ಟೇಲರ್ಸ್ ಕಲ್ಯಾಣಮಂಡಳಿ ಸ್ಥಾಪನೆಗೆ ಆಗ್ರಹ

ಕಲಬುರಗಿ ನ 9: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ಟೇಲರ್ಸ್ ಕಲ್ಯಾಣಮಂಡಳಿ ಸ್ಥಾಪನೆಗೆ ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಟೇಲರ್ಸ್ ಮತ್ತು ಸಹಾಯಕರ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಪ್ರತಿಭಟನಾ ಪ್ರದರ್ಶನ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಸುಮಾರು 20 ಲಕ್ಷದಷ್ಟು ಟೇಲರುಗಳು ವೃತ್ತಿಯಲ್ಲಿದ್ದು ,ಬಹುಪಾಲು ಮಹಿಳೆಯರು ಈ ವೃತ್ತಿಯಲ್ಲಿದ್ದಾರೆ. ಇದು ಅಸಂಘಟಿತ ವಲಯವಾಗಿದ್ದು, ಸಂಕಷ್ಟದಲ್ಲಿರುವ ಟೇಲರುಗಳ ಹಿತಾಸಕ್ತಿ ಕಾಪಾಡಲು ಕಲ್ಯಾಣಮಂಡಳಿ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಪ್ರಭುದೇವ ಯಳಸಂಗಿ,ಹಣಮಂತ ಅಟ್ಟೂರ,ಕಲ್ಯಾಣಿ ತುಕ್ಕಾಣಿ,ಅನಿತಾಬಾಯಿ ಭಕರೆ,ಶಿವಲಿಂಗಮ್ಮ ಲೇಂಗಟಿಕರ್,ಜಗದೇವಿ ಹೆಗಡೆ,ಮೀನಾಕ್ಷಿ ವಿನೋದಕುಮಾರ, ಸಾವಿತ್ರಿ ವಾಡೇಕರ್, ಸುನೀತಾ ರಾಠೋಡ ಸೇರಿದಂತೆ ಅನೇಕರು ಪಲ್ಗೊಂಡರು.