ಟೈಟಾನ್ಸ್ ಮುಳುಗಿಸಿದ ಡೆಲ್ಲಿ

ಅಹಮದಾಬಾದ್:ಯುವ ವೇಗಿ ಮುಕೇಶ್ ಕುಮಾರ್ ಮತ್ತು ರಿಷಭ್ ಪಂತ್ ಅವರ ಅಮೋಘ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ಗುಜರಾತ್ ಟೈಟಾನ್ಸ್ ವಿರುದ್ಧ 6 ವಿಕೆಟ್ ಗಳ ಗೆಲುವು ದಾಖಲಿಸಿದೆ.
ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್
17.3 ಓವರ್ಗಳಲ್ಲಿ ಕೇವಲ 89 ರನ್ ಗಳಿಗೆ ಆಲೌಟ್ ಆಯಿತು. ಡೆಲ್ಲಿ ಕ್ಯಾಪಿಟಲ್ಸ್ 8.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 92 ರನ್ ಕಲೆಹಾಕಿತು.
90 ರನ್ಗಳ ಸುಲಭ ಗುರಿ ಬೆನ್ನತ್ತಿದ ಡೆಲ್ಲಿ ಪೃಥ್ವಿ ಶಾ (7ರನ್) ಮತ್ತು ಜೇಕ್ ಫ್ರೇಸರ್ (20ರನ್) ಮೊದಲ ವಿಕೆಟ್ಗೆ 25 ರನ್ ಸೇರಿಸಿದರು. ನಂತರ ಬಂದ ಅಭಿಷೇಕ್ ಪೊರೆಲ್ 15, ಶಾಯ್ ಹೋಪ್ 19, ನಾಯಕ ರಿಷಭ್ ಪಂತ್ 16, ಮತ್ತು ಸುಮಿತ್ ಕುಮಾರ್ ಅಜೇಯ 9 ರನ್ ಗಳಿಸಿದರು. ಟೈಟಾನ್ಸ್ ಪರ ಸಂದೀಪ್ ವಾರಿಯರ್ 40ಕ್ಕೆ 2, ಜಾನ್ಸನ್ 22 ಕ್ಕೆ 1, ರಶೀದ್ ಖಾನ್ 12ಕ್ಕೆ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ಪರ ವೃದ್ಧಿಮಾನ್ ಸಾಹಾ 2,ಶುಭಮನ್ ಗಿಲ್ 8, ಸಾಯಿ ಸುದರ್ಶನ್ 12, ಡೇವಿಡ್ ಮಿಲ್ಲರ್ 2, ರಾಹುಲ್ ತೆವಾಟಿಯಾ 10, ರಶೀದ್ ಖಾನ್ 31 ರನ್ ಗಳಿಸಿದರು.
ಡೆಲ್ಲಿ ಪರ ಮುಕೇಶ್ ಕುಮಾರ್ 14ಕ್ಕೆ 3, ಇಶಾಂತ್ ಶರ್ಮಾ 8ಕ್ಕೆ 2, ಸ್ಟಬ್ಸ್ 11ಕ್ಕೆ 2 , ಅಕ್ಷರ್ ಪಟೇಲ್ 17ಕ್ಕೆ 1 ವಿಕೆಟ್ ಪಡೆದರು.