ಟೈಟಾನ್ಸ್ ಮುಳುಗಿಸಿದ ಆರ್ಸಿಬಿ

ಅಹಮದಾಬಾದ್ : ವಿಲ್ ಜಾಕ್ಸ್ ಅವರ ಅಮೋಘ ಶತಕ ಹಾಗೂ ವಿರಾಟ್ ಕೊಹ್ಲಿ ಅವರ ಅರ್ಧ ಶತಕದ ನೆರವಿನಿಂದ ಆರ್ಸಬಿ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 9 ವಿಕೆಟ್ಗಳ ಗೆಲುವು
ದಾಖಲಿಸಿದೆ. ಟೂರ್ನಿಯಲ್ಲಿ ಬೆಂಗಳೂರು ತಂಡ ಸತತ 2ನೇ ಗೆಲುವು ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ಆರ್ಸಿಬಿ 16 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು.
ಗುಜರಾತ್ ಪರ ಸಾಹಾ 5, ಶುಭಮನ್ 16, ಸಾಯಿ ಸುದರ್ಶನ್ 84, ಶಾರುಖ್ ಖಾನ್ 58, ಮಿಲ್ಲರ್ 26 ರನ್ ಹೊಡೆದರು.
ಆರ್ಸಿಬಿ ಪರ ಸ್ವಪ್ನಿಲ್,ಸಿರಾಜ್ ಮತ್ತು ಮ್ಯಾಕ್ಸ್ ವೆಲ್ ತಲಾ 1 ವಿಕೆಟ್ ಪಡೆದರು.
ಆರ್ಸಿಬಿ ಪರ ವಿರಾಟ್ ಕೊಹ್ಲಿ ಅಜೇಯ 70, ಫಾಫ್ ಡುಪ್ಲೆಸಿಸ್ 24, ವಿಲ್ ಜಾಕ್ಸ್ 100 ರನ್ ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.
ವಿಲ್ ಜಾಕ್ಸ್ 41 ಎಸೆತದಲ್ಲಿ ಶತಕ ಹೊಡೆದರು.