ಟೆಸ್ಟನಲ್ಲಿ ಫೇಲ್ : ಕಾಣೆಯಾದ ವಿದ್ಯಾರ್ಥಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜು. 23 :- ಶಾಲೆಯ  ಟೆಸ್ಟ್ ನಲ್ಲಿ ಫೇಲಾಗುವ ಅಂಕ ತೆಗೆದಕಾರಣ ಶಾಲೆಯ ಶಿಕ್ಷಕರು ಪಾಲಕರು ಬರುವಂತೆ ತಿಳಿಸಿದ್ದು ಶಾಲೆಯಿಂದ ಮನೆಗೆ ಬಂದು ಹೊರಹೋದ 10ನೇ ತರಗತಿ ವಿದ್ಯಾರ್ಥಿಯೋರ್ವ ಕೂಡ್ಲಿಗಿ ಬಸ್ ನಿಲ್ದಾಣದಿಂದ ಕಳೆದೆರಡು ದಿನದಿಂದ ಕಾಣೆಯಾಗಿದ್ದು ಹುಡುಕಿಕೊಡುವಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಪ್ರಕರಣ ದಾಖಲಾಗಿದೆ.
ಕೂಡ್ಲಿಗಿ ಪಟ್ಟಣದ ಬಾಪೂಜಿನಗರದ ವಾಸಿಯಾಗಿರುವ ಟಿ. ರುದ್ರೇಶ (15) ಕಾಣೆಯಾಗಿರುವ ವಿದ್ಯಾರ್ಥಿಯಾಗಿದ್ದು ಈತನು ಸಂಡೂರಿನ ಬಿಕೆಜಿ ಶಿಕ್ಷಣ ಸಂಸ್ಥೆಯಲ್ಲಿ 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು ದಿನಾಲೂ ಕೂಡ್ಲಿಗಿಯಿಂದ ಸಂಡೂರಿಗೆ ಬಸ್ಸಿನಲ್ಲಿ ಹೋಗಿಬರುತ್ತಿದ್ದಾನೆ ಗುರುವಾರದಂದು ಟೆಸ್ಟ್ ನಲ್ಲಿ ಫೇಲಾಗುವ ಅಂಕ ತೆಗೆದುಕೊಂಡಿದ್ದಾನೆ ಎಂದು ಅಂದು ಸಂಜೆ ವಿದ್ಯಾರ್ಥಿಯ ಮಾವನಾದ  ಕಾಂಟ್ರ್ಯಾಕ್ಟ್ ವೆಂಕಟೇಶನಿಗೆ ಫೋನ್ ಕರೆ ಮೂಲಕ ಸೋಮವಾರ ಮೀಟಿಂಗ್ ಗೆ ಬರಲು ತಿಳಿಸಿದ್ದಾರೆ. ದಿನನಿತ್ಯ ಶಾಲೆಯಿಂದ ಕೂಡ್ಲಿಗಿ ಬಂದ ರುದ್ರೇಶ ಮನೆಯಲ್ಲಿ ಚೀಲ ಇಟ್ಟು ಹೊರಗಡೆ ಹೋದವ ಮತ್ತೆ ಮನೆಗೆ ಬಾರದೆ ಕೊನೆಯದಾಗಿ ಕೂಡ್ಲಿಗಿ ಬಸ್ ನಿಲ್ದಾಣದಿಂದ ಕಾಣೆಯಾಗಿದ್ದು ಸಂಬಂದಿಕರು, ಸ್ನೇಹಿತರು ಬಂಧುಗಳನ್ನು ವಿಚಾರಿಸಿದರು ಸುಳಿವು ಸಿಗದೇ ಇದ್ದುದರಿಂದ  ವಿದ್ಯಾರ್ಥಿ ಕಾಣೆಯಾದ ಬಗ್ಗೆ ಈತನ ಮಾವ ಶುಕ್ರವಾರ ರಾತ್ರಿ ದೂರು ನೀಡಿದಂತೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರಲ್ಲಿ ಪೊಲೀಸರ ಮನವಿ :  10 ನೇ ತರಗತಿ ಓದುತ್ತಿರುವ 15 ವರ್ಷದ ವಿದ್ಯಾರ್ಥಿ ಬಾಲಕ ಕೂಡ್ಲಿಗಿ ರುದ್ರೇಶ ಕಾಣೆಯಾಗುತ್ತಿರುವ ಸಂದರ್ಭದಲ್ಲಿ ನೀಲಿಬಣ್ಣದ ಟೀ ಶರ್ಟ್ ಹಾಗೂ ಗ್ರೀನ್ ಕಲರ್ ಪ್ಯಾಂಟ್ ಧರಿಸಿದ್ದು ದುಂಡುಮುಖದ ಚಹರೆಯುಳ್ಳ ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮಾತನಾಡುವ ಈ ಹುಡುಗ ಎಲ್ಲಿಯಾದರೂ ಸಾರ್ವಜನಿಕರಿಗೆ ಕಂಡಲ್ಲಿ ತಕ್ಷಣ ವಿಜಯನಗರ ಎಸ್ಪಿ – 9480805701, ಕೂಡ್ಲಿಗಿ ಡಿವೈಎಸ್ ಪಿ – 9480805721,  ಕೂಡ್ಲಿಗಿ ಸಿಪಿಐ – 9480805747  ಅಥವಾ ಕೂಡ್ಲಿಗಿ ಪಿಎಸ್ಐ -9480805766 ಗೆ ಕರೆ ಮಾಡಿ ತಿಳಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.