಾಡಿದ ಸಾಯಿ ಸುದರ್ಶನ್ ಮತ್ತು ಶುಭಮನ್ ಮೊದಲ ವಿಕೆಟ್ಗೆ 210 ರನ್ ಸೇರಿಸಿದರು. ಈ ಇಬ್ಬರು ಬ್ಯಾಟರ್ಗಳು 50 ಎಸೆತಗಳಲ್ಲಿ ಶತಕ ಹೊಡೆದರು. ಡೇವಿಡ್ ಮಿಲ್ಲರ್ ಅಜೇಯ 16, ಶಾರುಖ್ ಖಾನ್ 2 ರನ್ ಗಳಿಸಿದರು. ಚೆನ್ನೈ ಪರ ತುಷಾರ್ ದೇಶಪಾಂಡೆ 33ಕ್ಕೆ 2 ವಿಕೆಟ್ ಪಡೆದರು.