ಟೇಂಗಳಿಯಲ್ಲಿ ಸನ್ಮಾನ ಸಮಾರಂಭ

ಕಲಬುರಗಿ:ಎ.25:ಇತ್ತೀಚೆಗೆ ಕಾಳಗಿ ತಾಲೂಕಿನ ಟೇಂಗಳಿ ಗ್ರಾಮದಲ್ಲಿ ಟೇಂಗಳಿಯಲ್ಲಿ ಅಂಡಗಿ ಪ್ರತಿಷ್ಠಾನ ಉದ್ಘಾಟನೆ ಹಾಗು ಧಾರ್ಮಿಕ ಸೇವೆ ಸಲ್ಲಿಸುತ್ತಿರುವ 12 ಕಾರ್ತಿಕ ಸೇವಾ ಭಕ್ತರಿಗೆ ಅಂಡಗಿ ಪ್ರತಿಷ್ಠಾನ ಹಮ್ಮಿಕೊಂಡ ಸನ್ಮಾನ ಸಮಾರಂಭದ ನಂತರ ಶಾಂತೇಶ್ವರ ಮಠದ ಪೂಜ್ಯರಾದ ಡಾ. ಶಾಂತನೋಮನಾಥ ಶಿವಾಚಾರ್ಯರು ಅಂಡಗಿ ಪ್ರತಿಷ್ಠಾನದ ಧಾರ್ಮಿಕ ಸೇವೆ ನಾಡಿನಾದ್ಯಂತ ಪಸರಿಸಲೆಂದು ಅಧ್ಯಕ್ಷರಾದ ಶಿವರಾಜ ಅಂಡಗಿ ಹಾಗು ಭೀಮೇಶ್ವರ ಕಮಿಟಿ ಅಧ್ಯಕ್ಷರಾದ ವಿರೇಶ ವಾಲಿ, ಹಾಗು ಹಿರಿಯರಾದ ಸೋಮಶೇಖರ ಪಟ್ಟೇದ ಅವರಿಗೆ ಶ್ರೀಮಠದಿಂದ ಸನ್ಮಾನಿಸಲಾಯಿತು. ಡಾ. ಶಾಂತಸೋಮನಾಥ ಶಿವಾಚಾರ್ಯರು, ಶಿವರಾಜ ಅಂಡಗಿ, ಸೋಮಶೇಖರ ಪಟ್ಟೇದ, ವಿಶ್ವನಾಥ ಬಾಳದೆ, ಭೀಮಾಶಂಕರ ಅಂಕಲಗಿ, ಗುಂಡಪ್ಪ ಪಟ್ಟೇದ, ವಿವೇಕಾನಂದ ಬುಳ್ಳಾ, ರಾಜು ಪಟ್ಟೇದ ಹಾಗು ಗ್ರಾಮದ ಹಿರಿಯರು ಉಪಸ್ಥಿತರಿದ್ದರು.