ಟೈಟಾನ್ಸ್ ಮುಳುಗಿಸುತ್ತಾ ಡೆಲ್ಲಿ ಕ್ಯಾಪಿಟಲ್ಸ್ ?

ಅಹಮದಾಬಾದ್: ಸ್ಥಿರ ಪ್ರದರ್ಶನ ನೀಡಲು ಹೋರಾಡುತ್ತಿರುವ ಗುಜರಾತ್ ಟೈಟಾನ್ಸ್ ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಟೈಟಾನ್ಸ್ ಮತ್ತು ಡೆಲ್ಲಿ ಗೆಲುವಿಗಾಗಿ ಹೋರಾಡಲಿದೆ. ನಾಯಕ ಶುಮನ್ ಗಿಲ್ ತಂಡದ ಪರ ಅತಿ ಹೆಚ್ಚು ರನ್ ಹೊಡೆದ ಬ್ಯಾಟರ್ ಆಗಿದ್ದಾರೆ.ರಶೀದ್ ಖಾನ್ ಲಯಕ್ಕೆ ಮರಳಿದ್ದಾರೆ. ಮೊನ್ನೆ ರಾಜಸ್ಥಾನ ವಿರುದ್ಧ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು. ಟೈಟಾನ್ಸ್ 6 ಪಂದ್ಯಗಳಿಂದ 3 ಪಂದ್ಯಗಳನ್ನು ಗೆದ್ದುಕೊಂಡಿದೆ. 8 ಪಂದ್ಯಗಳು ಉಳಿದಿದ್ದು ಪ್ಲೇ ಆಫ್ಗೆ ಸುಲಭವಾಗಿ ಅರ್ಹತೆ ಪಡೆಯಲು ಅವಕಾಶವಿದೆ.
ವೇಗಿ ಮೊಹ್ಮದ್ ಶಮಿ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ. ವೇಗಿ ಉಮೇಶ್ ಯಾದವ್ 7 ವಿಕೆಟ್ ಪಡೆದಿದ್ದಾರೆ. ಸ್ಪಿನ್ನರ್ ರಶೀದ್ಖಾನ್ ಸ್ಪಿನ್ ಜಾದೂ ಮೂಲಕ ಪಂದ್ಯಕ್ಕೆ ತಿರುವು ಕೊಡುವ ತಾಕತ್ತು ಹೊಂದಿದ್ದಾರೆ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಫಾರ್ಮ್ ಮತ್ತು ಫಿಟ್ನೆಸ್ನಿಂದಾಗಿ ವೈಫಲ್ಯ ಅನುಭವಿಸುತ್ತಿದ್ದಾರೆ.
ಐದರಲ್ಲಿ ನಾಲ್ಕು ಪಂದ್ಯಗಳನ್ನು ಸೋತಿರುವ ಡೆಲ್ಲಿಗೆ ಲಕ್ನೊ ವಿರುದ್ಧದ ಗೆಲುವು ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಪ್ಲೇ ಆಫ್ ಹಾದಿ ಅಷ್ಟು ಸುಲಭವಾಗಿಲ್ಲ.ಗಾಯದ ಸಮಸ್ಯೆ ನಂತರ ಮತ್ತೆ ತಂಡಕ್ಕೆ ಮರಳಿರುವ ಕುಲ್ದೀಪ್ ಯಾದವ್ ಪ್ರದರ್ಶನ ಅಚ್ಚರಿ ನೀಡಿದೆ. ಜೇಕ್ ಚೊಚ್ಚಲ ಐಪಿಎಲ್ನಲ್ಲಿ ಯಶಸ್ಸಿ ಕಾಣುವ ಸಾಧ್ಯತೆ ಹೆಚ್ಚಿದೆ. ಕಳಪೆ ಬೌಲಿಂಗ್ ಮಾಡಿರುವ ಆನಿರಿಟ್ಚ್ ನೋಟ್ರ್ಜೆ ಕಳೆದ ಪಂದ್ಯದಲ್ಲಿ ಆಡಿಲ್ಲ. ಮುಕೇಶ್ ಕೂಡ ದುಬಾರಿ ಬೌಲರ್ ಆಗಿದ್ದಾರೆ. ನಾಯಕ ರಿಷಭ್ ತಂಡದ ದೊಡ್ಡ ಶಕ್ತಿಯಾಗಿದ್ದಾರೆ.