ಟೇಕ್ವಾಂಡೋ ಗರ್ಲ್ಬಿ ಡುಗಡೆ ಸಿದ್ದತೆ

ಸಮರ ಕಲೆಯ ಸುತ್ತ ಸಾಗುವ ಕಥೆಯನ್ನು ಮುಂದಿಟ್ಟುಕೊಂಡು ನಿರ್ದೇಶಕ ರವೀಂದ್ರ ವಂಶಿ “ಟೇಕ್ವಾಂಡೋ ಗರ್ಲ್”  ಚಿತ್ರವನ್ನು ತೆರೆಗೆ ಕಟ್ಟಿಕೊಡಲು ಮುಂದಾಗಿದ್ದಾರೆ.

ನಾಲ್ಕು ಬಾರಿ ಅಂತರಾಷ್ಟ್ರೀಯ ಚಾಂಪಿಯನ್ ಶಿಪ್‍ಗಳಲ್ಲಿ ಭಾಗವಹಿಸಿ ಬ್ಲಾಕ್ ಬೆಲ್ಟ್ ಪಡೆದ ಬಾಲೆ ಋತು ವರ್ಷ ಈ ಚಿತ್ರದ ಮೂಲಕ ತಾನು ಕಲಿತ ವಿದ್ಯೆಯನ್ನು ಎಲ್ಲರೆದುರು ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಚಿತ್ರದ ಹಾಡುಗಳು ಮತ್ತು ಟ್ರೈಲರ್ ಅನ್ನು ಹಿರಿಯ ಕಲಾವಿದ ಗಣೇಶ್ ರಾವ್ ಕೇಸರ್ ಕರ್ ಬಿಡುಗಡೆ ಮಾಡಿದರು. ಈ ವೇಳೆ ಮಾತಿಗಿಳಿದ ನಿರ್ದೇಶಕ ರವೀಂದ್ರ ವಂಶಿ,ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಮೇಲೆ ನಿತ್ಯ  ಕೃತ್ಯಗಳು ನಡೆಯುತ್ತಲೇ ಇವೆ. ಹೆಣ್ಣು ತನ್ನನ್ನು  ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ “ಟೇಕ್ವಾಂಡೋ ಗರ್ಲ್” ತಯಾರಾಗಿದೆ.

ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ  ಪಡುವ ಕಷ್ಟದ ನಡುವೆ ಟೇಕ್ವಾಂಡೋ ಸಮರ ಕಲೆ ಹೇಗೆ ಕಲಿಯುತ್ತಾಳೆ, ಈ ವಿದ್ಯೆ ಮೂಲಕ ಸಮಾಜಕ್ಕೆ ಹೇಗೆ ಮಾದರಿ ಆಗುತ್ತಾಳೆ ಎನ್ನುವುದೇ ಕಥೆಯ ಎಳೆ ಎನ್ನುವ ಮಾಹಿತಿ ಹಂಚಿಕೊಂಡರು.

ಬಾಳ ಕಲಾವಿದೆ ಋತು ವರ್ಷ ಸಾಧನೆಗೆ ತಾಯಿ ಡಾ,, ಸುಮೀತಾ ಪ್ರವೀಣ್ ಪ್ರೇರಣೆಯಾದವರು,ಈ ಕಲೆ ಮಗಳಿಗಷ್ಟೇ ಸೀಮಿತವಾಗಬಾರದು ಎನ್ನುವ ಉದ್ದೇಶದಿಂದ ಚಿತ್ರದ ಮೂಲಕ ತೋರಿಸಲು ಮುಂದಾಗಿದ್ದಾರೆ.ಅದಕ್ಕೆ ಪತಿ ಪ್ರವೀಣ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಸುಮಾರು ಇನ್ನೂರು ಟೇಕ್ವಾಂಡೋ ವಿಧ್ಯಾರ್ಥಿಗಳು ಅಭಿನಯಿಸಿದ್ದಾರೆ. ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೇ ತಿಂಗಳು ಚಿತ್ರ ತೆರೆಗೆ ಬರುವ ಸಾದ್ಯತೆಗಳಿವೆ.