ಟೇಕ್ವಾಂಡೋ ಕ್ರೀಡಾಕೂಟಕ್ಕೆ ಆಯ್ಕೆ

    

ಧಾರವಾಡ ಮಾ.20:ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಟೇಕ್ವಾಂಡೋ ಕ್ರೀಡಾಕೂಟ-2020-21 ಪದವಿ ಪೂರ್ವ ಶಿಕ್ಷಣ ಇಲಾಖೆ, ಧಾರವಾಡ ಹಾಗೂ ಹುಬ್ಬಳ್ಳಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ವಾಣಿಜ್ಯ ಮಹಾವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದಿದೆ.
ಪುರುಷರ ವಿಭಾಗದಲ್ಲಿ ನಮ್ಮ ಸಂಸ್ಥೆಯ ವಿಧ್ಯಾರ್ಥಿಗಳಾದ ನಿಖಿಲ ಬಳ್ಳಾರಿ, (ಶ್ರೀ ಸಾಯಿ ಎಜ್ಯುಕೇಶನ್ ಟ್ರಸ್ಟ್, ಧಾರವಾಡ ವಿಭಾಗ 45 ಕೆಜಿ), ನಿಖಿಲ ನಂದಿಗಟ್ಟಿ (ಶ್ರೀ ಸಾಯಿ ಎಜ್ಯುಕೇಶನ್ ಟ್ರಸ್ಟ್, ಧಾರವಾಡ ವಿಭಾಗ 48 ಕೆಜಿ), ಅನುಷಾ ಶೆಟ್ಟರ (ಕ್ಲಾಸಿಕ್ ಇಂಟರ್‍ನ್ಯಾಷನಲ್ ಧಾರವಾಡ, ವಿಭಾಗ 59 ಕೆ.ಜಿ), ಸಾಯಿರಾಜ್ ಬಾಳ್ಳಿಕರ ಶ್ರೀ ಸಾಯಿ ಎಜ್ಯುಕೇಶನ್ ಟ್ರಸ್ಟ್, ಧಾರವಾಡ ವಿಭಾಗ 68 ಕೆಜಿ), ನಿರಂಜನ ಆನಿಕಿವಿ (ಜೆ.ಎಸ್.ಎಸ್. ಎಸ್.ಎಮ್.ಪಿ.ಯು. ಕಾಲೇಜ್ ಧಾರವಾಡ ವಿಭಾಗ 73 ಕೆ.ಜಿ), ದಿತೀಶ ಶೆಟ್ಟಿ (ಜೆ.ಎಸ್.ಎಸ್. ಆರ್.ಎಸ್.ಎಚ್. ಕಾಲೇಜ್, ಧಾರವಾಡ ವಿಭಾಗ 78 ಕೆಜಿ), ಶಿವಶಂಕರ ಪಳೋಟಿ (ಜೆ.ಎಸ್.ಎಸ್. ಎಸ್.ಎಮ್.ಪಿ.ಯು. ಕಾಲೇಜ್ ಧಾರವಾಡ ವಿಭಾಗ ಓವರ್ 78 ಕೆ.ಜಿ) ಹಾಗೂ ಮಹಿಳೆಯರ ವಿಭಾಗದಲ್ಲಿ ಜಬೀನಾ ಜಾಗೀರದಾರ (ವೈ.ಬಿ. ಅಣ್ಣಗೇರಿ ಕಾಲೇಜ್, ಧಾರವಾಡ ವಿಭಾಗ 40 ಕೆ.ಜಿ), ಸ್ಫೂರ್ತಿ ನಿಕ್ಕಂ (ಜೆ.ಎಸ್.ಎಸ್. ಎಸ್.ಎಮ್.ಪಿ.ಯು. ಕಾಲೇಜ್ ಧಾರವಾಡ ವಿಭಾಗ 42 ಕೆ.ಜಿ), ಕೃಪಾ ಸುಂಕದ (ಕರ್ನಾಟಕ ಕಾಲೇಜ್ ಧಾರವಾq ವಿಭಾಗ 49 ಕೆಜಿ), ಸಿರಿ ನಂದಿಹಳ್ಳಿ (ವಿದ್ಯಾನಿಕೇತನ ಕಾಲೇಜ್ ಹುಬ್ಬಳ್ಳಿ, ವಿಭಾಗ 59 ಕೆ.ಜಿ), ಲಾವಣ್ಯಲತಾ ಕುಂಬಾರ (ಐ.ಸಿ.ಎಸ್. ಮಹೇಶ ಪಿಯು ಕಾಲೇಜ್ ಧಾರವಾಡ ವಿಭಾಗ 68 ಕೆ.ಜಿ), ಶ್ರೇಯಾ ಕೌಡಿ (ನಿಡವಣಿ ಕಾಲೇಜ್, ಧಾರವಾಡ, ವಿಭಾಗ ಓವರ 68 ಕೆ.ಜಿ) ಇವರುಗಳು ಬಂಗಾರದ ಪದಕ ಪಡೆದು, ರಾಜ್ಯಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಟೇಕ್ವಾಂಡೋ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಾಧನೆಯನ್ನು ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷರಾದ ಆನಂದ ಕುಲಕರ್ಣಿ, ಉಪಾಧ್ಯಕ್ಷರಾದ ಬಿ.ಎಸ್.ತಾಳಿಕೋಟಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸೈಕ್ಲಿಂಗ್ ತರಬೇತುದಾರರಾದ ರೇಣುಕಾ ವಾಡಕರ, ಹಿರಿಯ ತರಬೇತುದಾರರಾದ ಪರಪ್ಪ ಎಸ್.ಕೆ., ಜಿಲ್ಲಾ ಕಾರ್ಯದರ್ಶಿ ಹಾಗೂ ತರಬೇತುದಾರರಾದ ಅಂಜಲಿ ಪರಪ್ಪ, ಸಹಾಯಕ ತರಬೇತುದಾರರಾದ, ಆನಂದ ಕಿಟದಾಳ, ಪೋಷಕರು ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.